ಕಥೆ-862
ಸಾಧನೆಗೆ ರಿಸ್ಕ್ ಅನಿವಾರ್ಯ
https://basapurs.blogspot.com
ಜಿಮ್ನಾಸ್ಟಿಕ್ಸ್ ಎಂದರೆ ಅಷ್ಟು ಸುಲಭವಲ್ಲ. ಇಲ್ಲಿ ಸಾಮರ್ಥ್ಯ, ಬ್ಯಾಲೆನ್ಸ್, ಚುರುಕುತನ, ಸಮನ್ವಯತೆ, ಶ್ರದ್ದೆ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಇದರಲ್ಲಿ ಒಂದು ವಿಷಯ ಮೈನಸ್ ಆದರೂ, ನಾವು ಗೆಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದೇ ಒಂದು ನಡೆ ತಪ್ಪಾದರೂ, ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಕೈಕಾಲು ಮುರಿದರೆ, ಎಷ್ಟೋ ಬಾರಿ ಪ್ರಾಣವನ್ನೇ ಪಣಕ್ಕಿಡಬೇಕಾಗುತ್ತದೆ. ಆದರೆ, ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ನಾವು ವಿಭಿನ್ನವಾಗಿ ಏನಾದರೂ ಪ್ರಯತ್ನ ಮಾಡಬೇಕು. ಎಲ್ಲರೂ ಹೋದ ದಾರಿಯಲ್ಲೇ ನಾವೂ ಹೋದರೆ, ಯಾವುದೇ ಪ್ರಯೋಜನವಾಗುವುದಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ನಾವು ರಿಸ್ಕ್ ತೆಗೆದುಕೊಳ್ಳಬೇಕು. ಎಲ್ಲರೂ ಮಾಡಿದ ಕೆಲಸಗಳನ್ನೇ ನಾವು ಮಾಡಿದರೆ ಏನೂ ಸಾಧಿಸುವುದಕ್ಕೆ ಆಗುವುದಿಲ್ಲ. ಬರೀ ನಮ್ಮ ಕ್ಷೇತ್ರವಷ್ಟೇ ಅಲ್ಲ. ಯಾವುದೇ ಕ್ಷೇತ್ರವಿರಲಿ, ಯಾರೇ ಆಗಲೀ, ರಿಸ್ಕ್ ತೆಗೆದುಕೊಳ್ಳದೇ ಜೀವನದಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಯಾವುದೇ ರಿಸ್ಕ್ ತೆಗೆದುಕೊಳ್ಳದೇ ನಾವು ಸುಮ್ಮನುಳಿದುಬಿಟ್ಟರೆ, 10ರಲ್ಲಿ 11ನೇಯವರಾಗುತ್ತೇವೆ. ಅದೇ ಬೇರೇನೋ ಮಾಡಬೇಕು ಎಂಬ ಉತ್ಸಾಹದಿಂದ, ಆಸಕ್ತಿಯಿಂದ ಹೆಜ್ಜೆ ಇಟ್ಟರೆ, ಆಗ ಖಂಡಿತಾ ಏನಾದರು ಮಾಡಬಹುದು. ಬಹುಶಃ ನಾನು ರಿಸ್ಕ್ ತೆಗೆದುಕೊಂಡು, ಜಿಮ್ನಾಸ್ಟ್ ಆಗದಿದ್ದರೆ, ನನ್ನ ಹೆಸರು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇವತ್ತು ದೀಪಾ ಕರ್ಮಾಕರ್ ಎಂಬ ಜಿಮ್ನಾಸ್ಟ್ ಇದ್ದಾರೆ ಎಂದು ಗೊತ್ತಾಗುವುದರ ಜತೆಗೆ, ಈ ಕ್ಷೇತ್ರಕ್ಕೆ ಹಲವು ಹೆಣ್ಮಕ್ಕಳು ಕಾಲಿಡುತ್ತಿದ್ದಾರೆ. ಬಹುಶಃ ನಾನು ಅಂದು ರಿಸ್ಕ್ ತೆಗೆದುಕೊಳ್ಳದಿದ್ದರೆ, ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲವೇನೋ?
- ದೀಪಾ ಕರ್ಮಾಕರ್
ಜಿಮ್ನಾಸ್ಟ್
No comments:
Post a Comment