ಕಥೆ-798
ಪ್ರಯತ್ನ ನಮ್ಮದಾಗಿದ್ದರೆ ಫಲ ಖಂಡಿತ...
https://basapurs.blogspot.com
ವಾರಣಾಸಿಯಲ್ಲಿ ಅಶಿಕ್ಷಿತ ರಿಕ್ಷಾ ಚಾಲಕನ ಕುಟುಂಬದಲ್ಲಿ ಜನಿಸಿದ ಹುಡುಗ ಜೀವನದುದ್ದಕ್ಕೂ ಅಪಾರ ಕಷ್ಟಗಳನ್ನು ಮತ್ತು ಸಾಮಾಜಿಕ ನಿಂದನೆಗಳನ್ನು ಎದುರಿಸಿದನು. ಚಿಕ್ಕ ಮನೆ ಮತ್ತು ಬಡತನ.. ಓದುವುದರಲ್ಲಿ ತುಂಬಾ ಆಸಕ್ತಿ..
ಹನ್ನೊಂದನೇ ವಯಸ್ಸಿನಲ್ಲಿ ಶ್ರೀಮಂತ ಸ್ನೇಹಿತನ ಮನೆಗೆ ಹೋದಾಗ ರಿಕ್ಷಾ ಚಾಲಕನ ಮಗ ಎಂಬ ಕಾರಣಕ್ಕೆ ಅಪಹಾಸ್ಯಕ್ಕೊಳಗಾದ ಅಲ್ಲದೆ ಅವರ ಮನೆಯಿಂದ ಹೊರಹಾಕಲ್ಪಟ್ಟ. ಈ ಘಟನೆಯು ಅವನ ಜೀವನದ ಗತಿಯನ್ನೇ ಬದಲಾಯಿಸಿತು.. ಹಟ ತೊಟ್ಟು ಓದಲು ಶುರು ಮಾಡಿದ... ಜೀವನದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ನೋವಿನಿಂದ ಅರಿವನ್ನು ಮೂಡಿಸಿತು. ನಮ್ಮ ಹಣೆಬರಹವನ್ನು ನಾವೇ ಬದಲಾಯಿಸಬೇಕೆಂದು ದೃಢನಿಶ್ಚಯ ಮಾಡಿದ. ಗಮನಾರ್ಹವಾದದ್ದನ್ನು ಸಾಧಿಸಲು ದೃಢನಿಶ್ಚಯ ಮಾಡಿದ. ಈ ಅನುಭವವು, ನಾನು ಆದರೆ ಐಎಎಸ್ ಅಧಿಕಾರಿಯಾಗಬೇಕೆಂದು ಉತ್ತೇಜಿಸಿತು, ಪದವಿ ಮುಗಿಸಿದ. ತಂದೆಯ ಬಳಿ ನಾನು ಐಎಎಸ್ ಮಾಡುತ್ತೇನೆ ಎಂದ, ಐಎಎಸ್ ಎಂದರೆ ಏನು ಎಂದು ಗೊತ್ತಿಲ್ಲದ ಅಪ್ಪ ಓದು ಮಗ ನಿನಗೇನು ಬೇಕು ನಾನು ಕೊಡಿಸುತ್ತೇನೆ ಅಂದ. ರಿಕ್ಷಾದಿಂದ ಸಂಪಾದನೆ ಮಾಡಿದ್ದ ಹಣವನ್ನು ಕೊಟ್ಟ..
ಐಎಎಸ್ ಪರೀಕ್ಷಾ ತಯಾರಿಯನ್ನು ಅಚಲವಾದ ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಅನುಸರಿಸಿದ. ಬಡತನದಿಂದಾಗಿ ಎಷ್ಟೋ ಬಾರಿ ಉಪವಾಸ ಅನುಭವಿಸಿದ.. ಖರ್ಚಿಗೆ ಬೇಕಾಗುವ ಹಣವನ್ನು ಗಣಿತ ಟ್ಯೂಷನ್ ಹೇಳುವ ಮೂಲಕ ಸಂಪಾದಿಸತೊಡಗಿಸಿದ.. ಸ್ಪಷ್ಟ ಗುರಿ, ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಅವನ ಕೈ ಹಿಡಿಯಿತು..
ತನ್ನ ಮೊದಲ ಪ್ರಯತ್ನದಲ್ಲೆ 2006 ರಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ 48 ನೇ ರ‍್ಯಾಂಕ್ ಗಳಿಸಿದ...
ನಾನು ಐಎಎಸ್ ಮಾಡಲು ನಮ್ಮ ತಂದೆ ದೊಡ್ಡಶಕ್ತಿ ಮತ್ತು ಪ್ರೇರಣೆ ಎಂದು ಇಡೀ ಊರು ತುಂಬಾ ರಿಕ್ಷಾ ತುಳಿಯುತ್ತಾ ಅವರ ತಂದೆಯನ್ನು ಕೂಡಿಸಿಕೊಂಡು ಹೆಮ್ಮೆಯಿಂದ ಹೇಳಿಕೊಂಡು ಬಂದ...
ಅವರೇ ಗೋವಿಂದ್ ಜೈಸ್ವಾಲ್...IAS
ಅವರು ಐಎಎಸ್ ಅಧಿಕಾರಿಯಾಗಿ ಗಮನಾರ್ಹ ವೃತ್ತಿಜೀವನವನ್ನು ಹೊಂದಿದ್ದಾರೆ, ವಿವಿಧ ಪ್ರಭಾವಶಾಲಿ ಪಾತ್ರಗಳು ಮತ್ತು ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ:
ಗೋವಿಂದರ್ ಮೊದಲ ನಿಯೋಜನೆಯು ನಾಗಾಲ್ಯಾಂಡ್‌ನಲ್ಲಿ ಸಹಾಯಕ ಆಯುಕ್ತರಾಗಿ.
ಗೋವಾದಲ್ಲಿ ಕ್ರೀಡಾ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕ್ರೀಡಾ ಚಟುವಟಿಕೆಗಳು ಮತ್ತು ಮೂಲಸೌಕರ್ಯಗಳನ್ನು ಉತ್ತೇಜಿಸಿದರು, ಈ ಪ್ರದೇಶದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದರು.
ಪ್ರಸ್ತುತ ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದಾರೆ.
ಓದುವ ಹವ್ಯಾಸ, ಸ್ಪಷ್ಟ ಗುರಿ ಶ್ರದ್ದೆ ಮತ್ತು ಸತತ ಪ್ರಯತ್ನಗಳು ನಮ್ಮದಾಗಿದ್ದರೆ, ನಾವು ಅಂದುಕೊಂಡಿದ್ದನ್ನ ಸಾಧಿಸಬಹುದು..
ಪ್ರಯತ್ನ ನಮ್ಮದಾಗಿದ್ದರೆ ಫಲ ಖಂಡಿತ...👍
-Shankargouda Basapur
No comments:
Post a Comment