Tuesday, January 6, 2026

 ಕಥೆ-813

ಸಮಸ್ಯೆ ಎದುರಿಸಲು ತಾಳ್ಮೆ ಬೇಕು 

https://basapurs.blogspot.com


ನಾವು ಯಾವುದೇ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾಗ ಕೆಲವೊಮ್ಮೆ ಹಲವು ಅಡೆತಡೆಗಳು ಎದುರಾಗುತ್ತವೆ.


ನೂರೆಂಟು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಬಹಳಷ್ಟು ಬಾರಿ ನಾವು ಆ ಸಮಸ್ಯೆಗಳಿಂದ ವಿಚಲಿತರಾಗುತ್ತೇವೆ. ಏನು ಮಾಡಬೇಕು ಎಂದು ಗೊತ್ತಾಗದೆ, ಆ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿಬಿಡುತ್ತೇವೆ. ಆದರೆ, ಇದು ತಪ್ಪು. ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ. ಆದರೆ, ನಾವು ಆ ಪರಿಹಾರಗಳತ್ತ ಗಮನಹರಿಸುವುದಿಲ್ಲ ಅಷ್ಟೇ. ಒಂದು ಸಮಸ್ಯೆ ಎದುರಾದಾಗ ನಾವು ಮಾಡುವ ಅತಿದೊಡ್ಡ ತಪ್ಪೇನೆಂದರೆ, ನಾವು ಆ ಸಮಸ್ಯೆಯ ಬಗ್ಗೆ ಗಮನಹರಿಸುವುದಕ್ಕೆ ಪ್ರಾರಂಭಿಸುತ್ತೇವೆ. ನಾವು ಆ ಸಮಸ್ಯೆಯನ್ನು ಪಕ್ಕಕ್ಕಿಟ್ಟು, ಅದಕ್ಕೆ ಏನೇನು ಪರಿಹಾರ ಸಿಗಬಹುದು ಎಂದು ಸ್ವಲ್ಪ ತಾಳ್ಮೆಯಿಂದ ಕುಳಿತು ಯೋಚಿಸಿದರೆ, ಹಲವು ಉತ್ತರಗಳು ಸಿಗುತ್ತವೆ. ನಾವು ಆ ಪೈಕಿ ಯಾವುದು ಉತ್ತಮ ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿಕೊಂಡರೆ, ಅಲ್ಲಿಗೆ ಸಮಸ್ಯೆ ಅರ್ಧ ಬಗೆಹರಿದಂತಾಗುತ್ತದೆ.. ಆದರೆ ನಾವು ಅದನ್ನು ಮಾಡುವುದಿಲ್ಲ. ಸಮಸ್ಯೆಯನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತೇವೆ. ಹಾಗಾಗಿ, ಇದರ ನಡುವೆ ನಮಗೆ ಪರಿಹಾರದ ಸೂಚನೆ ಕಂಡುಬರುವುದಿಲ್ಲ.. ಕೆಲವೊಮ್ಮೆ ಸಮಸ್ಯೆಯ ಬಗ್ಗೆ ಅತಿಯಾಗಿ ಯೋಚಿಸುವುದು ಸಹ ಇನ್ನೊಂದು ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ, ಒಂದು ವಿಷಯ ಗಮನದಲ್ಲಿರಲಿ. ಪ್ರತಿ ಸಮಸ್ಯೆಗೂ ಉತ್ತರವಿರುತ್ತದೆ. ಅದನ್ನು ಹುಡುಕುವ ತಾಳ್ಮೆ ನಮ್ಮಲ್ಲಿ ಇರಬೇಕಷ್ಟೇ.


| ದೀಪಂದರ್ ಗೋಯಲ್ ಜೊಮ್ಯಾಟೋ, ಸಿಇಒ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು