Saturday, October 25, 2025

 ಕಥೆ-923

ಬದುಕು ಬದಲಿಸುವ ಸೋಲುಗಳು

https://basapurs.blogspot.com/

ನಮಗೆಲ್ಲ ಗೊತ್ತಿರುವ ಹಾಗೆ ಸೋಲದೆ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಇತಿಹಾಸ ನಿರ್ಮಾಣವಾಗುತ್ತದೆ. ಒಂದು ವೇಳೆ ಸ್ಟೀವ್ ಜಾಬ್ ಅವರನ್ನು ಆಪಲ್ ಕಂಪನಿಯಿಂದ ಉಚ್ಚಾಟಿಸಿದಿದ್ದರೆ.ಮುಂದೆ ಅಪಲ್ ದಿವಾಳಿ ಆಗುವುದರಿಂದ ಕಾಪಾಡುತ್ತಿರಲಿಲ್ಲ.

ಒಂದು ವೇಳೆ ಹೆನ್ರಿ ಫೋರ್ಡ್ ಅವರು ತಮ್ಮ ಮೊದಲ ಎರಡು ಕಂಪನಿಗಳು ದಿವಾಳಿ ಆಗದಿದ್ದರೆ, ಅವರು ಫೋರ್ಡ್ ಎಂಬ ಯಶಸ್ವಿ ಕಂಪನಿಯನ್ನು ಕಟ್ಟುತ್ತಿರಲಿಲ್ಲ.

ಒಂದು ವೇಳೆ ನಾರಾಯಣಮೂರ್ತಿ ಅವರಿಗೆ ವಿಪ್ರೊ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದರೆ ಅವರು ಇನ್ಫೋಸಿಸ್ ಅನ್ನು ಕಟ್ಟುತ್ತಿರಲಿಲ್ಲ.ಒಂದು ವೇಳೆ ಥಾಮಸ್ ಅಲ್ವಾ ಎಡಿಸನ್ ಅನ್ನು ಮಂದಬುದ್ದಿಯ ಹುಡುಗ ಎಂದು ಶಾಲೆಯಿಂದ ಹೊರಹಾಕದಿದ್ದರೆ ಅವನು ಮುಂದೆ ಒಂದು ದಿನ ಬಲ್ಡ್ ಅನ್ನು ಕಂಡು ಹಿಡಿದು ಜಗತ್ತನ್ನು ಬೆಳಗುತ್ತಿರಲಿಲ್ಲ.ಒಂದು ವೇಳೆ ಬಿಲ್ ಗೇಟ್ಸ್ ಕಾಲೇಜಿನಿಂದ ಡ್ರಾಪೌಟ್ ಆಗದಿದ್ದಲ್ಲಿ ಅವನು ಮುಂದೆ ಮೈಕ್ರೋಸಾಫ್ಟ್ ಅನ್ನು ಕಟ್ಟುತ್ತಿರಲಿಲ್ಲ. ಸಂದೀಪ್ ಮಹೇಶ್ವರಿ ಮಾಡಲಿಂಗ ಕ್ಷೇತ್ರದಲ್ಲಿ ವಿಫಲರಾಗದಿದ್ದಲ್ಲಿ ಬೆಸ್ಟ್ ಮೋಟವೇಷನಲ್ ಸ್ಪೀಕರ್ ಆಗುತ್ತಿರಲಿಲ್ಲ..ಸಚಿನ್ ತೆಂಡೂಲ್ಕರ್ 10ನೇ ತರಗತಿ ಫೇಲಾದ ಮೇಲೆ ಕ್ರಿಕೆಟ್ ದೇವರಾಗಿದ್ದು, ಅಂಬೇಡ್ಕರ್ ಅವರಿಗೆ ಆದ ಅವಮಾನ ಅವರಲ್ಲಿ ಕಲಿಯುವ ಛಲ ಹುಟ್ಟುತ್ತಿರಲಿಲ್ಲ ಮತ್ತು ಅವರು ನಮ್ಮ ದೇಶದ ಸಂವಿಧಾನವನ್ನು ಬರೆಯುತ್ತಿರಲಿಲ್ಲ.

ಇದನ್ನೆಲ್ಲ ನೋಡಿದ ಮೇಲೆ ನಮಗೆ ತಿಳಿಯುವುದೇನೆಂದರೆ ಎಷ್ಟೋ ಜನಜೀವನದಲ್ಲಿ ಸೋತಿದ್ದಾರೆ.ಸೋತು ಗೆದ್ದಿದ್ದಾರೆ.

ವಿನಾಕಾರಣ ಕೊರಗುವುದನ್ನು ಬಿಟ್ಟು ಕೆಲಸ ಮಾಡಿ ಮತ್ತು ಯಶಸ್ವಿ ವ್ಯಕ್ತಿಯಾಗಬೇಕು, ಜೀವನದಲ್ಲಿ ಅವಮಾನಗಳು ಸಾಮಾನ್ಯ, ಅವು ಆಗಲೇಬೇಕು.. ಅವಮಾನ ಆಗಲಾರದೆ ಸನ್ಮಾನ ಮಾಡಿಸಿಕೊಂಡವರ ಸಂಖ್ಯೆ ಬಹಳ ಕಡಿಮೆ.ಅವಮಾನ ಆದಾಗಲೇ ನಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ.ನೋವು ಆದಲ್ಲಿ ಅತ್ಮಸಾಕ್ಷಿಗೆ ಜವಾಬ್ದಾರಿ ಬರುತ್ತದೆ.ಅವಮಾನ ಆದಾಗಲೇ ಮನಸ್ಸಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟಿಕೊಳ್ಳುತ್ತದೆ.


ಪ್ರೊ: ಧರ್ಮರಾಜ್ ಕುಂಬಾರ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು