Tuesday, January 16, 2024

ಕಥೆ-276

 22ನೇ ವರ್ಷಕ್ಕೆ IAS ಅಧಿಕಾರಿ 

22ನೇ ವರ್ಷಕ್ಕೆ IAS ಪರೀಕ್ಷೆ ಪಾಸ್‌ ಆದ ಭಾರತದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್..

 ಸದ್ಯ ಜನ ಮೆಚ್ಚಿದ ಅಧಿಕಾರಿ ಎನ್ನಿಸಿಕೊಂಡ ಸ್ಮಿತಾ ಸಾಧನೆಯ ಹಾದಿಯಿದು. ಬದುಕಿನಲ್ಲಿ ಏನಾದ್ರೂ ಸಾಧನೆ ಮಾಡಬೇಕು, ನಾಲ್ಕು ಮಂದಿ ನಮ್ಮನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಅಂದುಕೊಂಡ ಕೆಲಸವನ್ನು ಮಾಡಿ ತೋರಿಸುತ್ತಾರೆ. ಅಂತಹವರು ಇತರರಿಗೆ ಸ್ಫೂರ್ತಿಯಾಗುತ್ತಾರೆ, ಬದುಕಿಗೆ ದಾರಿದೀಪವೂ ಆಗುತ್ತಾರೆ. ಇಂತಹ ಅಪರೂಪದ ಸಾಧನೆ ಮಾಡಿದ ಮಹಿಳೆಯೊಬ್ಬರ ಯಶೋಗಾಥೆ ಇದು.

ಯುಪಿಎಸ್‌ಸಿ ಪರೀಕ್ಷೆ ಬರೆದು, ದೊಡ್ಡ ಹುದ್ದೆ ಗಳಿಸಬೇಕು ಎಂಬ ಆಸೆ ಇರುವುದು ಸಹಜ. ಅದಕ್ಕಾಗಿ ವರ್ಷಾನುಗಟ್ಟಲೆ ಓದಿ ತಯಾರಿ ನಡೆಸುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಕೆಲವರಷ್ಟೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಕೆಲವರು ಹಲವು ಬಾರಿ ಪ್ರಯತ್ನ ಮಾಡಿದರೂ ಉತ್ತೀರ್ಣರಾಗದೇ ಕೈ ಚೆಲ್ಲುವುದೂ ಉಂಟು. 

ಮತ್ತೆ ಕೆಲವರು ಮರಳಿ ಯತ್ನವ ಮಾಡು ಎನ್ನುವಂತೆ ಪುನಃ ಪುನಃ ಪ್ರಯತ್ನಿಸಿ ಗೆಲ್ಲುವವರು ಇರುತ್ತಾರೆ.

2000 ಇಸವಿಯಲ್ಲಿ ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಸ್ಮಿತಾ ಅವರು ಮೊದಲನೇ ಪ್ರಯತ್ನದಲ್ಲಿ Preliems ನಲ್ಲಿ ಪಾಸ್ ಆಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಅವರು ದೃಢ ನಿರ್ಧಾರ ಮಾಡಿ ಆಗಿತ್ತು. ಮಾಡಿಯೇ ತೀರಬೇಕೆಂಬ ಅಚಲ ದೃಢ ನಿರ್ಧಾರ ಮತ್ತು ಉತ್ತಮ ಪ್ರಯತ್ನದಿಂದಾಗಿ ತಮ್ಮ ಎರಡನೇ  ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ನಾಲ್ಕನೇ Rank ಪಡೆಯುವ ಮೂಲಕ ಭಾರತದ ಮೊದಲ ಕಿರಿಯ ಐಎಎಸ್‌ ಆಫೀಸರ್‌ ಎನ್ನಿಸಿಕೊಂಡಿದ್ದಾರೆ. ಅಚಲ ದೃಢ ನಿರ್ಧಾರ ಮತ್ತು ಸತತ ಪ್ರಯತ್ನ ಇದ್ದಾಗ ಯಾವ ಕೆಲಸವೂ ಅಸಾಧ್ಯವಲ್ಲ.

 ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಜನಿಸಿದ ಸ್ಮಿತಾ ನಿವೃತ್ತ ಸೇನಾ ಕರ್ನಲ್‌ ಒಬ್ಬರ ಮಗಳು.ಅವರ ತಂದೆ ಹೈದರಾಬಾದ್ ನಲ್ಲಿ ನಿವೃತ್ತರಾಗುತ್ತಾರೆ. ಅಲ್ಲಿಯೇ ಸೇಂಟ್‌ ಆನ್ಸ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಸ್ಮಿತಾ, ಹೈದರಾಬಾದ್‌ನ ಸೇಂಟ್‌ ಫ್ರಾನ್ಸಿಸ್‌ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆಯುತ್ತಾರೆ.

ಓದುವಾಗಲೇ ಸಮಾಜ ಸೇವೆ ಮಾಡಬೇಕೆನ್ನುವ ತುಡಿತ ಮತ್ತು ಆಸಕ್ತಿ ಇರುತ್ತದೆ. ಅದಕ್ಕೆ ಪೂರಕವಾಗಿ ಪ್ರತಿನಿತ್ಯ ಆರು ಗಂಟೆಗಳನ್ನು ತನ್ನ ಅಧ್ಯಯನಕ್ಕೆ ಮೀಸಲಿಟ್ಟ ಸ್ಮಿತಾ ಒಂದು ಗಂಟೆ ಆಟಕ್ಕೆ ಮೀಸಲಿಡುವ ಮೂಲಕ ತನ್ನ ದಿನಚರಿಯನ್ನು ಸಮತೋಲನಗೊಳಿಸುತ್ತಿದ್ದಳು. ಸ್ಮಿತಾ ದಿನನಿತ್ಯದ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಮೂಲಕ ಪ್ರಸ್ತುತ ವಿದ್ಯಮಾನಗಳೊಂದಿಗೆ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದ್ದಳು.

ಅತೀ ಚಿಕ್ಕವಯಸ್ಸಿನಲ್ಲಿಯೇ ಐಎಎಸ್‌ ಅಧಿಕಾರಿಯಾಗಲು ಇವರು ಹಾಕಿದ ಶ್ರಮ, ಓದಿನ ಏಕಾಗ್ರತೆ, ಇವರ ಛಲ, ಕನಸು ಎಲ್ಲವೂ ಸಹ ಇಂದಿನ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮತ್ತು ಇತರೆ ಅಧಿಕಾರಿಗಳಾಗಲು ಅತಿದೊಡ್ಡ ಸ್ಫೂರ್ತಿ ಎಂದರೆ ತಪ್ಪಾಗಲಾರದು.

ನಮ್ಮಲ್ಲೂ ಹಲವರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು, ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸು ಇರುವುದು ಸಹಜ. ಅಂತವರಿಗೆ ಸ್ಫೂರ್ತಿ ಈ ಸ್ಮಿತಾ ಸಭರ್ವಾಲ್. ಎಳೆಯ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ ಸ್ಮಿತಾ ಅವರ ಸಾಧನೆಗೊಂದು ಸಲಾಂ

ಐಎಎಸ್‌ ಅಧಿಕಾರಿಯಾಗಿರುವ ಸ್ಮಿತಾ ಸಭರ್ವಾಲ್ ಅವರು ಜನರ ಅಧಿಕಾರಿ ಎಂದೇ ಜನಪ್ರಿಯರಾಗಿದ್ದಾರೆ. ಜನರ ತೊಂದರೆ, ಕಷ್ಟಕ್ಕೆ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ವಾರಂಗಲ್‌, ವಿಶಾಖಪಟ್ಟಣಂ, ಕರೀಂನಗರ ಮತ್ತು ಚಿತ್ತೂರು ಸೇರಿದಂತೆ ತೆಲಂಗಾಣದ ಹಲವು ಕಡೆ ಇವರನ್ನು ನಿಯೋಜಿಸಲಾಗಿದೆ. ಸಿಎಂ ಕಚೇರಿಗೆ ನೇಮಕಗೊಂಡ ಅತ್ಯಂತ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.ಅವರ ಅನುಕರಣೀಯ ಕೆಲಸವು ಅವರಿಗೆ ಅನೇಕ ಪುರಸ್ಕಾರಗಳನ್ನು ಗಳಿಸಿದೆ ಮತ್ತು ಅವರು ದೇಶದಾದ್ಯಂತ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಯಾವುದೇ ಕೆಲಸ ಕಾರ್ಯ ಗೆಲುವು ಸೋಲು ಸರಳವಾಗಿ ನಡೆದರೆ ಅದು Historyಯಾಗುತ್ತದೆ. ಸಾಮಾನ್ಯವಾಗಿ ಗೆಲುವು ಅನಾಯಸವಾಗಿ ಬರುವುದು ಕಡಿಮೆ. ಒಂದು ವೇಳೆ ಆ ರೀತಿ ಪಡೆದರೆ ಅದು ಅದೃಷ್ಟವೆಂದು ಭಾಸವಾಗುತ್ತದೆ.  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಹಂತದಲ್ಲೂ ಸಹ ಹೋರಾಟ ಅನಿವಾರ್ಯ. ಈ ರೀತಿ ಗೆಲುವನ್ನು ಸಾಕಷ್ಟು ತೊಂದರೆ ಸಮಸ್ಯೆಗಳನ್ನು ಎದುರಿಸಿ ಪಡೆದರೆ ಅದು Victoryಯಾಗುತ್ತದೆ.. ಅದು ಇನ್ನೊಬ್ಬರಿಗೂ ಮಾದರಿಯಾಗುತ್ತದೆ.. 

ಎಲ್ಲವೂ Hisotryಯಲ್ಲಿ ಸೇರುತ್ತದೆ. ಆದರೆ Victoryಯು  Hisotry ಸೇರುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗುತ್ತದೆ.. ಅನುಕರಣೀಯವಾಗಿರುತ್ತದೆ.. ಆರಾಧಿಸಲ್ಪಡುತ್ತದೆ.. ನಮ್ಮ Victoryಯು Hisotryಯಲ್ಲಿ ಸೇರಬೇಕು.

ಕಷ್ಟಪಟ್ಟು ಓದುವಿಕೆ ಜೊತೆಗೆ ನಿಮ್ಮ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಸಹ IAS ಆಯ್ಕೆಗಳಿಗೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ" - ---ಸ್ಮಿತಾ ಸಬರ್ವಾಲ್ IAS

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು