ಕಥೆ-924
ವ್ಯಕ್ತಿಗಾಗಿ, ಸ್ವ ಆನಂದ ನೀಡುವ ಪ್ರಕೃತಿಗಾಗಿ
ತಾನಸೇನನು ಅಕ್ಬರ ಮಹಾರಾಜನ ಆಸ್ಥಾನಕವಿ. ಇಬ್ಬರಿಗೂ ಅಗಾಧ ಮೈತ್ರಿ. ದಶಕಗಳವರೆಗೆ ತಾನಸೇನ ಮಹಾರಾಜನಿಗಾಗಿ ಹಾಡಿದ. ತಾನಸೇನನ ಸಂಗೀತ ಸುಧೆಯಿಂದ ಅಕ್ಬರ ಮಹಾರಾಜನ ಜೀವನ ಶ್ರೀಮಂತವಾಗಿತ್ತು ಶೋಭಾಯಮಾನವಾಗಿತ್ತು...
ಒಂದು ದಿನ ಆಕಸ್ಮಿಕವಾಗಿ ಮಹಾರಾಜ ದೇಹತ್ಯಾಗ ಮಾಡಿದ. ರಾಜನ ಮೃತ ದೇಹದ ಎದುರು ನಿಂತ ತಾನಸೇನನ ಕಣ್ಣಿನಿಂದ ಎರಡು ಹನಿ ನೀರು ಉದುರಿದವು. ಯಾವ ರಾಜನಿಗಾಗಿ ದಶಕಗಳವರೆಗೆ ತಾನಸೇನ ಹಾಡಿದನೋ, ಆತನು ಇಂದಿಲ್ಲ. ಎಂದಿದ್ದರೂ ಈ ದೇಹ ನಶ್ವರ. ಇಂದು ಮಹಾರಾಜ, ನಾಳೆ ನಾನು, ನಾಡಿದ್ದು ಮಹಾಕವಿ. ಯಾರಾದರೇನು ಎಲ್ಲರೂ ಒಂದು ದಿನ ಈ ದೇಹ, ಈ ಲೋಕ ಬಿಡಲೇಬೇಕು. ಈ ಅರಿವು ಮೂಡುತ್ತಲೇ ತಾನಸೇನನ ಮನಸ್ಸು ನುಡಿಯಿತು- ನಾನು ಹಾಡಿದ್ದು ನಶ್ವರವಾದ ಈ ರಾಜನ ದೇಹಕ್ಕಾಗಿ, ರಾಜನು ಕೊಡುವ ಕಾಣಿಕೆಗಾಗಿ,ನನ್ನ ಶ್ರಮ ವ್ಯರ್ಥವಾಯಿತು.... ತಾನಸೇನನಿಗೆ ಸತ್ಯದ ಅರಿವಾಗಿತ್ತು. ಆದರೆ ಕಾಲ ಮಿಂಚಿತ್ತು.
ಅದೇ ತಾನಸೇನನ ಗುರು ಹರಿದಾಸ ಹಾಡಿದರೆ ಯಮುನೆಯ ತರಂಗಗಳು ಕುಣಿಯುತ್ತಿದ್ದವಂತೆ ! ಆತನ ರಾಗತಾಳಕ್ಕೆ ಅನುಸರಿಸಿ ಹಕ್ಕಿ ಪಕ್ಷಿಗಳು ನಲಿದಂತೆ ನಿಸರ್ಗವೇ ತಲೆದೂಗಿದಂತೆ
ಭಾಸವಾಗುತ್ತಿತ್ತು !! ಹರಿದಾಸನಿರುವಲ್ಲಿ ಗಂಧರ್ವಲೋಕವೇ ನಿರ್ಮಾಣವಾಗಿ ಅಲ್ಲಿ ಆನಂದವರ್ಷಾವ!!
ಗುರು-ಶಿಷ್ಯ ಇಬ್ಬರದೂ
ಅದ್ವಿತೀಯ ಸಂಗೀತ ಸೇವೆ. ಆದರೆ ಒಬ್ಬರದು ವ್ಯಕ್ತಿಗಾಗಿ ಮತ್ತೊಬ್ಬರದೂ ಸ್ವ ಆನಂದ ನೀಡುವ ಪ್ರಕೃತಿಗಾಗಿ ( ಸಾರ್ವಜನಿಕವಾಗಿ )
ಸತ್ಯದ ಸಂಸ್ಮರಣೆಯಿಂದ ಮುಕ್ತಿ...
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment