ಕಥೆ-1003
ಏಳಿರಿ, ಜಾಗೃತರಾಗಿರಿ, ಗುರಿ ತಲುಪುವ ತನಕ ನಿಲ್ಲಬೇಡಿ.
ಇದು ಸ್ವಾಮಿ ವಿವೇಕಾನಂದರ ಪ್ರಮುಖ ಹೇಳಿಕೆ, ಅವರ ಜೀವನದಲ್ಲಿ ನಡೆದಂತ ಒಂದು ಘಟನೆ, ಅದು 1893ರ ಅಮೇರಿಕಾದ ಶಿಕ್ಯಾಗೊದಲ್ಲಿ ನಡೆದದ್ದು... ಸರ್ವ ಧರ್ಮ ಸಮ್ಮೇಳಕ್ಕೆ ಭಾಗಿಯಾಗಬೇಕಿತ್ತು.. ಅದು ಅಷ್ಟು ಸುಲಭದ ಕೆಲಸವಲ್ಲ....
ಕೊನೆಗೂ ಅಮೇರಿಕಾಕ್ಕೆ ಹೋದರು. ಅಲ್ಲಿಗೆ ಬಂದಾಗ ಅವರ ಬಳಿ ಹೆಚ್ಚು ಹಣ ಇರಲಿಲ್ಲ. ಇದ್ದದ್ದು ಖರ್ಚಾಗುತ್ತಾ ಬಂದಿತು... ಕೆಲವರು ಅವರನ್ನು ನೋಡಿ ನಕ್ಕರು. ಅವರು ಒಂದು ಹೋಟೆಲ್‌ಗೆ ಹೋಗಿ ತಂಗಲು ಕೇಳಿದರೆ, ಅವರ ಬಟ್ಟೆ ನೋಡಿ “ನೀವು ಇಲ್ಲಿ ತಂಗಲು ಸಾಧ್ಯವಿಲ್ಲ” ಎಂದು ಹೊರ ಹಾಕಿದರು. ಕೆಲವೊಮ್ಮೆ ಉಪವಾಸ ಕಾಲ ಕಳೆದರು.
ಕೆಲವರು ಅವರನ್ನು ನೋಡಿ ನಕ್ಕರು. “ಈ ಸನ್ಯಾಸಿ ಇಲ್ಲಿ ಏನು ಮಾಡ್ತಾನೆ?” ಎಂದು ತಿರಸ್ಕಾರ ಮಾಡಿದರು. ಹೀಗೆ ಅನೇಕ ದಿನಗಳು ಕಳೆದವು.. ತಂಗಲು ಜಾಗ ಇಲ್ಲದೆ
ಅವರು ಉದ್ಯಾನವನದಲ್ಲಿ ಕುಳಿತು ರಾತ್ರಿಯನ್ನು ಕಳೆಯಬೇಕಾಯಿತು. ನಮ್ಮ ಸ್ಥಿತಿ ನೆನೆದು ಕಣ್ಣೀರು ಹಾಕಿದರು. ಅವರು ಅಂದುಕೊಂಡಿದ್ದು, ಕಷ್ಟಗಳು ಸಹಜ ನನ್ನೊಳಗಿನ ಶಕ್ತಿ ಮುಖ್ಯ... ಇವರನ್ನು ಗಮನಿಸಿದ
ಅಮೆರಿಕಾದ ಮಿಸ್ ಜೋಸೆಫಿನ್ ನೀವು ಒಳ್ಳೆಯವರಂತೆ ಕಾಣುತ್ತೀರಿ, ನಾನೇನು ಸಹಾಯ ಮಾಡಲೆ ಎಂದಳು. ಸ್ವಾಮಿ ವಿವೇಕಾನಂದರಿಗೆ: ತಂಗಲು ಮನೆ ಕೊಟ್ಟರು ಊಟದ ವ್ಯವಸ್ಥೆ ಮಾಡಿದರು
ಸ್ವಾಮೀಜಿ ಬಾಸ್ಟನ್‌ನಲ್ಲಿ ಇದ್ದಾಗ
ಕೆಲವರು “ನೀನು ಯಾವ ಕಾಲೇಜಿನ ಪ್ರತಿನಿಧಿ?” ಎಂದು ಪ್ರಶ್ನಿಸಿದರು. ಒಂದು ರೀತಿ ಗೇಲಿ ಮಾಡಿದರು..
ಸ್ವಾಮೀಜಿ ಬಳಿ ಸರ್ವಧರ್ಮ ಸಭೆಗೆ ಭಾಗಿಯಾಗಲು ಅಧಿಕೃತ ಪತ್ರ ಇರಲಿಲ್ಲ.
ಪ್ರೊ. ಜಾನ್ ಹೆನ್ರಿ ರೈಟ್ ವಿವೇಕಾನಂದರನ್ನು ಸರ್ವ ಧರ್ಮಸಭೆಗೆ ಭಾಗಿಯಾಗಲು ಶಿಫಾರಸು ಮಾಡಿ ಹೇಳ್ತಾರೆ..
“ಇವರು ಒಬ್ಬ ಮಹಾನ್ ಜ್ಞಾನಿ.
ಇವರಿಗೆ ಪರಿಚಯ ಪತ್ರ ಕೇಳುವುದೆಂದರೆ,
ಸೂರ್ಯನಿಗೆ ಬೆಳಕು ಕೇಳಿದಂತೆ”
ಅದರಿಂದಲೇ ವಿವೇಕಾನಂದರಿಗೆ ಶಿಕಾಗೋ ಸಭೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿತು.. ವಿಶ್ವಧರ್ಮ ಮಹಾಸಭೆಯಲ್ಲಿ.
ಅನೇಕ ದೇಶಗಳ ದೊಡ್ಡ ದೊಡ್ಡ ಪಂಡಿತರು ಭಾಷಣ ಮಾಡಲು ಬಂದಿದ್ದರು.. ದೊಡ್ಡ ಸಭಾಂಗಣದಲ್ಲಿ ಸಾವಿರಾರು ಜನರು.
ಎಲ್ಲರೂ ಸೂಟ್, ಟೈ ಧರಿಸಿದ್ದರು.
ಸ್ವಾಮಿ ವಿವೇಕಾನಂದ ಮಾತ್ರ ಸರಳ ಕೇಸರಿ ಬಟ್ಟೆಯಲ್ಲಿ ವೇದಿಕೆಗೆ ಹತ್ತಿದರು... ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಆರಂಭಿಸಿ, ಭಾರತದ ಧರ್ಮ, ಸಂಸ್ಕೃತಿ ಮತ್ತು ಮಾನವೀಯತೆಯ ಮಹತ್ವವನ್ನು ಸರಳವಾಗಿ ವಿವರಿಸಿದರು. ಅವರ ಈ ಒಂದು ಭಾಷಣ ಇಡೀ ವಿಶ್ವವೇ ಅವರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿತ್ತು... ಉಳಿದುಕೊಳ್ಳಲು ಹೋಟೆಲನ್ನು ನೀಡದ ಅನೇಕ ಮಹಾನುಭಾವರು ಅವರ ಸೇವೆಗಾಗಿ ಓಡೋಡಿ ಬರತೊಡಗಿದರು... ಅಮೇರಿಕಾದ ಎಲ್ಲಾ ಪತ್ರಿಕೆಗಳ ತುಂಬಾ ಇವರೇ ಆವರಿಸಿಕೊಂಡರು.. ದೊಡ್ಡ ದೊಡ್ಡ ಮಹಾನ್ ವ್ಯಕ್ತಿಗಳು ಇವರನ್ನು ಗುರುಗಳನ್ನಾಗಿ ಸ್ವೀಕರಿಸಲು ಮುಂದೆ ಬಂದರು. ಸ್ವಾಮಿ ವಿವೇಕಾನಂದರಿಗೆ ಸಾವಿರಾರು ಜನರಿಂದ
ಪತ್ರಗಳು ಬರಲು ಶುರು ಆದವು...
ಎಷ್ಟೇ ಕಷ್ಟ ಬಂದರೂ ತಾವಂದುಕೊಂಡ ಗುರಿಯನ್ನು ತಲುಪಿದರು.. ನಾವಂದು ಕೆಲಸಕ್ಕೆ ಸ್ವಲ್ಪ ವಿಘ್ನ ಬಂದಾಗ ವಿಮುಖರಾಗಬಾರದು ಎಂಬುದಕ್ಕೆ ವಿವೇಕಾನಂದರು ಆದರ್ಶ...
ಭಾರತ ಹಾವಾಡಿಗರ ದೇಶ, ಹಿಂದುಳಿದ ದೇಶ ಎನ್ನುತ್ತಿದ್ದ, ಅಮೇರಿಕಾದ ಜನರು ಹೇಳಿದ್ರು
“ಭಾರತ ಮಹಾನ್ ದೇಶ, ವಿವೇಕಾನಂದ ಮಹಾನ್ ಗುರು.” ಎಂದು..
ವಿವೇಕಾನಂದರು ಬೆಳಗಾಗುವುದರಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ, ಭಾರತಕ್ಕೆ ಗೌರವ ಸ್ಥಾನ ನೀಡುವಂತೆ ಮಾಡಿದ್ದರು...
ಜ್ಞಾನ ಮತ್ತು ಆತ್ಮವಿಶ್ವಾಸ ಇದ್ದರೆ ಜಗತ್ತೇ ನಮ್ಮನ್ನು ಗೌರವಿಸುತ್ತದೆ.
ಭಯವೇ ನಮ್ಮ ದೊಡ್ಡ ಶತ್ರು., ನಾನು ಯಾರು ಅನ್ನೋದಕ್ಕಿಂತ, ನನ್ನೊಳಗಿನ ಶಕ್ತಿ ಮುಖ್ಯ...
ಒಳ್ಳೆಯ ಮಾತು ಸಾವಿರಾರು ಹೃದಯಗಳನ್ನು ಗೆಲ್ಲುತ್ತದೆ...
ಇಂದಿಗೂ ಎಂದಿಗೂ ಅವರು ಯುವಕರಿಗೆ ಆದರ್ಶ...
ಎಲ್ಲರಿಗೂ ರಾಷ್ಟ್ರೀಯ ಯುವ ದಿನಾಚರಣೆ ಶುಭಾಶಯಗಳು..
💐💐💐💐💐
- ಶಂಕರಗೌಡ ಬಸಾಪೂರ
No comments:
Post a Comment