Sunday, August 31, 2025

 ಕಥೆ-850                        

ಸಾರ್ಥಕ ಬದುಕಿನ ದಾರಿ  


https://basapurs.blogspot.com


ಈ ಪ್ರಪಂಚದಲ್ಲಿ ನಾವು ಕಣ್ಣುಮುಚ್ಚಿ ನಡೆಯುವುದಿಲ್ಲ. ಹೊರಗಣ್ಣನ್ನು ತೆರೆದು ಸೃಷ್ಟಿ ಸೊಬಗನ್ನು ನೋಡುವುದಿಲ್ಲ. ಒಳಗಣ್ಣನ್ನು ತೆರೆದು ನಮ್ಮ ಅಂತರಂಗ ಅರಿಯುವುದಿಲ್ಲ.. ಬರೀ ಬಾಹ್ಯ ಸಿರಿಯ ಸಂಗ್ರಹದಲ್ಲಿ ತೊಡಗಿದರೆ ಜೀವನವು ನಿರರ್ಥಕವಾಗುತ್ತದೆ. ಈ ಕ್ಷ ಣವು ಸುಂದರವಾದರೆ, ಸವಿಯಾದರೆ ಮುಂದಿನ ಕ್ಷಣವೂ ಸುಂದರವಾಗುತ್ತದೆ, ಸವಿಯಾಗುತ್ತದೆ. ಅಷ್ಟೇ ಏಕೆ ಒಂದೊಂದು ಕ್ಷಣವನ್ನೂ ನಾವು ಸವಿಗೊಳಿಸುತ್ತ ಸಾಗಿದರೆ ಜೀವನವೇ ಜೇನಾಗುತ್ತದೆ. ಈ ಕ್ಷಣ ಮೈ ಮರೆತರೆ ಜೀವನವೇ ನೀರಸವಾಗುತ್ತದೆ. ಕಳೆದು ಹೋದ ಒಂದು ಕ್ಷಣವೂ ಮರಳಿ ಬರುವುದಿಲ್ಲ.


ಮನೆ-ಮಠ, ಧನ-ಕನಕ, ಮಳೆ-ಬೆಳೆ, ಗಾಳಿ-ಬೆಳಕು ಇವು ಹೊರಗಿನ ಸಿರಿ. ಶಾಂತಿ-ಸಮಾಧಾನ, ದಯೆ-ಧರ್ಮ, ತ್ಯಾಗ-ಸೇವೆ, ಮೌನ-ಧ್ಯಾನ ಇವು ನಮ್ಮೊಳಗಿನ ಸಿರಿ. ಹೊರಗಿನ ಸಿರಿ ನೋಡುವುದಕ್ಕೆ ಹೊರಗಣ್ಣು ತೆರೆಯಬೇಕಿದೆ.. ಒಳಗಿನ ಸಿರಿ ಅನುಭವಿಸುವುದಕ್ಕೆ ಒಳಗಣ್ಣು ಅಥವಾ ಮನಸ್ಸಿನ ಕಣ್ಣು ತೆರೆದಿರಲಿ. ಅಂತರಂಗ-ಬಹಿರಂಗ ಎರಡೂ ಅವುಗಳನ್ನು ಅನುಭವಿಸಲು, ಆನಂದಿಸಲು ನಾವು ಈ ಲೋಕಕ್ಕೆ ಬಂದೆವು ಎಂದುಕೊಳ್ಳಬೇಕು. ಅದನ್ನು ಮರೆತು ನಾವು ಬರೀ ಧನ, ಕನಕಾದಿಗಳ ಸಂಗ್ರಹದಲ್ಲೇ ತೊಡಗಿದರೆ ಕಣ್ಣು ಮುಚ್ಚಿ ಕತ್ತಲಲ್ಲಿ ಕುಳಿತು ಈ ಪ್ರಪಂಚದಲ್ಲಿ ಬೆಳಕೇ ಇಲ್ಲವೆಂದಂತಾಗುತ್ತದೆ.


