Thursday, September 18, 2025

 ಕಥೆ-877

ಕೇವಲ ಅತಿಯಾಶೆ ಮಾಡಿದರೆ ಗತಿಗೆಡದೆ ಇರದು.

https://basapurs.blogspot.com


 ಒಂದೂರಲ್ಲಿ ಓರ್ವ ತಾಯಿ, ಅವಳಿಗೊಬ್ಬ ಮಗ. ಆ ಮಗುವಿನ ತಂದೆ ಇರಲಿಲ್ಲ. ತಾಯಿಯೇ ಮಗನಿಗೆ ತಂದೆಯಾಗಿ, ಗುರುವಾಗಿ ಬದುಕಲಿಕ್ಕೆ ಬೇಕಾದ ಒಳ್ಳೆಯ ಸಂಸ್ಕಾರವನ್ನೆಲ್ಲ ಕೊಟ್ಟಿದ್ದಳು. ಅವರದೊಂದು ಚಿಕ್ಕಮನೆ. ಆ ಮನೆಯ ಮುಂದೆ ನಾಲ್ಕೈದು ತೆಂಗಿನ ಮರಗಳು, ಆ ಮರದ ಕಾಯಿಗಳನ್ನೇ ಮಾರಿ ಅವರು ಬದುಕುತ್ತಿದ್ದರು. ಒಂದು ದಿನ ಆ ಬಾಲಕನು ದಾರಿಯ ಪಕ್ಕದಲ್ಲಿ ಕುಳಿತು ತೆಂಗಿನಕಾಯಿ ಮಾರುತ್ತಿದ್ದ. ಅಲ್ಲಿಗೆ ಒಬ್ಬ ಸಿರಿವಂತ ಕುದುರೆಯನ್ನೇರಿ ಬಂದ. ಬೇಸಿಗೆ ಕಾಲವಾದ್ದರಿಂದ ಸಿರಿವಂತನಿಗೆ ತುಂಬಾ ಬಾಯಾರಿಕೆ ಆಗಿತ್ತು. ತೆಂಗಿನ ಕಾಯಿ ನೋಡಿದ ಕೂಡಲೆ ಅವನಿಗೆ ನೀರು ಕುಡಿದಷ್ಟೇ ಸಂತಸವಾಯಿತು. ಕುದುರೆಯನಿಳಿದ ಸಿರಿವಂತ ಆ ಬಾಲಕನೊಂದಿಗೆ ಮಾತುಕತೆಗೆ ಇಳಿದ.


ಸಿರಿವಂತ-ಒಂದು ತೆಂಗಿನ ಕಾಯಿಯ ಬೆಲೆ ಎಷ್ಟು?


ಬಾಲಕ -30 ರೂಪಾಯಿ


ಸಿರಿವಂತ -ತುಂಬಾ ದುಬಾರಿಯಾಯಿತಲ್ಲ.


ಬಾಲಕ - 20 ರೂ. ಕೊಡಿ.


ಸಿರಿವಂತ -ಇದೂ ದುಬಾರಿಯೇ...!


ಬಾಲಕ - ಇದು ಕಾಯಿಯ ಬೆಲೆಯಲ್ಲ, ಮರದಿಂದ ಕಾಯಿ ಇಳಿಸಿದ್ದರ ಬೆಲೆ.


ಸಿರಿವಂತ -ಒಂದು ವೇಳೆ ನಾನೇ ಕಾಯಿ ಇಳಿಸಿದರೆ?


ಬಾಲಕ - ನೀವೇ ಇಳಿಸುವುದಾದರೆ ಅದಕ್ಕೇನೂ ಬೆಲೆ ಕೊಡಬೇಕಾಗಿಲ್ಲ, ನೀವು ಎಷ್ಟು ಬೇಕು ಅಷ್ಟು ಇಳಿಸಿಕೊಳ್ಳಬಹುದು.


ಆಗಲಿ ಎಂದವನೇ ಸಿರಿವಂತ ಮರವನೇರತೊಡಗಿದ. ''ಸಿರಿವಂತರೇ ತಮಗೆ ವಯಸ್ಸಾಗಿದೆ ಹುಶಾರಾಗಿರಿ'' ಎಂದು ಹೇಳಿ ಬಾಲಕ ದೂರಸರಿದು ನಿಂತ. ಸಿರಿವಂತ ನೂರಾರು ಕಾಯಿ ಇಳಿಸಿದ. ಮರದ ತುದಿಯಲ್ಲಿ ಒಂದೇ ಒಂದು ಕಾಯಿ ಉಳಿದಿತ್ತು. ಸಿರಿವಂತ ಅದಕ್ಕೂ ಕೈ ಹಾಕಿದ. ಬಾಲಕ ಹೇಳಿದ- ''ಅದೊಂದಾದರೂ ಇರಲಿ ಬಿಡಿ!'' ಸಿರಿವಂತ ಹೇಳಿದ- ''ಭಾಗ್ಯದ ಲಕ್ಷ್ಮಿ ಕೈಗೆ ಬಂದಾಗ ಬಿಡಬಾರದು! ನಿನಗೇನು ತಿಳಿಯುತ್ತದೆ. ಇಂಥ ಅವಕಾಶ ಮತ್ತೆ ಮತ್ತೆ ಬರುವುದಿಲ್ಲ!'' ಬಾಲಕ ಹೇಳಿದ ''ಹಾಗಾದರೆ ನಾನು ಏನೂ ಹೇಳಲಾರೆ, ನಿಮ್ಮ ಇಷ್ಟ!'' ಸಿರಿವಂತ ಆ ಕೊನೆಯ ಕಾಯಿ ಹರಿಯಲು ಕೈಚಾಚಿದ, ಕಾಲುಜಾರಿ ಕೈಯಲ್ಲಿ ತೆಂಗು ಹಿಡಿದುಕೊಂಡೇ ನೆಲಕ್ಕೆ ಬಿದ್ದಿದ್ದ. ಪ್ರಾಣಪಕ್ಷಿ ಹಾರಿಹೋಗಿತ್ತು. ಆ ಮುದುಕನ ಪ್ರಾಣವನ್ನು ತೆಗೆದದ್ದು ಕಾಯಿಯಲ್ಲ, ಅವನ ಅತಿ ಆಸೆ. ಕೃಪೆ:ವಿಜಯ ಕರ್ನಾಟಕ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು