Saturday, January 17, 2026

 ಕಥೆ-1001

ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಬೆಳಕು

https://basapurs.blogspot.com


ಒಂದು ಸಣ್ಣ ಹಳ್ಳಿಯಲ್ಲಿ ಸೂರ್ಯ ಎಂಬ ಬಡ ಕುಟುಂಬದ ಹುಡುಗನಿದ್ದ. ಅವನ ತಂದೆ ಕೃಷಿ ಕಾರ್ಮಿಕ, ತಾಯಿ ಮನೆಯ ಕೆಲಸ ಮಾಡುತ್ತಿದ್ದರು. ಹಣದ ಕೊರತೆ ಇದ್ದರೂ, ಸೂರ್ಯನಿಗೆ ಓದುವ ಆಸೆ ತುಂಬಾ ಇತ್ತು.

ಅವನು ಪ್ರತಿದಿನ ಬೆಳಗ್ಗೆ ಬೇಗ ಎದ್ದು ಮನೆಯ ಕೆಲಸ ಮಾಡಿ, ನಂತರ ಶಾಲೆಗೆ ಹೋಗುತ್ತಿದ್ದ.


ಶಾಲೆಯಲ್ಲಿ ಸೂರ್ಯ ತುಂಬಾ ಶ್ರಮಶೀಲ ವಿದ್ಯಾರ್ಥಿ. ಆದರೆ ಕೆಲವು ಮಕ್ಕಳು ಅವನ ಬಡತನವನ್ನು ನೋಡಿ ಅವನನ್ನು ಹಾಸ್ಯ ಮಾಡುತ್ತಿದ್ದರು.

“ನೀನು ಓದಿ ಏನು ಮಾಡ್ತೀಯ? ನೀನೋಬ್ಬ ಬಡವ ನಮ್ಮಂತೆ ಆಗಲಾರೆ,” ಎಂದು ಅವನನ್ನು ಕಿಚಾಯಿಸುತ್ತಿದ್ದರು.


ಆ ಮಾತುಗಳು ಸೂರ್ಯನಿಗೆ ನೋವು ತಂದರೂ, ಅವನು ಮನಸ್ಸಿನಲ್ಲಿ ಒಂದನ್ನು ನಿರ್ಧರಿಸಿದ್ದ...

“ನನ್ನ ಸ್ಥಿತಿ ನನ್ನ ಭವಿಷ್ಯವಲ್ಲ; ನನ್ನ ಪರಿಶ್ರಮವೇ ನನ್ನ ಭವಿಷ್ಯ.” ಎಂದು...


  SSLC ವಾರ್ಷಿಕ ಪರೀಕ್ಷೆ ನಡೆಯಿತು. ಪರೀಕ್ಷೆಯ ದಿನ ಸೂರ್ಯನ ಪಕ್ಕದಲ್ಲಿ ಕುಳಿತಿದ್ದ ವಿದ್ಯಾರ್ಥಿ ಉತ್ತರ ಪತ್ರಿಕೆಯನ್ನು ತೋರಿಸಿ,

“ನೋಡು, ಕಾಪಿ ಮಾಡಿಕೋ,” ಎಂದ. ಆ ಕ್ಷಣದಲ್ಲಿ ಸೂರ್ಯನ ಮನಸ್ಸಿನಲ್ಲಿ ಯುದ್ಧ ನಡೆಯಿತು.

ಪಾಸ್ ಆಗಬೇಕು ಎಂಬ ಆಸೆ ಒಂದು ಕಡೆ,

ತಂದೆ-ತಾಯಿ ಕಲಿಸಿದ್ದ ಪ್ರಾಮಾಣಿಕತೆ ಇನ್ನೊಂದು ಕಡೆ.


ಅವನು ತಕ್ಷಣ ಹೇಳಿದ,

“ಕ್ಷಮಿಸಿ, ನಾನು ನನ್ನ ಶ್ರಮದ ಮೇಲೆ ನಂಬಿಕೆ ಇಡುತ್ತೇನೆ.”


ಪರೀಕ್ಷೆ ಮುಗಿದ ನಂತರ ಫಲಿತಾಂಶ ಪ್ರಕಟವಾಯಿತು. ಸೂರ್ಯ ಉತ್ತಮ ಅಂಕಗಳನ್ನು ಪಡೆದು ಪಾಸಾಗಿದ್ದ.. ಆದರೆ ಕಾಪಿ ಮಾಡಿದ ಕೆಲವರು ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.


ಆ ದಿನ ಸೂರ್ಯನ ತಂದೆಯ ಕಣ್ಣುಗಳಲ್ಲಿ ಸಂತೋಷದ ನೀರು ಹರಿಯಿತು.

ತಂದೆ ಹೇಳಿದರು,

“ಮಗನೆ, ನಮ್ಮ ಬಳಿ ಹಣ ಇಲ್ಲದಿದ್ದರೂ, ನಿನ್ನ ಬಳಿ ಸತ್ಯ ಮತ್ತು ಪರಿಶ್ರಮವಿದೆ. ಅದೇ ನಿನ್ನ ದೊಡ್ಡ ಆಸ್ತಿ” ತಂದೆ-ತಾಯಿಗಳಿಗೆ ಮಕ್ಕಳೇ ಆಸ್ತಿ, ಮಕ್ಕಳು ಓದಬೇಕಾದಾಗ ತಂದೆ-ತಾಯಿಗಳು ತಮಗಾಗಿ ಎಷ್ಟು ಶ್ರಮ ಪಡ್ತಿದ್ದಾರೆ ಎಂಬುದು ನೆನಪಿರಲಿ...


ಪರಿಶ್ರಮ ಮತ್ತು ಪ್ರಾಮಾಣಿಕತೆ ಇದ್ದರೆ, ಯಾವ ಬಡತನವೂ ಸಾಧನೆಗೆ ಅಡ್ಡಿಯಾಗಲಾರದು.


ಸದ್ಯ ನಡೆಯುತ್ತಿರುವ 2026 ಸರಣಿ-1 ಪರೀಕ್ಷೆಯಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆ ಆಗದೇ ಸ್ವಂತ ತಯಾರಿ ಮಾಡಿಕೊಂಡರೆ ನೀವು ಸರಳವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸ್ ಆಗಬಹುದು...

 ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಯಶಸ್ಸು ಖಂಡಿತ. 

 - ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು