ಕಥೆ-872
ಇಂಜಿನಿಯರ ದಿನದ ಶುಭಾಶಯಗಳು
ಸರ್ ಎಂ ವಿಶ್ವೇಶ್ವರಯ್ಯ ... ಕರುನಾಡಿನ ಹೆಮ್ಮಯ ಪುತ್ರ. ನಮ್ಮ ನೆಲದ ಸಾಕ್ಷಿಪ್ರಜ್ಞೆ. ಭಾರತದ ಕಂಡ ಅಪ್ರತಿಮ ಇಂಜಿನಿಯರ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 ಸೆಪ್ಟೆಂಬರ್ 15ರಂದು ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆ ಈ ಸೂರ್ಯಚಂದ್ರರಿರುವ ತನಕ ಶಾಶ್ವತ. ಈ ರಾಷ್ಟ್ರಕ್ಕೆ ಸರ್ ಎಂ ವಿ ನೀಡಿದ ಕೊಡುಗೆ ಅಪೂರ್ವ. ಇದೇ ಕಾರಣಕ್ಕೆ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟಂಬರ್ 15ರಂದು ಪ್ರತಿವರ್ಷ ಭಾರತದಲ್ಲಿ `ಇಂಜಿನಿಯರ್‌ಗಳ ದಿನ' ಎಂದು ಕರುನಾಡ ಜೀವನದಿ ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು. ಮೈಸೂರು ಸ್ಯಾಂಡಲ್ ಸೋಪ್, ಜೋಗದ ಶರಾವತಿ ವಿದ್ಯುತ್ ಯೋಜನೆ, ಭದ್ರವತಿ ಉಕ್ಕಿನ ಕಾರ್ಖಾನೆ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದೇ ಇದೆ. ಇವರ ಈ ದೂರದರ್ಶಿತ್ವದ ನಡೆಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಸರ್ ಎಂ ವಿಶ್ವೇಶ್ವರಯ್ಯನವರ ಸಾಧನೆಗೆ `ಭಾರತರತ್ನ' ಎಂಬ ಶ್ರೇಷ್ಠ ಗೌರವದೊಂದಿಗೆ ಅನೇಕ ಪ್ರಶಸ್ತಿ, ಗೌರವಗಳು ಇವರ ಮುಕುಟಕ್ಕೇರಿದೆ. ಒಂದು ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರವೂ ಹಿರಿದು. ಹೀಗಾಗಿ, ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಮತ್ತು ಆರ್ಥಿಕವಾಗಿ ಸದೃಢವನ್ನಾಗಿಸಲು ನೆರವಾಗುವ ಎಂಜಿನಿಯರ್‌ಗಳ ಸೇವೆಯನ್ನು ಸ್ಮರಿಸುವ, ತನ್ಮೂಲಕ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ `ಇಂಜಿನಿಯರ್‌ಗಳ ದಿನ'ವನ್ನು ಆಚರಿಸಲಾಗುತ್ತದೆ. ಸೃಜನಶೀಲ, ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ವಿಜ್ಞಾನವನ್ನು ಸಮರ್ಥವಾಗಿ ಬಳಸುವುದೇ ಇಂಜಿನಿಯರಿಂಗ್. ಪರಿಶ್ರಮ, ದೃಢ ನಿರ್ಧಾರದಿಂದ, ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಗೆ ದುಡಿಯುವ ಎಲ್ಲಾ ಇಂಜಿನಿಯರ್‌ಗಳಿಗೂ ಇಂಜಿನಿಯರ್ಸ್ ದಿನದ ಶುಭಾಶಯಗಳು
ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವನವನ್ನು ರೂಪಿಸಲು ಸಾಧ್ಯವಿಲ್ಲ. ನಿಮ್ಮ ಯಶಸ್ಸು ಮತ್ತು ಸಂತೋಷ ನಿಮ್ಮ ಸ್ವಂತಿಕೆಯನ್ನು ಅವಲಂಬಿಸಿರುತ್ತದೆ. ನಿಮ್ಮ ಜೀವನದ ಬಗ್ಗೆ ನೀವು ಯೋಚಿಸಿ ಮತ್ತು ಯೋಜನೆಯನ್ನು ರೂಪಿಸಿ.
- ಸರ್ ಎಂ ವಿಶ್ವೇಶ್ವರಯ್ಯ
ಹೆಚ್ಚಿನ ಜ್ಞಾನ ಅಥವಾ ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಸಾಮಾನ್ಯವಾಗಿ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ.
- ಸರ್ ಎಂ ವಿಶ್ವೇಶ್ವರಯ್ಯ
ಕೃಪೆ ವಿಜಯ ಕರ್ನಾಟಕ
No comments:
Post a Comment