ಒಬ್ಬ ಸಿರಿವಂತ, ಅವನದೊಂದು ಹೂದೋಟ. ಅದನ್ನು ನೋಡಿಕೊಳ್ಳಲು ಒಬ್ಬ ಮಾಲಿಯನ್ನು ನಿಯಮಿಸಿದ್ದ. ಬಗೆ ಬಗೆಯ ಹೂವುಗಳನ್ನು ಬೆಳೆಸಿ ಮಾಲಿಯು ತೋಟವನ್ನು ನಂದನವನ ಮಾಡಿದ್ದ. ಅದನ್ನು ನೋಡಲು ಸಿರಿವಂತನಿಗೆ ಅನೇಕ ಸಲ ವಿನಂತಿಸಿದ್ದ. ಸಿರಿವಂತನು ಮಾತ್ರ ನನಗೆ ಸಮಯವಿಲ್ಲ ಎಂದು ಹೇಳುತ್ತಿದ್ದ. ಒಂದೇ ಒಂದು ದಿನ ತೋಟಕ್ಕೆ ಬರಲಿಲ್ಲ, ಹೂವುಗಳನ್ನು ನೋಡಲಿಲ್ಲ. ಕೊನೆಗೆ ಒಂದು ದಿನ ಮಾಲಿಯು 'ನಾನು ಕೇವಲ ಈ ತೋಟವನ್ನು ಕಾಯಲು ಬಂದವನಲ್ಲ.' ಎಂದು ಹೇಳಿ ಆ ಹೂದೋಟದ ಕೀಲಿ ಸಿರಿವಂತನ ಕೈಗೆ ಕೊಟ್ಟು ಹೊರಟು ಹೋದ. ಮರುದಿನವೇ ಸಿರಿವಂತನು ಹೂದೋಟಕ್ಕೆ ಹೋದ. ತನ್ನ ಕಣ್ಣುಗಳನ್ನು ತಾನೇ ನಂಬಲಿಲ್ಲ. ಅಲ್ಲಿ ಒಂದು ಪುಟ್ಟ ಸ್ವರ್ಗವನ್ನೇ ಸೃಷ್ಟಿಮಾಡಿದ್ದ ಮಾಲಿ. ಅದನ್ನು ನೋಡಿದ ಸಿರಿವಂತ ಇಂದು ನನ್ನ ಬದುಕು ಸಾರ್ಥಕವಾಯಿತು! ಎಂದು ಹೇಳಿ ಶಾಶ್ವತವಾಗಿ ಸ್ವರ್ಗದಲ್ಲಿ ನೆಲೆಸಿದ. ಇಲ್ಲದೆ ಮಾಲಿಯನ್ನು ಸಹ ಕರೆ ತಂದ..


ನಮ್ಮ ಬದುಕೇ ಒಂದು ಹೂದೋಟ! ಮರಣದ ಕರೆ ಬರುವ ಮೊದಲೇ ನಾವು ಸೃಷ್ಟಿಯ ಈ ಹೂದೋಟವನ್ನು ಅನುಭವಿಸಿ ಆನಂದಿಸಿದರೆ ಮಾತ್ರ ನಮ್ಮ ಬದುಕು ಸಾರ್ಥಕ.


ನಮ್ಮ ಋುಷಿಮುನಿಗಳು, ಸಂತರು-ಶರಣರು ಬಹಿರಂಗದ ಸಿರಿಸಂಪದ ಅಷ್ಟಾಗಿ ಗಳಿಸಿದವರಲ್ಲ. ಆದರೆ ಅವರಷ್ಟು ಅಂತರಂಗದ ಸಿರಿಯನ್ನು ಗಳಿಸಿದವರು ಯಾರೂ ಇಲ್ಲ. ಇದನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.


ಮನೆ ನೋಡಾ, ಬಡವರು; ಮನ ನೋಡಾ ಸಂಪನ್ನರು!


ಧನ ನೋಡಾ, ಬಡವರು; ಘನಮನ ಸಂಪನ್ನರು.


ಕೂಡಲಸಂಗನ ಶರಣರು ಕರುಳಿಲ್ಲದ ಕಲಿಗಳು

ಆರಿಗೂ ಉಪಮಿಸಬಾರದು.


ಕರಳು ಎಂದರೆ ಆಶೆ, ಮೋಹ. ಕಲಿಗಳೆಂದರೆ ವೀರರು, ಶರಣರು. ಆಶೆಯನ್ನೇ ಗೆದ್ದ ನಿಜವಾದ ವೀರರು. 


ಕೃಪೆ :ಅಂತರ್ಜಾಲ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು