Tuesday, December 2, 2025

 ಕಥೆ-959

ಸೂರ್ಯನ ಅಂತ್ಯ ಕಂಡ ವಿಜ್ಞಾನಿ

https://basapurs.blogspot.com

14 ವರ್ಷದ ಬಾಲಕ ಒಂದು ವಿಜ್ಞಾನ ಪುಸ್ತಕ ಓದುತ್ತಿದ್ದಾಗ ಒಂದು ವಿಚಾರ ಕಾಡಿತು... “ನಕ್ಷತ್ರಗಳು ಸಾಯುತ್ತವೆಯೆ? ಸಾಯುವಾಗ ಏನಾಗುತ್ತದೆ? ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ, ನಕ್ಷತ್ರಗಳ ಹುಟ್ಟು ಮತ್ತು ನಕ್ಷತ್ರಗಳು ಹೇಗೆ ಸಾಯುತ್ತವೆ ? 


ನಕ್ಷತ್ರಗಳ ಬಗೆಗಿನ ಅದ್ಭುತವಾದ ಕುತೂಹಲವು ಆ ಬಾಲಕನಿಗೆ ಸಂಶೋಧನೆಗೆ ದಾರಿ ಮಾಡಿತು... 


ಆ ವಿದ್ಯಾರ್ಥಿಯ ಕುತೂಹಲವು ಮುಂದೆ ನಕ್ಷತ್ರಕ್ಕೆ ಸಂಬಂಧಿಸಿದ ಲೆಕ್ಕ ಹಾಕಿ ಕಂಡುಕೊಂಡದ್ದು ಏನೆಂದರೆ

ನಕ್ಷತ್ರಗಳು ದೊಡ್ಡದಾಗಿದ್ದಾಗ ಅವು ಕುಸಿದು “ಕಪ್ಪು ರಂಧ್ರ” (Black Hole) ಆಗುತ್ತವೆ. ಎಂಬ ತತ್ವವನ್ನು ಮಂಡಿಸಿದರು


ಆ ಕಾಲದಲ್ಲಿ ವಿಶ್ವದ ದೊಡ್ಡ ವಿಜ್ಞಾನಿಗಳೆಲ್ಲಾ,

ನೋಬೆಲ್ ವಿಜೇತರೇ,

ಅವರ ತತ್ವವನ್ನು ನಂಬದೇ ನಿಂದಿಸಿದರು

“ಇದು ಅಸಾಧ್ಯ!

ನಿನ್ನ ಲೆಕ್ಕ ತಪ್ಪಾಗಿದೆ.” ಎಂದು ಅವರನ್ನು ನಿಂದಿಸಿದ


ಎಂಟು ವರ್ಷಗಳ ಕಾಲ ಅವರ ಮೇಲೆ ಅಪಹಾಸ್ಯ ನಡೆಯಿತು.

ಆದರೆ ಅವರ ಪ್ರಯತ್ನ ಕೈಬಿಡಲಿಲ್ಲ.

ಮರು ಲೆಕ್ಕ ಹಾಕಿ ತೋರಿಸಿದ....


ಕೊನೆಗೆ ವಿಶ್ವವೇ ಒಪ್ಪಿಕೊಂಡಿತು ಮತ್ತು ಅಪ್ಪಿಕೊಂಡಿತು ಆ ಸಿದ್ಧಾಂತವೇ ಸರಿ ಎಂದು....


  ನಕ್ಷತ್ರಗಳ ಗಾತ್ರ, ಭಾರ, ಜೀವನ ಮತ್ತು ಅಂತ್ಯವನ್ನು ನಿರ್ಧರಿಸುವ ನಿಯಮಗಳನ್ನು ಕಂಡುಹಿಡಿದ.. ಭಾರತದ ಮಹಾನ್ ವಿಜ್ಞಾನಿ. ಅವರೇ ಸುಬ್ರಹ್ಮಣ್ಯನ್ ಚಂದ್ರಶೇಖರ್..


ಅವರು ಕಂಡುಹಿಡಿದ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ನಿಯಮಕ್ಕೆ ಅವರ ಗೌರವಾರ್ಥ “ಚಂದ್ರಶೇಖರ್ ಮಿತಿ” ಎಂದು ಹೆಸರಿಡಲಾಗಿದೆ... ಅದು ಖಗೋಳಶಾಸ್ತ್ರದಲ್ಲಿ ಅತ್ಯಂತ ಮಹತ್ವದ ನಿಯಮಗಳಲ್ಲಿ ಒಂದು.


1983ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ... 


ವಿಜ್ಞಾನದಲ್ಲಿ ಹಾಸ್ಯ, ನಿಂದೆ, ವಿರೋಧಗಳನ್ನು “ಪ್ರಗತಿಯ ಪರೀಕ್ಷೆ”. ಎಂದುಕೊಳ್ಳಬೇಕು..

ಕುತೂಹಲವಿದ್ದರೆ ವಿಜ್ಞಾನ ಜೀವಂತವಾಗಿರುತ್ತದೆ... ಧೈರ್ಯವಿದ್ದರೆ ವಿಶ್ವವೇ ನಿಮಗೆ ತಲೆಬಾಗುತ್ತದೆ.

ಅಡೆತಡೆಗಳು ಬಂದರೂ ನಿಲ್ಲಬಾರದು ನಮ್ಮ ಕನಸು....

 

ಒಂದು ಆವಿಷ್ಕಾರ ಒಂದು ದೇಶವನ್ನೇ /ವಿಶ್ವವನ್ನೇ ಬದಲಾಯಿಸಬಲ್ಲದು..

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಜ್ಞಾನಿಯ ಕಿರಣ ಇದ್ದೇ ಇರುತ್ತದೆ ....

-ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು