ಕಥೆ-965
ಸಸ್ಯಗಳ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..
(ಸ್ಪರ್ಧೆ, ವಿರೋಧ, ಹೆದರಿಕೆ, ಇವೆಲ್ಲವೂ ‘ಸಮರ್ಪಣೆಯ ಶಕ್ತಿಯ’ ಮುಂದೆ ಏನೂ ಅಲ್ಲ.)
https://basapurs.blogspot.com
ವಿಜ್ಞಾನ “ಯೂರೋಪಿನವರದೇ” ಎಂದುಕೊಂಡಿದ್ದ ಕಾಲವದು.. ಭಾರತದ ಒಬ್ಬ ವಿಜ್ಞಾನಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದ..
ಒಂದು ದಿನ ಒಬ್ಬ ಯುವಕನ ಚಿತ್ತ ಒಂದು ಮರದತ್ತ ಇತ್ತು... ಮನೆಯ ಆವರಣದಲ್ಲಿ ಮರದಂತೆ ಕಾಣುತ್ತಿದ್ದ ಸಸ್ಯ ಅವನ ಸ್ಪರ್ಶಕ್ಕೆ ಸ್ಪಂದಿಸಿತು. ಪುನಃ ಪ್ರಯೋಗಶೀಲನಾದ..
ಆಶ್ಚರ್ಯದಿಂದ ಅದರ ಬಗ್ಗೆ ಯೋಚಿಸಲು ಶುರು ಮಾಡಿದ..
“ಸಸ್ಯಗಳು ಶಾಖಕ್ಕೆ ಮಳೆಗೆ ಮತ್ತು ಚಳಿಗೆ ಸ್ಪಂದಿಸುತ್ತವೆಯೇ? ಅವುಗಳಿಗೆ ಮನಸ್ಸು ಇದೆಯಾ? ನೋವು/ಸಂತೋಷಕ್ಕೆ ಪ್ರತಿಕ್ರಿಯಿಸುತ್ತವೆಯಾ?”
ಈ ಪ್ರಶ್ನೆ ನಿದ್ರೆ ಬಾರದಂತೆ ಮಾಡಿತು.
ವಿಜ್ಞಾನಕ್ಕಾಗಲಿ, ಪ್ರಯೋಗಾಲಯಕ್ಕೆ ಆಗಲಿ, ಸರ್ಕಾರದಿಂದ ಯಾವುದೇ ಧನ ಸಹಾಯ ಇರಲಿಲ್ಲ.. ಪ್ರಯೋಗಾಲಯದ ಬೇಡಿಕೆಗೆ ಸ್ಪಂದಿಸದ ಕಾಲವದು.
ಆದರೂ ಅವನು ಕೈಬಿಡದೆ, ಮನೆಯಲ್ಲೇ ಸಂಶೋಧನೆ ಶುರು ಮಾಡಿದ. ಕೊನೆಗೆ ಒಂದು ದಿನ, ಸ್ವತಃ ಗಾಜು, ತಂತಿ, ಲೋಹಗಳಿಂದ ಒಂದು ಉಪಕರಣ ತಯಾರಿಸಿಬಿಟ್ಟ.. ಆ ಉಪಕರಣದ ಹೆಸರೇ *ಕ್ರೆಸ್ಕೋಗ್ರಾಫ್..* ಇದರ ಮೂಲಕ ಸಸ್ಯಗಳ ಚಲನೆಯನ್ನು ಜಗತ್ತಿಗೆ ತೋರಿಸಿದ ಸಸ್ಯಗಳು ಪ್ರಚೋದನೆಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ...
ಯೂರೋಪಿನ ವಿಜ್ಞಾನಿಗಳು ಮೌನವಾಗಿದ್ದರು. ಆಶ್ಚರ್ಯ ಚಿಕಿತರಾಗಿದ್ದರು.. ಸಸ್ಯಗಳು ಪ್ರಚೋದನೆಗೆ ಪ್ರತಿಕ್ರಿಯೆ ನೀಡುತ್ತವೆ ಎಂದು ಜಗತ್ತಿಗೆ ಸಾರಿ ಅದನ್ನು ಪ್ರಾಯೋಗಿಕವಾಗಿ ತೋರಿಸಿದ ಹೆಮ್ಮೆಯ ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್..
ಬಹಳಷ್ಟು ವಿಜ್ಞಾನಿಗಳು ಹೇಳಿದ್ದೇನೆಂದರೆ..
“ನಾವು ಬೋಸ್ ಅವರಿಂದ ಪ್ರಕೃತಿ ಬಗ್ಗೆ, ಸಸ್ಯಗಳ ಬಗ್ಗೆ ಹೊಸ ಅಧ್ಯಾಯವನ್ನೇ ಕಲಿತಿದ್ದೇವೆ.” ಎಂದು..
ತದನಂತರ ಬೋಸ್ ಅವರು ವಿಶ್ವಕ್ಕೆ ಸಸ್ಯವಿಜ್ಞಾನ, ರೇಡಿಯೋ ವಿಜ್ಞಾನ, ಮೈಕ್ರೋವೇವ್ ತಂತ್ರಜ್ಞಾನ—ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಾರ್ಗತೋರಿದರು.
ಸ್ಪರ್ಧೆ, ವಿರೋಧ, ಹೆದರಿಕೆ, ಇವೆಲ್ಲವೂ ‘ಸಮರ್ಪಣೆಯ ಶಕ್ತಿಯ’ ಮುಂದೆ ಏನೂ ಅಲ್ಲ.
ಒಬ್ಬ ವ್ಯಕ್ತಿಯ ಕುತೂಹಲವೇ ವಿಶ್ವದ ಹೊಸ ಜ್ಞಾನಕ್ಕೆ ಜನ್ಮ ಕೊಡಬಹುದು.
-ಶಂಕರಗೌಡ ಬಸಾಪೂರ
No comments:
Post a Comment