Friday, September 5, 2025

 ಕಥೆ-856

ಶಿಕ್ಷಕರ ದಿನಾಚರಣೆ ಶುಭಾಶಯಗಳು💐💐💐💐

 ದೀರ್ಘದಂಡ ನಮನಗಳು

🙏🙏🙏🙏🙏🙏

ಶಿಕ್ಷಕರು ಕೇವಲ ಪಾಠಗಳನ್ನು ಮಾತ್ರ ಕಲಿಸುವವರಲ್ಲ, ಅವರು ವಿದ್ಯಾರ್ಥಿಗಳ ಜೀವನದ ಮೌಲ್ಯಗಳನ್ನು ಬದುಕಿನ ಪಾಠವನ್ನಾಗಿ ರೂಪಿಸುವ ಶಿಲ್ಪಿಗಳು.


ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಎಂಬ ಬೀಜವನ್ನು ಬಿತ್ತಿ,ಮೊಳಕೆ ಒಡೆದು ಗಟ್ಟಿ ಮರವಾಗುವವರೆಗೂ ಶ್ರಮಿಸುವ ನಿಜವಾದ ಜಾದೂಗಾರ ಶಿಕ್ಷಕ..


ತಂದೆ ತಾಯಿ ನಮಗೆ ಜೀವವನ್ನು ಕೊಟ್ಟರೆ,

ಶಿಕ್ಷಕರು ಆ ಜೀವನವನ್ನು ರೂಪಿಸುವ ಶಿಲ್ಪಿಗಳು.


 ಶಿಕ್ಷಕರು ಮಾರ್ಕ್ಸ್ ಕೊಡುವಾಗ ತಾಯಿ ಮಮತೆ, ಹೊಡೆದಾಗ ತಂದೆಯ ಕಠಿಣತೆ ಜೊತೆ ತಿದ್ದುವ ಪ್ರಯತ್ನ, ಗದರಿಕೆಯಲ್ಲಿ ಕಾಳಜಿ - ಅದಕ್ಕೇ ಅವರು ನಮ್ಮ ಜೀವಮಾನಪೂರ್ತಿ ಗೌರವಕ್ಕೆ ಪಾತ್ರರು...


ಅರಿಸ್ಟಾಟಲ್ ಮತ್ತು ಅಲೆಕ್ಸಾಂಡರ್ ಒಂದು ದಿನ ನದಿ ತೀರದಲ್ಲಿ ಹೋಗುತ್ತಾ ಇರುವಾಗ ಆ ನದಿಯಲ್ಲಿ ಒಬ್ಬ ಮನುಷ್ಯನು ತೇಲಿ ಹೋಗುತ್ತಿರುತ್ತಾನೆ . ಅರಿಸ್ಟಾಟಲ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡಬೇಕು ಅನ್ನುವಷ್ಟರಲ್ಲಿ ಅಲೆಕ್ಸಾಂಡರ್ ನದಿಗೆ ಹಾರಿ ಅವನನ್ನು ರಕ್ಷಣೆ ಮಾಡುತ್ತಾನೆ.ಆಗ ಅರಿಸ್ಟಾಟಲ್ ಕೇಳುತ್ತಾನೆ . ಶಿಷ್ಯ ನೀನೇಕೆ ಹೋದೆ ? ನಿನಗೇನಾದರು ಆದರೆ ನಾನು ನಿನ್ನಂಥ ಶಿಷ್ಯನನ್ನು ಕಳೆದುಕೊಳ್ಳುತ್ತಾ ಇದ್ದೆ ಎಂದರು. ಆಗ ಅಲೆಕ್ಸಾಂಡರ್ ಹೇಳುತ್ತಾನೆ . ಗುರುಗಳೇ ನೀವು ನನ್ನನ್ನು ಕಳೆದುಕೊಂಡರೆ ನನ್ನಂಥ ನೂರಾರು ಶಿಷ್ಯರನ್ನು ತಯಾರು ಮಾಡಬಹುದು . ಆದರೆ ನಿಮ್ಮನ್ನು ಈ ಲೋಕ ಕಳೆದುಕೊಂಡರೆ ಅದೆಷ್ಟೋ ಜನ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿತ್ತು ಎಂದನು...


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |


ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ|


ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ನಿಜವಾದ ಪರಮ ಬ್ರಹ್ಮ.


 ನನ್ನ ವೈಯಕ್ತಿಕ ಜೀವನದಲ್ಲಿ ಮಾರ್ಗದರ್ಶನ ನೀಡಿದ ಮತ್ತು ಬೋಧನೆ ಜೊತೆಗೆ, ನೈತಿಕ ಮೌಲ್ಯಗಳು ಮತ್ತು ಶಿಸ್ತನ್ನು ದಯಪಾಲಿಸಿದ ನನ್ನ ಪ್ರೀತಿಯ ಶಿಕ್ಷಕ ಬಳಗಕ್ಕೆ ಧನ್ಯವಾದ ಹೇಳುತ್ತಾ,ಅವರಿಗೆ ನನ್ನ ದೀರ್ಘದಂಡ ನಮನಗಳು...

ನಮ್ಮ ಗುರುಗಳಿಗೆ ಹೃದಯಪೂರ್ವಕ Thank You ❤️...

🙏🙏🙏🙏🙏🙏

Shankargouda Basapur

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು