Thursday, December 25, 2025

 ಕಥೆ-985


ಮೌಲ್ಯವಿಲ್ಲದ ಯಶಸ್ಸು ದೀರ್ಘ ಕಾಲಾ ಉಳಿಯದು.. --ಯೇಸು


ಪ್ರತೀ ವರ್ಷ ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಈ ದಿನ ಯೇಸುಕ್ರಿಸ್ತ್ ಜನಿಸಿದ ದಿನ. ಕೆಟ್ಟದನ್ನು ತೊಡೆದು ಹಾಕಲು ಯೇಸುಕ್ರಿಸ್ತ್ ಜನಿಸಿದ ಎಂದು ಈ ದಿನವನ್ನು ಕ್ರೈಸ್ತ ಬಾಂಧವರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.


ಕೊಲ್ಲು- ಗೆಲ್ಲು, ಹೊಡಿ-ಬಡಿಗಳನ್ನೇ ಗುನುಗುನುಸುತ್ತಿರುವ ಮಾನವನಲ್ಲಿ ತಾಯ್ತನವನ್ನೂ ಹೆಂಗರುಳನ್ನು ಕಸಿ ಮಾಡಿದ ಸಂಭ್ರಮದ ನೆನಪೇ ಕ್ರಿಸ್ಮಸ್‌. ಮಲ್ಲಿಗೆ ಮನಸ್ಸಿನ ಮಮತೆಯ ಹಬ್ಬ ಕ್ರಿಸ್‌ಮಸ್‌


ಯೇಸು ಬಾಳಿ ಬದುಕಿದ್ದು 33 ವರುಷವಾದರೂ ಆತನು ಬಿಟ್ಟು ಹೋದ ಉಪದೇಶದ ಬಳುವಳಿ ಇಂದಿಗೂ ಪ್ರಸ್ತುತ. ಬಡಗಿಯಾಗಿದ್ದ ಯುವಕನೊಬ್ಬ, ತನ್ನ ಬಡಗಿ ಕಾರ್ಯದ ಜೊತೆಗೆ ಚರಿತ್ರೆಯನ್ನು ಪ್ರವೇಶಿಸಿದ. 


 ಯೇಸು ಜನರಿಗೆ ಉತ್ತಮ ಮೌಲ್ಯಗಳನ್ನು ಭೋದಿಸುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಯೇಸುವನ್ನು ಸಾಯಿಸಲು ನಿರ್ಧರಿಸಿದರು. ಯೇಸುವನ್ನು ಶಿಲುಬೆಗೇರಿಸುವ ಮೂಲಕ ಶಿಕ್ಷೆ ನೀಡಿದರು.


ತನ್ನನ್ನು ಶಿಲುಬೆಗೇರಿಸಿದವರನ್ನೇ “ಹೇ ಪ್ರಭು ತಾವೇನು ಮಾಡುತ್ತಿದ್ದೇವೆ ಎಂದು ಇವರಿಗೆ ತಿಳಿಯದು. ಇವರನ್ನು ಕ್ಷಮಿಸು” ಎಂದು ಹೇಳಿದ ದಯಾಸಾಗರ ಯೇಸು ಕ್ರಿಸ್ತ.


ನಂತರ ಶಿಕ್ಷೆ ವಿಧಿಸಿದ ಜನರು ಪಶ್ಚಾತಾಪ ಪಟ್ಟು, ಯೇಸುವಿನ ಮೌಲ್ಯಗಳನ್ನು ಅರಿತು ಅವನ ಜನ್ಮದಿನವನ್ನು ಕ್ರಿಸ್ಮಸ್ ದಿನವಾಗಿ ಆಚರಿಸಲು ಶುರು ಮಾಡಿದರು..


ಮಾನವಚರಿತ್ರೆಯ ಕೇಂದ್ರ ಬಿಂದುವಾದ ಇವನ ಜನನ ಕಾಲವನ್ನೇ ಕಾಲ ಮಾಪನವಾಗಿಟ್ಟುಕೊಂಡು ಕ್ರಿಸ್ತ ಹುಟ್ಟುವ ಮುಂಚೆ ದಿನಗಳನ್ನು ಕ್ರಿಸ್ತಪೂರ್ವ BC ಎಂದು ಕ್ರಿಸ್ತ ಹುಟ್ಟಿದ ನಂತರದ ದಿನಗಳನ್ನು ಕ್ರಿಸ್ತಶಕ AD ಎಂದು ಎಂದು ಎಂದು ಪರಿಗಣಿಸಿ ಕಾಲಮಾಪನವನ್ನು ಮಾಡಲಾಯಿತು


ನಾವು ದೊಡ್ಡವರಾಗಬೇಕೆಂದರೆ, ಮೊದಲು ಒಳ್ಳೆಯವರಾಗಬೇಕು. ಜೀವನದ ಗುರಿ ಕೇವಲ ಯಶಸ್ಸು ಅಲ್ಲ, ಅದರಲ್ಲಿ ಅರ್ಥಪೂರ್ಣತೆ ಇರಬೇಕು...

ಮೌಲ್ಯವಿಲ್ಲದ ಯಶಸ್ಸು ದೀರ್ಘ ಕಾಲಾ ಉಳಿಯದು.. ಎಂಬ ಸಾರತೆಯನ್ನು ಯೇಸು ಸಾರಿದ್ದಾರೆ


ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು 

-ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು