ಕಥೆ-968
ಕಿತ್ತೂರಿನ ಕಿಂಕರ
https://basapurs.blogspot.com
ಆಕೆಯನ್ನು ನೋಡಲು ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಕಾವಲಿನವರು ಎಚ್ಚರಿಕೆಯಿ ಪಹರೆ ನಡೆಸುತ್ತಿದ್ದರು. ಸೆರೆಮನೆಯಲ್ಲಿದ್ದರೂ ಶರಣರನ್ನು ಸತ್ಕರಿಸದೆ ಏನೂ ಮಾಡುತ್ತಿರಲಿಲ್ಲ.ಆ ಮಹಿಳೆಯೇ ಕಿತ್ತೂರ ಚೆನ್ನಮ್ಮ.. ಪ್ರತಿದಿನ ಬ್ರಿಟಿಷರು ಸೆರೆಮನೆಯೊಳಕ್ಕೆ ಹೋಗಲು ಒಬ್ಬಿಬ್ಬರು ಶರಣರಿಗೆ ಮಾತ್ರ ಅವಕಾಶ ನೀಡಿದ್ದರು.
ಒಂದು ದಿನ ಒಬ್ಬ ತರುಣನು ಸೆರೆಮನೆಯೊಳಗೆ ಹೋಗಲು ನಿರ್ಧರಿಸಿದನು. ಕಾವಿ ಉಡುಗೆಯನ್ನು ತೊಟ್ಟನು. ಹಣೆಗೆ ವಿಭೂತಿಯನ್ನಿಟ್ಟನು. ರುದ್ರಾಕ್ಷಿಮಾಲೆ ಧರಿಸಿದ ದಂಡ ಕಮಂಡಲ ಹಿಡಿದನು. ನೇರವಾಗಿ ಸೆರೆಮನೆಯ ಮುಂಬಾಗಿಲಿಗೆ ಬಂದು ನಿಂತ ವಹರೆಯವರು "ನೀವು ಯಾರು, ಇಲ್ಲಿಗೇಕೆ ಬಂದಿರುವಿರಿ?' ಎಂದು ಕೇಳಿದರು. "ನಾನು ಶರಣ, ಚೆನ್ನಮ್ಮ ರಾಣಿಯವರಿಂದ ಭಿಕ್ಷೆ ಪಡೆಯಲು ಬಂದಿರುವೆ" ಎಂದು ಜೋಳಿಗೆ ತೋರಿಸಿದನು. ಕಾವಲುಗಾರರು ಒಳಗೆ ಹೋಗಲು ಅನುಮತಿ ನೀಡಿದರು. ಮಂತ್ರವ ಪಠಿಸುತ್ತ ಸೆರೆಮನೆಯೊಳಕ್ಕೆ ನಡೆದ. ಚೆನ್ನಮ್ಮ ರಾಣಿಯನ್ನು ಕಂಡ ಕೂಡಲೆ ತರುಣ ಸಂತೋಷಗೊಂಡನು. ದಂಡ ಕಮಂಡಲಗಳನ್ನು ಕೆಲಗಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದ. ಚೆನ್ನಮ್ಮ ಗಾಬರಿಯಾದಳು. "ಯತಿಗಳು ನನಗೆ ನಮಸ್ಕರಿಸುವುದು ಸರಿಯೇ?" ಎಂದ ಕೇಳದಳು. ಮೇಲೆದ್ದ ತರುಣ ಕಟ್ಟಿಕೊಂಡಿದ್ದ ಗಡ್ಡಮೀಸೆಗಳನ್ನು ಸಡಿಲಿಸಿ "ತಾಯಿ, ನಾನು ಯತಿಯಲ್ಲ. ಯತಿರೂಪದ ನಿಮ್ಮ ವಿನಮ್ರ ಸೇವಕ, ಕಿತ್ತೂರಿನ ಕಿಂಕರ" ಎಂದು ಮಡಿದ.
ವೀರ ತರುಣನ ಗುರುತು ಪತ್ತೆ ಹಚ್ಚಿದ ಚೆನ್ನಮ್ಮನ ಮುಖ ಅರಳಿತು. ಉಪಾಯದಿಂದ ಸೆರೆಮನೆಗೆ ಬಂದ ಆತನ ಜಾಣೆಯನ್ನು ಮೆಚ್ಚಿದಳು. ಕಿತ್ತೂರಿನ ಪ್ರಜೆಗಳ ಕುಶಲವನ್ನು ಕೇಳಿದಳು. ಬ್ರಿಟಿಷರ ಕುಟಿಲತನವನ್ನು ಖಂಡಿಸಿದಳು.
ಚೆನ್ನಮ್ಮನ ಮಾತನ್ನು ಕೇಳಿದ ಆ ತರುಣ ಗಂಭೀರವಾಗಿ ಅವ್ವಾ, ನಾನು ನಾಡಿನ ವೀರ ತರುಣರನ್ನು ಒಗ್ಗೂಡಿಸುತ್ತೇನೆ. ನಮ್ಮ ನಾಡಿನ ಶಕ್ಕಿಗೆ ಬ್ರಿಟಿಷರು ಸೋಲಲೇ ಬೇಕು, ಕಿತ್ತೂರಿನ ವಿಜಯ ಪತಾಕೆ ಹಾರಾಡಲೇ ಬೇಕು, ನನ್ನನ್ನು ಆಶೀರ್ವದಿಸಿ" ಎಂದನು.
ಚೆನ್ನಮ್ಮನಿಗೆ ಹರ್ಷ ದುಃಖಗಳು ಏಕಕಾಲದಲ್ಲಿ ಉಂಟಾದವು. "ಮಗು, ನೀನು ಕಿತ್ತೂರಿನ ಕಲಿ, ನಾಡಿನ ಆಶಾಕಿರಣ. ನಿನ್ನ ದೇಶಪ್ರೇಮ ನಾಡಿನ ಯುವಕರಲ್ಲಿ ಮೈಗೂಡಲಿ. ಹೋಗಿ ಬಾ, ನಿನಗೆ ಮಂಗಳವಾಗಲಿ" ಎಂದು ಹರಸಿದಳು. ಯುವಕ ಸೆರಮನೆಯಿಂದ ಹೊರಬಂದನು. ಈ ತರುಣ ಬ್ರಿಟಿಷರಿಗೂ ಕಿತ್ತೂರಿನ ಸಂಸ್ಥಾನಕ್ಕೂ ನಡೆದ ಯುದ್ದದಲ್ಲಿ ಚೆನ್ನಮ್ಮನ ಪರವಾಗಿ ಹೋರಾಟ ಮಾಡಿದ್ದ. ಬ್ರಿಟಿಷರಿಂದಾಗಿ ಸೆರಮನೆವಾಸವನ್ನು ಅನುಭವಿಸಿ ಬಂದಿದ್ದ ಅವನಲ್ಲಿ ಅಪಾರವಾದ ದೇಶಪ್ರೇಮವಿತ್ತು. ಅಪಾಯಕರವಾದ ಕಾರ್ಯವನ್ನು ಉಪಾಯದಿಂದ ಮಾಡಿದ್ದನು. ಆದರೆ ಶತಶತ್ರುಗಳಿಂದ ಆದ ಮೋಸಕ್ಕೆ ಬೆಲೆಯಾಗಬೇಕಾಯಿತು.. ಚೆನ್ನಮ್ಮರಾಣಿಯಿಂದ ಹೊಗಳಿಸಿಕೊಂಡಿದ್ದ ಈ ವೀರ ತರುಣನೇ ಸ್ವಾತಂತ್ರ್ಯಪ್ರೇಮಿ ಸಂಗೊಳ್ಳಿ ರಾಯಣ್ಣ.
ಕೃಪೆ : ನೆಟ್
No comments:
Post a Comment