ಕಥೆ-980
ಪರಿಶ್ರಮದ ಬೆವರಿನಲ್ಲಿ ಯಶಸ್ಸಿನ ಸುವಾಸನೆ ಇರುತ್ತದೆ.
(ಪರಿಶ್ರಮಕ್ಕೆ ತಕ್ಕ ಫಲವಿದೆ)
ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ,ಅದು ಸಮಯ ತೆಗೆದುಕೊಳ್ಳಬಹುದು, ಆದರೆ ಫಲ ನೀಡುತ್ತದೆ.ನಿರಂತರ ಪ್ರಯತ್ನ ಮಾಡಿದವನು ಸೋಲುವುದಿಲ್ಲ. ಕಷ್ಟಪಟ್ಟು ಮಾಡಿದ ಕೆಲಸದ ಫಲ ಸದಾ ಸಿಹಿಯಾಗಿರುತ್ತದೆ. ಅದೃಷ್ಟ ನಂಬುವವರು ಕಾಯುತ್ತಾರೆ, ಪರಿಶ್ರಮ ನಂಬುವವರು ಸಾಧಿಸುತ್ತಾರೆ. ಅಂತಹ ಒಬ್ಬ ಸಾಧಕ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಕರಣ್ ಬೇಟಗೇರಿ...
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಆಯೋಜಿಸಿದ್ದ 69ನೇ ರಾಷ್ಟ್ರಮಟ್ಟದ 17ವರ್ಷ ವಯೋಮಿತಿಯ ಬಾಲಕರ ಟೇಕ್ವಾಂಡೋ 48 kg ವಿಭಾಗದಲ್ಲಿ ಕರಣ್ ಸುಭಾಷ್ ಬೆಟಗೇರಿ ಮೊದಲ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದು ಒಂದು ಸಾಧನೆ ಅಲ್ಲವೆ...?
ನಮಗೆ ಟೆಕ್ವಾಂಡೊ ಎಂದರೇನು ಎಂಬ ಪ್ರಶ್ನೆ ಬರುತ್ತದೆ? ಇದೊಂದು ಪ್ರಸಿದ್ಧ ಕೊರಿಯನ್ ಯುದ್ಧಕಲೆ, ಆತ್ಮರಕ್ಷಣೆ, ಶಿಸ್ತು ಮತ್ತು ದೈಹಿಕ–ಮಾನಸಿಕ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಿದೆ. ಒಲಂಪಿಕ್ಸ್ ಆಟದಲ್ಲೂ ಸಹ ಇದನ್ನು ಸೇರಿಸಲಾಗಿದೆ.
ಕರಣ್ ಅವರು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಖುಷಿ ಮಾತ್ರ ಕಾಣುತ್ತದೆ... ಆದರೆ ಅದರ ಹಿಂದೆ ಅವರು ಪರಿಶ್ರಮ ಪಟ್ಟದ್ದು, ಸುದೀರ್ಘ 12 ವರ್ಷ..
ಕರಣ್ ಪರಿಶ್ರಮದ ಹಿಂದೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಪ್ರೋತ್ಸಾಹ ನೀಡಿದವರು ಅವರ ತಂದೆ(ಶ್ರೀ ಸುಭಾಷ್ ಬೆಟಿಗೇರಿ) ಮತ್ತು ತಾಯಿ (ಶ್ರೀಮತಿ ವಿಜಯಲಕ್ಷ್ಮಿ ಸುಭಾಷ್ ಬೆಟಿಗೇರಿ). ಇವರು ಕರಣ್ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅದು ಅನಾವರಣಗೊಳ್ಳಲು ಮುಖ್ಯ ಕಾರಣಿಕರ್ತರು...
ಬೆಳೆಯುವ ಪೈರು ಮೊಳಕೆಯಲ್ಲಿ, ಎಂಬಂತೆ ಪ್ರತಿಯೊಂದು ಮಗು ವಿಶೇಷನೇ, ವಿಶೇಷ ಸಾಮರ್ಥ್ಯ ಇದ್ದೇ ಇರುತ್ತದೆ ಇವತ್ತು ಶಿಕ್ಷಕರಾದ ನಾವು ಮತ್ತು ಪಾಲಕರು ಅದನ್ನು ಗುರುತಿಸುವಂತಹ ಕೆಲಸ ಮಾಡಬೇಕಿದೆ, ನಂತರ ಪ್ರೋತ್ಸಾಹ ನೀಡಿದರೆ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ... ಅದು ಅಲ್ಲದೇ ಎಷ್ಟೋ ಮಕ್ಕಳು ತಂದೆ ತಾಯಿಗಳ, ಶಿಕ್ಷಕರ ಪ್ರೋತ್ಸಾಹದ ಸಲಹೆಗಳನ್ನು ಪಾಲಿಸದೆ ಎಷ್ಟೋ ಪ್ರತಿಭಾವಂತ ಮಕ್ಕಳು, ಹುಚ್ಚು ಅಭಿಮಾನ ಅಂದಭಿಮಾನ ಬೆಟ್- ಜೂಜು, ಮೋಜು ಮಸ್ತಿ ದುಶ್ಚಟಗಳಿಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ...
ಇವತ್ತಿನ ಜನರೇಶನನಲ್ಲಿ ಹೆಚ್ಚು Potential ಇದೆ, ಅವರು ಸ್ವಯಂ ಅವಲೋಕನ ಮಾಡಿಕೊಳ್ಳಬೇಕು. ಅದೇನೆಂದರೆ, ನಮ್ಮಲ್ಲಿರುವ ವಿಶೇಷತೆ ಏನು? ಅದನ್ನು ಗುರುತಿಸಿಕೊಂಡು ಆ ರಂಗದಲ್ಲಿ ಸತತ ಪ್ರಯತ್ನ ಮಾಡಿದರೆ ನಾವು ಸಾಧನೆ ಮಾಡಬಹುದು ಎಂದು... ನಿರಂತರ ಪ್ರಯತ್ನದಿಂದ ಸಾಧನೆ ಹಾದಿ ಸುಗಮವಾಗುತ್ತದೆ..
ಸಾಧಿಸುವ ಮಕ್ಕಳಿಗೆ ಕರಣ್ ಮಾದರಿಯಾಗಿ ನಿಲ್ಲುತ್ತಾರೆ.. ಅವರು ಮುಂದೆ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆಯಲಿ, ನಮ್ಮ ದೇಶದ ಪತಾಕೆಯನ್ನು ಇನ್ನು ಎತ್ತರಕ್ಕೆ ಹಾರಿಸಲಿ... ಎಂದು ಶುಭ ಹಾರೈಸೋಣ...
ಪರಿಶ್ರಮ ನಮ್ಮ ಮೌನವಾಗಿದ್ದಾಗ, ಪ್ರತಿಫಲ ನಮ್ಮ ಶಬ್ದವಾಗಿರುತ್ತದೆ.
ಸಮಯ ಪರೀಕ್ಷಿಸಬಹುದು, ಪರಿಶ್ರಮ ಎಂದಿಗೂ ಸೋಲುವುದಿಲ್ಲ.
-ಶ್ರೀ ಶಂಕರಗೌಡ ಬಸಾಪೂರ

No comments:
Post a Comment