Tuesday, January 6, 2026

 ಕಥೆ-671

*ಬೇರೆಯವರ ಬಗ್ಗೆ ಹಬ್ಬಿಸುವ ಗಾಳಿಸುದ್ದಿಗಳು*...

https://basapurs.blogspot.com/


*ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ.* ಯಾವಾಗಲೂ ಇದೇ ಅವನ ಕೆಲಸ.


   _*ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು. ವಿಚಾರಣೆಯೆಲ್ಲಾ ನಡೆದು, ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.*_


    *ಅವಮಾನಿತನಾದ ‌ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ*.


     _*ನ್ಯಾಯಾಲಯದಲ್ಲಿ ಈ ವ್ಯಕ್ತಿ, ನಾನು ಸುಮ್ಮನೆ ಅವನು ‌ಇದ್ರೂ ಇರಬಹುದು ‌ಎಂದು‌‌ ಅನುಮಾನದಿಂದ ಹೇಳಿದ್ದು, ಅದರಿಂದ ಈಗ ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ.*_


*ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ ಎಂದರು*.


   _*ಮಾರನೇ ದಿನ ಆತ ತೀರ್ಪು ಕೇಳಲು ಬಂದಾಗ, ನ್ಯಾಯಾಧೀಶರು, ನಿನ್ನೆ ನೀನು ಚೆಲ್ಲಿದ ಕಾಗದದ ಚೂರುಗಳನ್ನು ವಾಪಸು ಆರಿಸಿಕೊಂಡು ಬಾ ಎಂದರು.*_


  ‌ *ಆಗ ಆ ವ್ಯಕ್ತಿ, ಅದು ಹೇಗೆ ಸಾಧ್ಯ? ಈಗ ಅವೆಲ್ಲ ಗಾಳಿಗೆ ಹಾರಿ ಹೋಗಿವೆ, ಆ ಚೂರುಗಳನ್ನು ಈಗ ಆರಿಸಿ ತರಲು ಅದ್ಹೇಗೆ ತಾನೇ ಸಾಧ್ಯ?ಎಂದ*.


    _*ಆಗ ನ್ಯಾಯಾಧೀಶರು, ಅದೇ ರೀತಿ ನೀನು , ಒಬ್ಬ ಒಳ್ಳೆಯ ವ್ಯಕ್ತಿಯ ಬಗ್ಗೆ, ಮಾಡಿದ ಗಾಸಿಪ್ ಎಲ್ಲೆಡೆಯೂ ಹರಿದು ಹೋಗಿದೆ . ಅವು ಆತನ ಘನತೆಗೆ ಧಕ್ಕೆ ತರಬಲ್ಲವು. ಆ ತಪ್ಪನ್ನು ಈಗ ನೀನು ಸರಿಪಡಿಸಲು ಸಾಧ್ಯವೇ, ಒಬ್ಬರ ಹಿಂದೆ ಇಂತಹ ನೀಚ ಕೆಲಸವನ್ನು ಮಾಡುವ ಮುನ್ನ ಆತ್ಮಸಾಕ್ಷಿ ಎಂಬುದು ಒಮ್ಮೆಯಾದರೂ, ನಿನ್ನನ್ನು ಎಚ್ಚರಿಸಲಿಲ್ಲವೇ? ಎಂದು ಕೇಳಿದರು.*_


   *ಆ ವ್ಯಕ್ತಿಗೆ, ಈಗ ತನ್ನ ತಪ್ಪಿನ ಅರಿವಾಗಿ, ಯುವಕನಲ್ಲಿ ಕ್ಷಮೆಯೇನೂ ಯಾಚಿಸಿ, ಸ್ವಲ್ಪ ದಂಡ ಕಟ್ಟಿದ,ಆದರೆ ಹೋದ ಮಾನವನ್ನು ಇವನು ತಂದುಕೊಡಲು ಸಾಧ್ಯವೇ*.


  ಸದಾ ಇನ್ನೊಬ್ಬರನ್ನು ದೂಷಣೆ ಮಾಡುತ್ತಾ ,ಅವರ ಬಗ್ಗೆ ಇಲ್ಲ ಸಲ್ಲದ ಸುದ್ಧಿ ಹಬ್ಬಿಸುತ್ತ ಸಂತೋಷಪಡುವುದು ಒಂದು ಮಹಾ ದೊಡ್ಡ ರೋಗ. ಅದರಿಂದ ದೂರವಿದ್ದರೆ ,ನಮಗೂ ಹಾಗೂ ಸಮಾಜಕ್ಕೂ ಒಳ್ಳೆಯದು.

  *ಕೃಪೆ : ಸುವರ್ಣಾ ಮೂರ್ತಿ.*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು