ಕಥೆ-242
ಸ್ಪಷ್ಟ ಗುರಿ ಮತ್ತು ನಿರಂತರ ಪ್ರಯತ್ನ
ಯುರೋಪ್ ದೇಶದಲ್ಲಿ ಒಬ್ಬ ಸುಪ್ರಸಿದ್ಧ ಸಂಗೀತ ಕಲಾವಿದನಿದ್ದ. ಒಂದು ದಿನ ಅವನು ಒಂದು ಸಂಗೀತ ಕಚೇರಿ ಏರ್ಪಡಿಸಿದ್ದ. ಸಾವಿರಾರು ಜನರು ಅವನ ಸಂಗೀತ ಸುಧೆಯನ್ನು ಸವಿಯಲು ಆಗಮಿಸಿದ್ದರು. ಸುಮಾರು ಮೂರು ಗಂಟೆಯವರೆಗೆ ಆ ಕಲಾವಿದನು ಮೈಮರೆತು ಹಾಡಿದ. ಜನರು ಮಂತ್ರಮುಗ್ಧರಾಗಿ ಕೇಳಿದರು. ಸಂಗೀತ ಕಚೇರಿ ಮುಗಿದ ಮೇಲೆ ಆನಂದಭರಿತರಾದ ಜನರು ಎಷ್ಟೋ ಹೊತ್ತಿನವರೆಗೆ ಕರತಾಡನ ಮಾಡತ್ತಲೇ ಇದ್ದರು. ಜನರೆಲ್ಲರೂ ಆನಂದದಿಂದ ತಮ್ಮ ತಮ್ಮ ಮನೆಗೆ ತೆರಳಿದ ಮೇಲೆ ಒಬ್ಬ ಮಹಿಳೆ ಆ ಕಲಾವಿದರಿಗೆ ಭೇಟಿಯಾಗಿ ಹೇಳಿದಳು 'ದೇವರು ನಿಮ್ಮಂಥ ಮಧುರಕಂಠವನ್ನು ನನಗೆ ನೀಡಿದ್ದರೆ ನಾನೂ ನಿಮ್ಮಂತೆ ಹಾಡಿ ಜನರಿಗೆ ಸಂತೋಷ ಪಡಿಸುತ್ತಿದ್ದೆ ! ಆಗ ಆ ಸಂಗೀತ ಕಲಾವಿದ ಹೇಳಿದ-'ದೇವರು ನನಗೂ ನಿಮಗಿರುವಂಥ ಕಂಠವನ್ನೇ ಕೊಟ್ಟಿದ್ದ, ಆದರೆ ದಿನಕ್ಕೆ ಎಂಟು ಗಂಟೆಯಂತೆ ನಾನು ನಲವತ್ತು ವರ್ಷಗಳ ಕಾಲ ನಿರಂತರ ಸಂಗೀತ ಸಾಧನೆ ಮಾಡಿದೆ. ಆ ಕಠಿಣ ಪರಿಶ್ರಮದ ಫಲವಾಗಿ ನಾನು ಇಂದು ನಿಮ್ಮೆಲ್ಲರಿಗೆ ಹಾಡಿ ಸಂತಸ ಪಡಿಸುತ್ತಿದ್ದೇನೆ!,' ಈ ಮಾತನ್ನು ಕೇಳಿದ ಮೇಲೆ ಕಠಿಣವಾದ ಪರಿಶ್ರಮವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಬರುವುದಿಲ್ಲ ಎಂಬ ಅರಿವು ಆ ಮಹಿಳೆಗೆ ಆಗಿತ್ತು.
ಅದು ನಮಗೂ ಸಹ.
ಸಾಧನೆ ಎಂಬುದು ಸಾಧಕರ ಸ್ವತ್ತು ವಿನಹ ಸೋಮಾರಿಗಳದ್ದಲ್ಲ..
ನಿರಂತರ ಹರಿಯುವ ಮೃದುವಾದ ನೀರು ಸಹ ಬಂಡೆಗಲ್ಲನ್ನು ಕರಗಿಸುತ್ತಂತೆ.. ಹಾಗೆ ನಿರಂತರ ಪ್ರಯತ್ನದಿಂದ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಶ.. ಸ್ಪಷ್ಟ ಗುರಿ ನಿರಂತರ ಪ್ರಯತ್ನ ಇದ್ದರೆ ಅವರ ಸಾಧನೆಗೆ ಯಾವುದೇ ಅಡೆತಡೆಗಳು ಬಂದರೂ ನಿಲ್ಲುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳಾದವರು ಸಹ ಸ್ಪಷ್ಟ ಗುರಿ ಮತ್ತು ನಿರಂತರ ಪ್ರಯತ್ನವನ್ನು ಹೊಂದಿರಬೇಕು.. ಅದನ್ನು ಮೈಗೂಡಿಸಿಕೊಳ್ಳಬೇಕು. ಅದು ಅವರ ಸಾಧನೆಯ ಶಿಖರವನ್ನು ತಲುಪಿಸುತ್ತದೆ
👍💐💐💐💐
.
No comments:
Post a Comment