Saturday, September 20, 2025

 ಕಥೆ-879

ಬದುಕಿನ ಮೂಲ ಉದ್ದೇಶವೇನು ಗೊತ್ತೇ ? ಖುಷಿಯಾಗಿರುವುದು, ಒಂದೊಳ್ಳೆ ಜೀವನ ನಡೆಸುವುದು.. ಭಾಗ-2

https://basapurs.blogspot.com/

ಪ್ರೀತಿಸುವ ಕೆಲಸವನ್ನು ಮಾಡುವುದು ಮತ್ತು ಮಾಡುವ ಕೆಲಸವನ್ನು ಪ್ರೀತಿಸುವುದರ ನಡುವೆ ಬಹು ದೊಡ್ಡ ಅಂತರವಿದೆ. ಇದು ನನ್ನ ಅಭಿರುಚಿಗೆ ನೂರು ಪ್ರತಿಶತ ಹೊಂದಾವಣಿಕೆ ಆಗುವುದಿಲ್ಲ , ನಾನು ಇಲ್ಲಿಗೆ ಸೇರಿದವನಲ್ಲ. ಆದರೆ ನನಗೆ ಬೇಕಾದದ್ದು ಮಾಡಲು ಇನ್ನಷ್ಟು ಆರ್ಥಿಕವಾಗಿ ಸಬಲನಾಗಬೇಕು ಎನ್ನುವ ಅಂಶವನ್ನು ಮನಗಂಡು, ಮಾಡುವ ಕೆಲಸದಲ್ಲಿ ಶ್ರದ್ದೆ , ಉತ್ಸಾಹ ತೋರುವುದು ಕೋಟ್ಯಧಿಪತಿಯಾಗಲು ಇರಬೇಕಾದ ಪ್ರಮುಖ ಗುಣಲಕ್ಷಣಗಳಲ್ಲಿ ಪ್ರಮುಖವಾದದ್ದು. ಜಗತ್ತಿನಲ್ಲಿ ಸ್ವಂತ ಬಲದಿಂದ ಸಂಪತ್ತು , ಯಶಸ್ಸು , ಹೆಸರು ಸಂಪಾದಿಸಿದ ಮುಕ್ಕಾಲು ಪಾಲು ಜನರನ್ನು ನೋಡಿ . ಅವರು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ. ಬೆಳಿಗ್ಗೆ ಹಾಲು , ಪೇಪರ್ ಹಾಕಿದ್ದಾರೆ , ಗುಮಾಸ್ತನ ಕೆಲಸ ಮಾಡಿದ್ದಾರೆ. ಹೀಗೆ ಜಗತ್ತು ಯಾವುದನ್ನು ನಿಕೃಷ್ಟ ಎಂದು ಪರಿಗಣಿಸುತ್ತದೆ , ಆ ಎಲ್ಲಾ ಕೇಲಸಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಆ ಕೆಲಸ ಮಾಡುವಾಗ 'ಇದು ಪ್ರಯಾಣದ ಒಂದು ಭಾಗ , ಇದು ನನ್ನ ಕೊನೆಯ ನಿಲ್ದಾಣವಲ್ಲ ' ಎನ್ನುವುದು ಗೊತ್ತಿರುತ್ತದೆ. ಹೀಗಾಗಿ ಮಾಡುವ ಕೆಲಸವನ್ನು ಪ್ರೀತಿಸುತ್ತಾರೆ, ಕೊನೆಗೆ ಪ್ರೀತಿಸುವ ಕೆಲಸವನ್ನು ಕೂಡ ಮಾಡುತ್ತಾರೆ.


ಮೊದಲೇ ಹೇಳಿದಂತೆ ಪ್ರೀತಿಸುವ ಕೆಲಸ , ಇಷ್ಟ ಪಡುವ ಕೆಲಸ ಸಿಕ್ಕುವುದು ಕೆಲವೇ ಕೆಲವು ಜನರಿಗೆ. ಉಳಿದವರಲ್ಲಿ ಒಂದಷ್ಟು ಜನ ಮಾಡುವ ಕೆಲಸವನ್ನು ಪ್ರೀತಿಸುತ್ತಾರೆ. ಹೀಗಾಗಿ ಅವರು ಕೂಡ ೧೪ ಪ್ರತಿಶತದಲ್ಲಿ ಬರುತ್ತಾರೆ. ಉಳಿದ ೮೪ ಪ್ರತಿಶತ ಜನ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ , ಮಾಡುವ ಕೆಲಸವನ್ನೂ ಶ್ರದ್ದೆಯಿಂದ ಮಾಡುವುದಿಲ್ಲ. ಆಗ ನೋವು , ಹತಾಶೆ ಸಹಜ. ಡು ವಾಟ್ ಯು ಲವ್ ಗಿಂತ ಲವ್ ವಾಟ್ ಯು ಡು ಎನ್ನುವ ಫಿಲಾಸಫಿ ಬಹಳ ದೊಡ್ಡದು. ಒಟ್ಟಾರೆ ನಮ್ಮ ಮಾರ್ಗ ಯಾವುದೇ ಇರಲಿ ಅದನ್ನು ಮೂರು ಅಂಶಗಳು ಪ್ರೇರೇಪಿಸುತ್ತದೆ.


೧)ಪೇಮೆಂಟ್ , ಆದಾಯ , ಹಣ : ನಾವು ಯಾವುದೇ ಕೆಲಸ ಮಾಡಲಿ ಅದರಿಂದ ಒಂದಷ್ಟು ಹಣಕಾಸು ಫಲಿತಾಂಶವಾಗಿ ಸಿಗಬೇಕು. ಇದು ದೊಡ್ಡ ಮೋಟಿವೇಟರ್. ಜಗತ್ತಿನ ೯೦ ಕ್ಕೂ ಹೆಚ್ಚು ಜನರನ್ನು ಪ್ರೇರೇಪಿಸುವುದು ಹಣ. ತಿಂಗಳ ಕೊನೆ ಸಿಕ್ಕುವ ಪೇ ಚೆಕ್ , ಬಹಳಷ್ಟು ಜನ ಇನ್ನೂ ಕೆಲಸ ಮಾಡುತ್ತಿರುವುದಕ್ಕೆ ಕಾರಣವಾಗಿದೆ. ಎಷ್ಟರಮಟ್ಟಿಗೆ ಎಂದರೆ ತಮ್ಮ ಕನಸುಗಳನ್ನು ಬದಿಗಿಟ್ಟು ಚಿಟಿಕೆ ಹೊಡೆಯುವಷ್ಟರಲ್ಲಿ ಬರುವ ತಿಂಗಳ ಸಂಬಳಕ್ಕೆ ಜೋತು ಬೀಳುವಷ್ಟು ! ಹಣ ಎನ್ನುವುದು ಮಾಡಿದ ಕೆಲಸಕ್ಕೆ ಸಿಗುವ ಸಣ್ಣ ಪ್ರತಿಫಲ. ಇದು ಬಹಳ ಮುಖ್ಯ. ಇದು ಇಂಧನವಿದ್ದಂತೆ , ಇದಿಲ್ಲದೆ ಅದೆಷ್ಟೇ ದೊಡ್ಡ ಕನಸುಗಾರನಾದರೂ ಬಹಳ ಕಾಲ ಬದುಕಲು , ಕನಸಿನ ಬೆಂಬೆತ್ತಲು ಸಾಧ್ಯವಿಲ್ಲ. ಆದರೆ ಇದು ಕನಸನ್ನೇ ಕೊಲ್ಲುವ ಮಟ್ಟಕ್ಕೆ ಹೋಗಬಾರದು.


೨)ಪ್ರೆಸ್ಟೀಜ್ : ಇದು ಕೆಲಸ ಮಾಡಲು ಇನ್ನೊಂದು ಪ್ರೇರಣೆ. ಕೆಲವರಿಗೆ ಕೆಲಸ ಮಾಡಿ ಅದರಿಂದ ಸೈ ಎನ್ನಿಸಿಕೊಂಡಾಗ ಸಿಗುವ ಮರ್ಯಾದೆ , ಗೌರವ ಹೆಚ್ಚಿನ ಬಲವನ್ನು , ಖುಷಿಯನ್ನು ನೀಡುತ್ತದೆ. ಸಮಾಜದಲ್ಲಿ ಹೆಚ್ಚುವ ಗೌರವಕ್ಕೆ ಅವರು ಕೆಲಸ ಮಾಡುತ್ತಾರೆ. ಹಣ ಮುಖ್ಯವಾಗಿರುತ್ತದೆ , ಆದರೆ ಅದಕ್ಕಿಂತ ಮುಖ್ಯವಾಗಿ ಕೆಲಸದ ಗೆಲುವಿನಿಂದ ಸಿಗುವ ಮರ್ಯಾದೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಜಗತ್ತಿನ ಐದಾರು ಪ್ರತಿಶತ ಜನ ಈ ವರ್ಗದಲ್ಲಿ ಬರಬಹುದು.


೩)ಪ್ರೋಸೆಸ್ : ಮಾಡುವ ಕೆಲಸವಷ್ಟೇ ಮುಖ್ಯವಾಗುವುದು ಜಗತ್ತಿನಲ್ಲಿ ೦.೧ ಪ್ರತಿಶತ ಜನಕ್ಕಿಂತ ಕಡಿಮೆ ಜನರಿಗೆ ಮಾತ್ರ . ಇವರಿಗೆ ಇದರಿಂದ ಸಿಗುವ ಹಣ , ಮರ್ಯಾದೆ ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ಕೆಲಸದ ಪ್ರಕ್ರಿಯೆ ಮಾತ್ರ ಮುಖ್ಯವಾಗುತ್ತದೆ. ಸೋಲು , ಗೆಲುವು , ಹಣ , ಮರ್ಯಾದೆ ಇದ್ಯಾವುದರ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಎಲಾನ್ ಮಸ್ಕ್ ಇಂತಹ ವ್ಯಕ್ತಿ ಎಂದು ಹೇಳಬಹುದು. ಇದೆ ರೀತಿ ಬಹಳಷ್ಟು ಜನ ವಿಜ್ಞಾನಿಗಳು , ಬರಹಗಾರರು , ಕಲಾವಿದರನ್ನು ಕೂಡ ಈ ಕೆಟಗರಿಯಲ್ಲಿ ವಿಂಗಡಿಸಬಹುದು. ಅವರಿಗೆ ಕೆಲಸ ಬಿಟ್ಟು ಬೇರೆ ಪ್ರಪಂಚದ ಅರಿವಿರುವುದಿಲ್ಲ.


ಈಗ ನಿಧಾನಕ್ಕೆ ಕುಳಿತು ಯೋಚಿಸಿ , ನಿಮ್ಮನ್ನು ಮೋಟಿವೇಟ್ ಮಾಡುವ ಅಂಶ ಯಾವುದು ? ಎನ್ನುವುದನ್ನು ಕಂಡುಕೊಳ್ಳಿ. ಕೇವಲ ಹಣ ಮಾತ್ರ ಪ್ರೇರೇಪಣೆ ನೀಡುವ ಅಂಶ ಎಂದಾಗಿದ್ದರೆ ಈ ದಾರಿಯಲ್ಲಿ ಉತ್ತಮ ಭವಿಷ್ಯವಿಲ್ಲ. ಹಾಗೆ ಪ್ರೆಸ್ಟೀಜ್ಗಾಗಿ ಮಾತ್ರ ಕೆಲಸ ಮಾಡುತ್ತಿದ್ದರೆ ಅದೂ ಮಿಶ್ರ ಫಲಿತಾಂಶ ನೀಡುತ್ತದೆ. ಪೂರ್ಣ ಪ್ರೋಸೆಸ್ ಡ್ರಿವನ್ ಎಂದರೂ ಕಷ್ಟ . ಏಕೆಂದರೆ ಆ ಮಟ್ಟದ ಬದ್ಧತೆಯನ್ನು ನಾವು ಎಲ್ಲರಿಂದ ಅಪೇಕ್ಷಿಸುವುದು ಬಹಳ ಕಷ್ಟ. ಹೀಗಾಗಿ ಈ ಮೂರು ಅಂಶಗಳ ಹದವಾದ ಮಿಶ್ರಣ ಬೇಕು.

ಕೃಪೆ -ವಾಟ್ಸಾಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು