ಕಥೆ-960
ದುಃಖವನ್ನು ಜಯದಲ್ಲಿ ಪರಿವರ್ತಿಸಿದ ಸ್ಪೂರ್ತಿಯ ಪ್ರತಿಮೆ..
ಒಡಿಶಾದ ಮಯೂರಭಂಜ್ ಜಿಲ್ಲೆಯ ಸಣ್ಣ ಸಂತಾಲಿ ಗ್ರಾಮದಲ್ಲಿ ಜನಿಸಿದ ಈ ಮಹಿಳೆ, ಸರಳತೆಯ ಮಣ್ಣಿನಲ್ಲಿ ಬೆಳೆದರೂ ಕನಸುಗಳು ಆಕಾಶದಷ್ಟು ಎತ್ತರವಾಗಿದ್ದವು.
ಅವರ ಜೀವನ ದುಃಖದಿಂದ ತುಂಬಿದ ಕಥೆಯಾಗಿತ್ತು, ಏಕೆಂದರೆ 2009 ರಿಂದ 2015ರವರೆಗೆ ಇಬ್ಬರು ಪುತ್ರರು, ಪತಿ, ತಾಯಿ, ಸಹೋದರ—ಎಲ್ಲರನ್ನು ಕಳೆದುಕೊಂಡ ಅವರು ಅಪಾರ ನೋವಿನ ಜೀವನ ನಡೆಸಿದರು.. ಇಷ್ಟೆಲ್ಲಾ ನೋವಿನ ಮಧ್ಯೆ ಕುಗ್ಗಲಿಲ್ಲ. ಬ್ರಹ್ಮಕುಮಾರಿ ಆಧ್ಯಾತ್ಮಿಕ ಮಾರ್ಗವನ್ನು ಹಿಡಿದು, ಬದುಕನ್ನು ಮರುಕಟ್ಟಿಕೊಂಡರು. ದುಃಖ ಹೊತ್ತು, ಸೇವೆಯ ಮಾರ್ಗವನ್ನೇ ಆರಿಸಿಕೊಂಡರು,
ಮೊದಮೊದಲು ಸರ್ಕಾರಿ ಸೇವೆಯಲ್ಲಿ ಕಿರಿಯ ಸಹಾಯಕಿಯಾಗಿ ಸರ್ಕಾರದ ಜಲಸಂಪತ್-ವಿದ್ಯುತ್ ಇಲಾಖೆಯಲ್ಲಿ ಕೆಲಸ ಆರಂಭಿಸಿ, ನಂತರ ಗೌರವ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ ಅವರು, ಸಾಮಾನ್ಯ ಮಹಿಳೆಯಿಂದ ಅಸಾಮಾನ್ಯ ನಾಯಕಿಯಾಗುವ ದಾರಿಯನ್ನು ತಮ್ಮ ಪರಿಶ್ರಮದಿಂದ ನಿರ್ಮಿಸಿಕೊಂಡರು. ನಂತರ ಪ್ರಜಾಪ್ರತಿನಿಧಿಯಾಗಿ ಸಾರ್ವಜನಿಕ ಸೇವೆ ಶುರು ಮಾಡಿದರು... ಈಗ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.. ಅವರೇ ಭಾರತದ ಮೊದಲ ಆದಿವಾಸಿ ಸಮುದಾಯದ ರಾಷ್ಟ್ರಪತಿ, ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು...
ಅವರ ಜೀವನ ಭಾರತದ ಪ್ರತಿಯೊಬ್ಬ ಯುವಕ/ಯುವತಿಗೆ ಏನು ಹೇಳುತ್ತದೆ ಅಂದರೆ
“ಎಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ಎಲ್ಲಿ ತಲುಪುತ್ತೇವೆ ಎಂಬುದು...
ಕೃಪೆ : ನೆಟ್
No comments:
Post a Comment