ಕಥೆ-866
ಮಾತಿಗಿಂತ ಕೆಲಸ ಮಾತಾಡಬೇಕು
ಪ್ರತೀ ಟೂರ್ನಿ ಅಥವಾ ಪಂದ್ಯದಲ್ಲೂ ನಾವು ಗೆಲ್ಲಬೇಕು, ಏನಾದರೊಂದು ಪದಕವನ್ನು ಪಡೆಯಬೇಕು ಎಂಬ ಆಸೆ ಎಲ್ಲ ಕ್ರೀಡಾಪಟುಗಳಿಗೂ ಇದ್ದೇ ಇರುತ್ತದೆ. ನಾವು ಏನೇ ಆಸೆಪಟ್ಟರೂ, ಪದಕ ಎನ್ನುವುದು ಆ ಕ್ಷಣ ನಾವು ಏನು ಶ್ರಮ ಹಾಕಿರುತ್ತೀವೋ ಅದಕ್ಕೆ ಸಿಗುತ್ತದೆಯೇ ಹೊರತು, ನಾವು ಆಸೆಪಟ್ಟಿದ್ದಕ್ಕೆ ಸಿಗುವುದಿಲ್ಲ. ನಾವು ಏನುಬೇಕಾದರೂ ಆಸೆಪಡಬಹುದು, ಏನು ಬೇಕಾದರೂ ಕನಸು ಕಾಣಬಹುದು. ಅವೆಲ್ಲವೂ ನನಸಾಗುವುದು ನಮ್ಮ ಕಾರ್ಯಕ್ರೇತ್ರದಲ್ಲಿ. ನಾವು ಆ ಕ್ಷಣ ಹೇಗೆ ಪ್ರದರ್ಶನ ನೀಡುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದೇ ವಿಷಯವು ನಮ್ಮ ಪದಕ ಗೆಲ್ಲುವ ಆಸೆಯನ್ನು ತೀರ್ಮಾನಿಸುತ್ತದೆ ಎಂದರೆ ತಪ್ಪಿಲ್ಲ. ಹಾಗಾಗಿ, ನಾವು ಏನು ಯೋಚಿಸುತ್ತೇವೆ ಎನ್ನುವುದು ಯಾವತ್ತೂ ಮುಖ್ಯವಾಗುವುದಿಲ್ಲ. ಏನು ಮಾಡುತ್ತೇವೆ 'ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ, ಇಲ್ಲಿ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕು. ನಾವು ಚೆನ್ನಾಗಿ ಕಾರ್ಯನಿರ್ವಹಿಸಿದರೆ, ಸಹಜವಾಗಿಯೇ ಗೆಲುವು ನಮ್ಮದಾಗುತ್ತದೆ. ಸಹಜವಾಗಿಯೇ ಪದಕಗಳು ಸಿಗುತ್ತವೆ. ಹಾಗಾಗಿ,ಕೆಲಸದ ಬಗ್ಗೆ ಹೆಚ್ಚು ಗಮನವಹಿಸಿ. ಕೆಲಸ ಚೆನ್ನಾಗಿ ಮೂಡಿಬರುವುದಕ್ಕೆ ಶ್ರಮವಹಿಸಿ. ಕೆಲಸ ಮಾತನಾಡುವಂತೆ ಜಾಗ್ರತೆ ವಹಿಸಿ. ಕೆಲಸವೊಂದು ಚೆನ್ನಾಗಿದ್ದರೆ ಹೆಸರು, ಖ್ಯಾತಿ, ಜನಪ್ರಿಯತೆ, ಹಣ ಎಲ್ಲವೂ ತನ್ನಿಂತಾನೇ ಹಿಂಬಾಲಿಸುತ್ತದೆ.
ಕಾಯಕವೇ ಕೈಲಾಸ
ನೀರಜ್ ಚೋಪ್ರಾ ಕ್ರೀಡಾಪಟು
No comments:
Post a Comment