Saturday, September 27, 2025

 ಕಥೆ-887

ಹೃದಯದ ಸಮಾಧಾನವೇ ಗಡಿಯಾರ

ಕ್ರಿಕೆಟ್ ಆಟವನ್ನು ಅಭ್ಯಾಸ ಮಾಡುವಾಗ ನಾನು ಎಂದಿಗೂ ಗಡಿಯಾರ ನೋಡುತ್ತಿರಲಿಲ್ಲ. ಪ್ರಾಕ್ಟಿಸ್ ಮಾಡುತ್ತಾ ಮೂರು ಗಂಟೆಯಾಯಿತು, ನಾಲ್ಕು ಗಂಟೆಯಾಯಿತು, ಹೀಗಾಗಿ ನಿಲ್ಲಿಸಬೇಕು ಎಂದು ಯಾವತ್ತೂ ಯೋಚಿಸಿಲ್ಲ. ಏಕೆಂದರೆ ಕ್ರಿಕೆಟ್ ನನ್ನ ಪ್ಯಾಷನ್. ಕ್ರಿಕೆಟ್ ಒಂದೇ ನನ್ನ ಜೀವನದಲ್ಲಿ ಅತಿ ಮುಖ್ಯವಾದದ್ದು. ನನಗನಿಸುತ್ತದೆ, ಪ್ರತಿಯೊಬ್ಬ ಮನುಷ್ಯನೂ ತನಗಿಷ್ಟವಾದ ಕೆಲಸಕ್ಕೆ ಶ್ರಮ ಹಾಕುವಾಗ ಗಡಿಯಾರವನ್ನು ನೋಡಬಾರದು. ಅವನ ಹೃದಯವೇ ಗಡಿಯಾರ ಆಗಬೇಕು. ಯಾವಾಗ ಸಮಾಧಾನ ಆಗುತ್ತೋ ಅಲ್ಲಿಯವರೆಗೆ ಶ್ರಮ ಹಾಕಬೇಕು. ಹೃದಯಕ್ಕೆ ಆಗುವ ಸಮಾಧಾನವೇ ನಿಜವಾದ ಗಡಿಯಾರ ಆಗಬೇಕು. ಯಾರೇ ಆದರೂ ಉತ್ತಮ ಮನುಷ್ಯ ಆಗಬೇಕು ಎಂದರೆ ನಿನ್ನೆಗಿಂತ ಇವತ್ತು ಹೆಚ್ಚು ಕಲಿಯಬೇಕು. ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಡುವಾಗ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಹೊರಡಬೇಕು. ಆ ನಿರೀಕ್ಷೆಗಳನ್ನು ಮುಟ್ಟಲು ಪರಿಶ್ರಮಪಡಬೇಕು. ಆಗ, ಮನೆಗೆ ಹಿಂದಿರುಗುವಾಗ ಕೆಲವು ಅನುಭವಗಳು ನಮ್ಮ ಜೋಳಿಗೆಯಲ್ಲಿರುತ್ತದೆ. ಅದೇ ಅನುಭವಗಳು ನಮ್ಮನ್ನು ಉತ್ತಮ ಮನುಷ್ಯರನ್ನಾಗಿ ಮಾಡುತ್ತವೆ. ಪ್ರತಿದಿನ ಸಿಗುವ ಇಂತಹ ಅನುಭವಗಳು ನಮಗೆ ಏನಾದರೊಂದು ಕಲಿಸುತ್ತಿರುತ್ತವೆ. ಇವುಗಳನ್ನು ಕಲಿತು ಮುನ್ನಡೆದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ..

-ಸಚಿನ್ ತೆಂಡೂಲ್ಕರ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು