Wednesday, October 8, 2025

 ಕಥೆ-904

ಹಿರಿಯರಿಗೆ, ಅನ್ನ ಕಿಂತಲೂ ಅಪ್ಪುಗೆ ಮುಖ್ಯ... ಚಿನ್ನಕ್ಕಿಂತಲೂ ಕಾಳಜಿ ಮುಖ್ಯ.

https://basapurs.blogspot.com/


*ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ.*

ನ್ಯಾಯದೀಶರು : *" ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು.*

ತಂದೆ : *"ಇಲ್ಲಾ ಸ್ವಾಮಿ, ನನಗೆ ನನ್ನ ಮಗನ ಕಡೆಯಿಂದ, ಪ್ರತಿತಿಂಗಳು, ಸ್ವಲ್ಪವಾದರೂ, ಬೇಕೇಬೇಕು ". ಎಂದ.*

*ಹಠಕ್ಕೆ ಬಿದ್ದ ತಂದೆಗೆ ನ್ಯಾಯ ಕೊಡಬೇಕೆಂದು, ಆ ಮಗನನ್ನು, ಕೋರ್ಟಿಗೆ ಬರಲು ಹೇಳಿದ ಜಡ್ಜ್, ಕೇಸ್ ಮುಂದಕ್ಕೆ ಹಾಕಿದರು.*

*****

*ಕೋರ್ಟ್ ನಿರ್ಧರಿಸಿದ, ದಿನ, ಮಗ ಬಂದು, ಕಟಕಟೆಯಲ್ಲಿ ನಿಂತುಕೊಂಡ.*

ನ್ಯಾಯಾದೀಶರು :

*" ನಿಮ್ಮ ತಂದೆ, ನಿಮ್ಮಿಂದ ಪ್ರತಿತಿಂಗಳು, ಮಾಶಾಸನ ಕೇಳುತ್ತಿದ್ದಾರೆ. ಕೊಡಬೇಕಾಗುತ್ತೆ ". ಅಂದರು.*

ಮಗ :

*" ಸ್ವಾಮಿ, ಅವರಲ್ಲಿಯೇ ಧನ ಕನಕ, ಆಸ್ತಿ, ಹೇರಳ ವಾಗಿದೆ".* 

ನ್ಯಾಯಾದೀರು :

*ಮತ್ತೇಕೆ ಕೇಳುತ್ತಿದ್ದಾರೆ ಅಂತಾ ನಿನಗೇನಾದರೂ ಗೊತ್ತಾ?*

ಮಗ :

*"ಇಲ್ಲ, ಸ್ವಾಮಿ".*

ನ್ಯಾಯಾದೀಶರು: 

*"ಯಜಮಾನರೇ, ನೀವೇಕೆ ಹಠವಿಡಿದಿದ್ದೀರಿ?* 

ತಂದೆ :

*-"ಸ್ವಾಮಿ, ಇದು ಹಠವಲ್ಲ, ನನ್ನ ಹಕ್ಕು"* 

ನ್ಯಾಯಾದೀಶರು :

*ಹೌದೌದು, ಹೇಳಿ ಎಷ್ಟು ನಿರೀಕ್ಷಿಸುತ್ತೀರಿ?*

ತಂದೆ:

*"ಪ್ರತಿ ತಿಂಗಳ ಎರಡನೇ ತಾರೀಕಿಗೊಮ್ಮೆ, ಅವನೇ ಬಂದು ನೂರು ರೂಪಾಯಿ ಕೊಡಬೇಕು".*

*ಕೋರ್ಟಿನಲ್ಲಿದ್ದ ವಕೀಲರೆಲ್ಲಾ, ಗೊಳ್ಳೆoದು ನಕ್ಕರು.*

ನ್ಯಾಯಾದೀಶರು :

*ಸೈಲೆನ್ಸ್....  , ಸೈಲೆನ್ಸ್......!*

ಮಗ :

*"ಸರಿ ಸ್ವಾಮಿ, ಕೊಡುತ್ತೇನೆ".*

ನ್ಯಾಯಾದೀಶರು :

*ಕೊಡುತ್ತೇನೆಂದು ಒಪ್ಪಿಕೊಂಡಿದ್ದಾನೆ. ಮತ್ತೇನೂ, ತಕರಾರು ಇಲ್ಲವಾ.....?*

ತಂದೆ :

*ಇಲ್ಲ ಸ್ವಾಮಿ, ಮತ್ತೇನಿಲ್ಲ, ಅಷ್ಟು ಕೊಟ್ಟರೆ ಸಾಕು.*

ನ್ಯಾಯಾದೀಶರು : *ತೀರ್ಪು ಬರೆದು ಓದಿ ಮುಗಿಸಿದರು, ಕೋರ್ಟ್ ಕಲಾಪದ ಮುಕ್ತಾಯವನ್ನೂ ಮಾಡಿ, ತಮ್ಮ ಆಂಟಿ ಚಂಬರ್ ಒಳಗೆ ಹೋಗಿ, ಆ ಶ್ರೀಮಂತನನ್ನು ಕರೆತರಲು ಹೇಳಿದರು.*

*ಇವರು, ಬಂದರು.*

ನ್ಯಾಯಾದೀಶರು :

*ಅಲ್ಲ, ನೀವೇಕೆ ಕೇವಲ ನೂರು ರೂಪಾಯಿಯನ್ನೇ ಪ್ರತಿ ತಿಂಗಳು ಕೊಡಬೇಕೆಂದು ಕೇಳಿದ್ರಿ?*

ತಂದೆ : 

*"ಸ್ವಾಮಿ, ನನಗೆ ಅವನ ದುಡ್ಡಿನ ಅವಶ್ಯಕತೆಯೇ ಇಲ್ಲ, ನನಗೆ ಅವನೊಬ್ಬನೇ ಮಗ, ಚೆನ್ನಾಗಿ ಓದಿದ್ದಾನೆ,ದೂರದ ನಗರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ನನ್ನನ್ನು ನೋಡಲು ಅವನು ಬರುವುದೇ ಇಲ್ಲ. ಆದರೆ, ನನಗೆ ಅವನನ್ನು ತಿಂಗಳಿಗೊಮ್ಮೆಯಾದರೂ ನೋಡಬೇಕೆಂಬ ಆಶೆ, ಆ ಕಾರಣಕ್ಕಾಗಿ, ಕೋರ್ಟ್ ಆದೇಶದಂತೆ ಅವ ನೂರು ರೂಪಾಯಿ ಕೊಡಲಿಕ್ಕಾದರೂ ತಪ್ಪದೇ ಬರಬೇಕಲ್ಲ. ಅವಾಗಲಾದರೂ, ಅವನನ್ನು ಕಣ್ಣು ತುಂಬಾ ನೋಡಬಹುದೆoದು, ಕೊರ್ಟ್ ಮೂಲಕ ತಾಕೀತು ಮಾಡಿಸಿದೆ ಅಷ್ಟೇ.* 

********

*ಅಂದೇ ಕೋರ್ಟಿಗೆ ಮೂರು ದಿನ ರಜೆ ಹಾಕಿದ ಜಡ್ಜ್, ತಂದೆಗೆ ಫೋನ್ ಮಾಡಿ, ನಾನು ಊರಿಗೆ ಬರುತ್ತಿದ್ದೇನೆ,* *ಏನಾದರೂ ತರುವುದಿದೆಯಾ? ಎಂದ. ಅತ್ತಲಿಂದ,* 

*ಸಣ್ಣಗಿನ ಧ್ವನಿಯಲ್ಲಿ ಕೇಳಿಸಿದ್ದು,*

*"ನೀನು ಬಾರಪ್ಪ ಸಾಕು ಬೇರೇನೂ ಬೇಕಿಲ್ಲ. ಎಷ್ಟೋ ದಿನ ಆಯ್ತು ನಿನ್ನ ನೋಡದೇ ".* 

******

*ಹಿರಿಯರಿಗೆ, ಅನ್ನ ಕಿಂತಲೂ ಅಪ್ಪುಗೆ ಮುಖ್ಯ.* 

*ಚಿನ್ನಕ್ಕಿಂತಲೂ ಕಾಳಜಿ ಮುಖ್ಯ.*

*ಅಲ್ವಾ............*

ಸಂಗ್ರಹ: ಸೌಜನ್ಯ ಹೊಟ್ಟಿನ ಹಿರೇಮ್ಯಾಗೇರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು