ಕಥೆ-878
ಬದುಕಿನ ಮೂಲ ಉದ್ದೇಶವೇನು ಗೊತ್ತೇ ? ಖುಷಿಯಾಗಿರುವುದು, ಒಂದೊಳ್ಳೆ ಜೀವನ ನಡೆಸುವುದು.. ಭಾಗ-1
https://basapurs.blogspot.com/
ಈ ಮೂಲ ಉದ್ದೇಶಗಳನ್ನು ಈಡೇರಿಸಲಾಗದ ಯಶಸ್ಸು ಮತ್ತು ಹಣದಿಂದ ಯಾವ ಪ್ರಯೋಜನವೂ ಇಲ್ಲ. ಇದರರ್ಥ ಸಂಪತ್ತು ಸೃಷ್ಟಿಸಬಾರದು ಎಂದಲ್ಲ. ನಮಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನೂ ಮಾಡಲೇ ಬಾರದು ಎಂದಲ್ಲ. ಪ್ರಾಥಮಿಕವಾಗಿ ನಮಗೇನು ಬೇಕು , ನಮಗೆ ಯಾವ ಕೆಲಸ ಮಾಡುವುದು ಖುಷಿ ಕೊಡುತ್ತದೆ ? ಎನ್ನುವುದನ್ನು ನಾವು ಅರಿತುಕೊಳ್ಳಬೇಕು.
ಆದರೆ ನಮ್ಮಲ್ಲಿ ಏನಾಗಿದೆ ? ವಿದ್ಯಾಭ್ಯಾಸದ ಸಮಯದಲ್ಲಿಂದ ಎಡವುದು ಶುರುವಾಗುತ್ತದೆ. ಅದು ಕೆಲಸದ ವೇಳೆಯಲ್ಲೂ ಮುಂದುವರಿಯುತ್ತದೆ. ಬಹುತೇಕ ಜನ ಅವರಿಗೇನು ಇಷ್ಟ , ಅವರಿಗೇನು ಬೇಕು ಎನ್ನುವುದು ತಿಳಿದುಕೊಳ್ಳದೆ ಇಲ್ಲಿನ ಆಟವನ್ನು ಮುಗಿಸಿ ಹೊರಟು ಬಿಡುತ್ತಾರೆ. ಗಲ್ಪ್ ಎನ್ನುವ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿ ೨೦೨೪ ರಲ್ಲಿ ನಡೆಸಿರುವ ಸರ್ವೆಯಲ್ಲಿ ತಿಳಿದು ಬಂದಿರುವ ವಿಷಯ ಅಚ್ಚರಿ ಗೊಳಿಸುವುದಿಲ್ಲ. ಬದಲಿಗೆ ನಮ್ಮ ಸಮಾಜದಲ್ಲಿ ಇರುವ ನೋವು , ಹತಾಶೆ , ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಈ ಸರ್ವೇ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ,ನೂರಕ್ಕೆ ೮೬ ಪ್ರತಿಶತ ಕೆಲಸಗಾರರು 'ಸಫರಿಂಗ್ ' ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಕೇವಲ ೧೪ ಪ್ರತಿಶತ ಜನ ಮಾತ್ರ ' ನಾಟ್ ಸಫರಿಂಗ್' ಎಂದು ಹೇಳಿದ್ದಾರೆ. ಈ ಸಂಸ್ಥೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೂರು ವಿಭಾಗಗಳಲ್ಲಿ ಕೆಲಸಗಾರರನ್ನು ವಿಂಗಡಿಸಿದ್ದಾರೆ. ಅದ್ಭುತವಾಗಿ ಜೀವನದಲ್ಲಿ ಮುಂದೆ ಬರುತ್ತಿದ್ದೇವೆ , ಮಾಡುತ್ತಿರುವ ಕೆಲಸ ತುಂಬಾ ಇಷ್ಟ್ವವಾಗಿದೆ ಎಂದವರಲ್ಲಿ ಕೂಡ ಹತ್ತಕ್ಕೆ ಹತ್ತು ಅಂಕ ಗಳಿಸಿದವರಲ್ಲ ಎನ್ನುವುದನ್ನು ಗಮನಿಸಬೇಕು. ಹತ್ತರಲ್ಲಿ ಏಳು ಮತ್ತು ಅದಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿದವರನ್ನು ನಾಟ್ ಸಫರಿಂಗ್ ಪಟ್ಟಿಯಲ್ಲಿ ಹಾಕಲಾಗಿದೆ. ಉಳಿದ ೮೬ ಪ್ರತಿಶತ ಜನ ಕೆಲಸ ಮತ್ತು ಬದುಕಿನಲ್ಲಿ ಬೇಸೆತ್ತು ಹೋಗಿದ್ದೇವೆ , ಭವಿಷ್ಯದ ಬಗ್ಗೆ ನೆನಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ. ಅದರಲ್ಲೂ ೪೦ ಪ್ರತಿಶತ ಕೆಲಸ ಮತ್ತು ಬದುಕಿನಲ್ಲಿ ಅತ್ಯಂತ ದುಃಖಿಯಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇದು ಸೌತ್ ಏಷ್ಯಾ ದೇಶಗಳ ಕಥೆ. ಜಗತ್ತಿನ ಲೆಕ್ಕಾಚಾರ ತೆಗೆದುಕೊಂಡರೂ ಕೇವಲ ೩೪ ಪ್ರತಿಶತ ಜನ ಬದುಕು ಸುಂದರ , ಅದ್ಬುತ ,thriving ಕೆಟಗರಿಯಲ್ಲಿ ಬರುತ್ತಾರೆ. ಉಳಿದವರ ಬಾಳು ಅದೇ ಗೋಳು. ಹೀಗೇಕೆ ಎನ್ನುವುದನ್ನು ಹುಡುಕಿ ಹೋದಾಗ ತಿಳಿಯುವ ಅಂಶ ಜಗತ್ತಿನಾದ್ಯಂತ ಸೇಮ್ .
ಅವರಿಗೇನು ಬೇಕು , ಇಷ್ಟ , ಅದನ್ನು ಅವರು ಓದಿರುವುದಿಲ್ಲ. ಅವರ ಓದಿಗೆ ಯಾವ ಕೆಲಸ ಸಿಕ್ಕಿತ್ತು ಅದನ್ನು ಬದುಕು ಸಾಗಿಸಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಇಷ್ಟವಿಲ್ಲದ ಕೆಲಸದಲ್ಲಿ ಹತ್ತು ವರ್ಷ ಕಳೆಯುವ ವೇಳೆಗೆ ಬರ್ನ್ ಔಟ್ ಆಗಿ ಬಿಡುತ್ತಾರೆ. ನಲವತ್ತು ವಯಸ್ಸು ಆಗುವ ವೇಳೆಗೆ ಹೇಗಾದರೂ ಸರಿಯೇ ಮಾಡುತ್ತಿರುವ ಕೆಲಸ ಬಿಟ್ಟು , ಇಚ್ಛೆ ಪಟ್ಟ ಕೆಲಸವನ್ನು ಮಾಡಬೇಕು ಎನ್ನುವ ತವಕ ಹೆಚ್ಚಾಗುತ್ತದೆ. ಬದುಕಿನ ಶಕ್ತಿಯುತವಾದ ವರ್ಷಗಳನ್ನು ಆಗಲೇ ಕಳೆದು ಬಿಟ್ಟಿರುತ್ತಾರೆ. ಮಿಡ್ ಲೈಫ್ ಕ್ರೈಸಿಸ್ ನಲ್ಲಿ ಹೆಣಗುವ ಸಮಯದಲ್ಲಿ ಹೊಸ ಸಾಹಸ ಮಾಡಲು ಹೋಗುತ್ತಾರೆ. ಸೋಲಿಗೆ ಇದಕ್ಕಿಂತ ಉತ್ತಮ ಸನ್ನಿವೇಶ ಇನ್ನ್ಯಾವುದಿದೆ?
ಇಂದಿಗೆ ನಾವು ಯಾರನ್ನೂ ಕೋಟ್ಯಧಿಪತಿಗಳು , ಸಿರಿವಂತರು ಎನ್ನುತ್ತೇವೆ ಅವರನ್ನು ಒಮ್ಮೆ ಗಮನಿಸಿ ನೋಡಿ ಅವರಲ್ಲಿ ಎರಡು ವಿಧದ ವ್ಯಕ್ತಿಗಳನ್ನು ಕಾಣಬಹುದು. ಒಂದು ಇಷ್ಟದ ಓದು , ಇಷ್ಟದ ವೃತ್ತಿಯಲ್ಲಿ ಮುಂದುವರೆದು ಯಶಸ್ಸು ಗಳಿಸಿದವರು. ಇವರಿಗೆ ಇರುವ ಅತಿ ದೊಡ್ಡ ಲಾಭವೆಂದರೆ ಇಷ್ಟ ಪಟ್ಟು ಮಾಡುವ ಕೆಲಸದಿಂದ ಆಲಸ್ಯ , ನೋವು , ಬೇಜಾರು ಉತ್ಪನ್ನವಾಗುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಅದು ಬದುಕುವ ರೀತಿಯಾಗಿರುತ್ತದೆ. ಅದು ಕೆಲಸ ಎನ್ನಿಸಿಕೊಳ್ಳುವುದಿಲ್ಲ. ಎರಡನೇ ವರ್ಗದ ಜನ ಓದು ಅಥಾವ ಕೆಲಸ ಎರಡರಲ್ಲಿ ಒಂದು ಅಥವಾ ಎರಡೂ ಇಷ್ಟವಿಲ್ಲದೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅಪ್ಪಿಕೊಂಡಿರುತ್ತಾರೆ. ಆದರೆ ಅವರಿಗೆ ಬದುಕಿನಲ್ಲಿ ಏನು ಬೇಕು ಎನ್ನುವ ನಿಖರತೆ ಇರುತ್ತದೆ. ಅವರ ಅಲ್ಟಿಮೇಟ್ ಗೋಲ್ ಏನಿದೆ ಅದನ್ನು ಸಾಧಿಸಲು ಇದನ್ನು ಮಾರ್ಗವನ್ನಾಗಿ ಬಳಸಿಕೊಳ್ಳುತ್ತಾರೆ. ಉದಾಹರಣೆಗೆ ಯಾರೋ ಒಬ್ಬರಿಗೆ ಸ್ಟಾಂಡ್ ಅಪ್ ಕಾಮಿಡಿಯನ್ ಆಗಬೇಕು ಎನ್ನುವ ತುಡಿತವಿರುತ್ತದೆ. ಆದರೆ ಸಮಯ , ಸನ್ನಿವೇಶ ಅದಕ್ಕೆ ಪೂರಕವಾಗಿರುವುದಿಲ್ಲ. ಹೀಗಾಗಿ ಬದುಕಿನ ಬಂಡಿ ಸಾಗಿಸಲು ಒಂದು ವೃತ್ತಿ , ಓದಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲ ದಿನದಿಂದ ತಮ್ಮ ಗುರಿಯ ಬಗ್ಗೆ ಅವರಿಗೆ ಗಮನವಿರುತ್ತದೆ. ಇದು ನನ್ನ ಗುರಿ ಸಾಧನೆಗೆ ಅವಶ್ಯಕವಾದದ್ದು ಎನ್ನುವ ಅರಿವಿರುವ ಕಾರಣ , ಮಾಡುವ ಕೆಲಸವನ್ನು ಪ್ರೀತಿಸಲು ಶುರು ಮಾಡುತ್ತಾರೆ. ಈ ವರ್ಗದ ಜನ ನಿಜವಾದ ಸಾಧಕರು. ಜಗತ್ತಿನಲ್ಲಿ ಬಹು ಕಡಿಮೆ ಜನರಿಗೆ ಬಯಸಿದ ಬದುಕು ದಕ್ಕುತ್ತದೆ. ಉಳಿದ ಜನ ಪ್ರಯತ್ನ ಪೂರ್ವಕವಾಗಿ ಬಯಸಿದ ಬದುಕನ್ನು ಕಟ್ಟಿಕೊಳ್ಳಬೇಕು.
ಮುಂದುವರೆಯುವುದು......
No comments:
Post a Comment