Tuesday, January 6, 2026

 ಕಥೆ-712

ಕಡೆಗಣಿಸಿದವರಿಗೆ ಥ್ಯಾಂಕ್ಸ್ ಹೇಳಿ

 ಪ್ರೀತಿಸುವ ಹುಡುಗಿಯನ್ನು ಖುಷಿಪಡಿಸುವುದಕ್ಕೆ ವಾರಗಟ್ಟಲೆ. ತಿಂಗಳುಗಟ್ಟಲೆ ಒದ್ದಾಡುವ ಹುಡುಗರು, ಪ್ರೀತಿಸುವ ಹುಡುಗ, ತನಗೆ ಒಂದು ಫೋನ್‌ ಕಾಲ್ ಮಾಡಲಿ ಎಂದು ಕಾಯುವ ಹುಡುಗಿ, ಒಂದು ಕ್ಷಣದ ಆಕರ್ಷಣೆಗೆ, ಆಭದ್ರತೆ ಜೀವನದಲ್ಲಿ ಚೆಲುವಿನ ಚಿತ್ತಾರದಂತೆ ಎಷ್ಟೋ ಘಟನೆಗಳು ನಮಗೆ ಏಕೆ ಪಾಠವಾಗಲ್ಲ ? ಜೀವನ ಎಂದರೆ ಇಷ್ಟೇನಾ?... ಬೇರೆಯವರನ್ನು ಸಂತೋಷಗೊಳಿಸುವುದಕ್ಕೆ ಗಮನಹರಿಸುವ ಬದಲು, ನಾವ್ಯಾಕೆ ನಮ್ಮ ಬಗ್ಗೆ ಗಮನಹರಿಸಿಕೊಳ್ಳುವುದಿಲ್ಲ. ನಮ್ಮ ಗುರಿ ತಲುಪುವ ಬಗ್ಗೆ, ಹೊಸದೇನನ್ನೋ ಕಲಿಯುವ ಬಗ್ಗೆ. ಇನ್ನೊಬ್ಬರಿಗೆ ಸಹಾಯ ಮಾಡುವ ಬಗ್ಗೆ, ಜೀವನದಲ್ಲಿ ಏನೋ ಸಾಧಿಸುವ ಬಗ್ಗೆ.... ಯಾಕೆ ಗಮನಹರಿಸುವುದಿಲ್ಲ. ಹಾಗೆ ಮಾಡುವುದರಿಂದ ನಮ್ಮ ಆತ್ಮಗೌರವ ಹೆಚ್ಚುತ್ತದೆ. ಆಗ ಅಂದು ಕೊಂಡವರು ನಮ್ಮ ಹಿಂಬಾಲಕರಾಗಿರುತ್ತಾರೆ ಮುಂದಿನ ಬಾರಿ ಯಾರಾದರೂ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರೆ, ನಮ್ಮನ್ನು ಕೀಳಾಗಿ ನೋಡಿದರೆ, ಅವರನ್ನು ದ್ವೇಷಿಸಬಾರದಂತೆ. ಅವರಿಗೊಂದು ಧನ್ಯವಾದ ಹೇಳಬೇಕು. ಈ ಮೂಲಕ ಅವರಿಗೆ ಅವಮಾನ ಮಾಡಿ ಎಂದಲ್ಲ, ಧನ್ಯವಾದ ಯಾಕೆ ಎಂದರೆ, ಜೀವನದಲ್ಲಿ ಬೇರೆಯವರ ಬಗ್ಗೆ ಗಮನಹರಿಸುವ ಬದಲು ವೈಯಕ್ತಿಕ ಹೆಚ್ಚು ಗಮನ ಕೊಡಬೇಕು ಎಂದು ನೀತಿಪಾಠ ಹೇಳಿಕೊಟ್ಟಿದ್ದಕ್ಕೆ ಅವರಿಗೊಂದು ಥ್ಯಾಂಕ್ಸ್ ಹೇಳಿ. ಬಹುಶಃ ಅವರು ಕಡೆಗಣಿಸದಿದ್ದರೆ ಅಥವಾ ನಮ್ಮನ್ನು ಕೀಳಾಗಿ ನೋಡದಿದ್ದರೆ, ನಾವು ನಮ್ಮ ಬಗ್ಗೆ ಗಮನಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಮ್ಮ ಜೀವನದ ಬಗ್ಗೆ ಫೋಕಸ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಪ್ರೀತಿಸುವವರು ಎಷ್ಟು ಮುಖ್ಯವೋ, ಕಡೆಗಣಿಸುವವರೂ ಅಷ್ಟೇ ಮುಖ್ಯ

ಕೃಪೆ:ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು