ಕಥೆ-855
ಸತತ ಪ್ರಯತ್ನ ಖಂಡಿತ ಫಲ ನೀಡುತ್ತದೆ. ( ಕಪ್ಪೆಗಳ ಪ್ರಯತ್ನ) https://basapurs.blogspot.com
ಎರಡು ಕಪ್ಪೆಗಳು
ಒಂದು ದಿನ ಎರಡು ಕಪ್ಪೆಗಳು ಹೆಪ್ಪು ಹಾಕಿದ್ದ ಒಂದು ದೊಡ್ಡ ಹಾಲಿನ ಪಾತ್ರೆಯೊಳಗೆ ಅಕಸ್ಮಾತ್ತಾಗಿ ಬಿದ್ದುಬಿಟ್ಟವು. ಅವು ಆ ಕಡೆ ಈ ಕಡೆ ಈಜಿ ಅದರಿಂದ ನೆಗೆದು ಹೊರ ಹಾರಲು ಪ್ರಯತ್ನಿಸಿದವು. ಆದರೆ ಅವುಗಳ ಕಾಲುಗಳಿಗೆ ಗಟ್ಟಿಯಾದ ಯಾವುದೇ ಆಧಾರ ಸಿಗದಿದ್ದುದರಿಂದ, ಏಷ್ಟು ಪ್ರಯತ್ನಿಸಿದರು, ಪಾತ್ರೆಯಿಂದ ಹೊರಕ್ಕೆ ಹಾರಿ ತಪ್ಪಿಸಿಕೊಳ್ಳಲು ಸಾಧವಾಗಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಕಪ್ಪೆ ನಾನಂತೂ ಪೂರ್ತಿ ಸುಸ್ತಾಗಿದ್ದೇನೆ. ನನ್ನಿಂದ ಇನ್ನೂ ಈಜಲು ಸಾಧ್ಯವೇ ಇಲ್ಲ, ನಾನು ಸೋತೆ ಎಂದಿತು. ಈಜು ನಿಲ್ಲಿಸಿದ ಸ್ವಲ್ಪ ಸಮಯದಲ್ಲಿಯೇ ಅದು ಪಾತ್ರೆಯ ಹಾಲಿನಲ್ಲಿ ಮುಳುಗಿ ಸತ್ತು ಹೋಯಿತು.
ಆದರೆ ಮತ್ತೊಂದು ನಾನಂತೂ ಈಜುವುದನ್ನು ನಿಲ್ಲಿಸುವುದಿಲ್ಲ; ಏನಾದರೂ ಒಂದು ಆಸರೆ ಸಿಗಬಹುದು ಎಂದು ಈಜುತ್ತಲೆ ಇದ್ದಿತು.
ಹೀಗೆ ಕಪ್ಪೆಯು ಈಜುತ್ತಾ-ಈಜುತ್ತಾ ಹೋದಂತೆಲ್ಲ ಹಾಲನ್ನು ಕಡೆಗೋಲಿನಿಂದ ಕಡೆದಂತಾಗಿ, ಗಟ್ಟಿಯಾದ ಬೆಣ್ಣೆಯ ಅದರ ಮೇಲೆ ಶೇಖರವಾಗತೊಡಗಿತು. ಸ್ವಲ್ಪ ಸಮಯದಲ್ಲಿಯೇ ಕಪ್ಪೆಯು ಗಟ್ಟಿಯಾದ ಬೆಣ್ಣೆಯ ಮೇಲೇರಿ ಅದನ್ನೇ ಆಧಾರವಾಗಿಸಿಕೊಂಡು, ಪಾತ್ರೆಯಿಂದ ಹೊರಗೆ ಚಿಮ್ಮಿತು.
ಸತತ ಪ್ರಯತ್ನ ಖಂಡಿತ ಫಲ ನೀಡುತ್ತದೆ.
ಕೃಪೆ :ಕಿಶೋರ್.
No comments:
Post a Comment