ಕಥೆ-326
ಆಕಾಶಕ್ಕೇರಿದ ಇಬ್ಬನಿ
ಒಂದು ಎಲೆ ಮೇಲೆ ಇಬ್ಬನಿ ಕುಳಿತಿತ್ತು. ಅಲ್ಲಿಗೆ ಒಬ್ಬ ಬಂದ, ಆತ ಇಬ್ಬನಿಯನ್ನು ಕೇಳಿದ:
"ಅಲ್ಲೋ, ಒಬ್ಬನೇ ಕುಳಿತಿದ್ದೀಯಲ್ಲ ಇನ್ನೊಂದು ಕ್ಷಣದಲ್ಲಿ ಗಾಳಿ ಬಂದರೆ ನೆಲಕ್ಕೆ ಬಿದ್ದು ಹೋಗುತ್ತೀಯಲ್ಲ!" ಎಂದನು.
ಇಬ್ಬನಿ ಹೇಳಿತು: "ನಾನು ಎಕೆ ಕುಳಿತಿದ್ದೇನೆ ಗೊತ್ತೆ? ಆಕಾಶಕ್ಕೆ ಹೋಗಬೇಕು ಅದಕ್ಕೆ ಕುಳಿತಿದ್ದೇನೆ, ಅದು ನನ್ನ ಕನಸು" ಎಂದಿತು.
ಈತನಿಗೆ ನಗು ಬಂತು, " ನಿನ್ನದು ಹುಚ್ಚನ ಕನಸು. ಕಾಲಿರುವ ನನಗೇ ಆಗುವುದಿಲ್ಲ. ಇನ್ನು ನೀನು ಹೇಗೆ ಮೇಲಕ್ಕೆ ಹೋಗುತ್ತೀಯ?" ಎಂದನು.
ಅದಕ್ಕೆ ಇಬ್ಬನಿ ಹೇಳಿತು: " ನಾನು ಆಕಾಶಕ್ಕೆ ಏರುವವನೇ, ನಿರ್ಧಾರ ಮಾಡಿದ್ದೇನೆ. ಇನ್ನು ಅರ್ಧ ತಾಸು ನೀನು ಇಲ್ಲೇ ಇದ್ದು ನೋಡು".
ಕಲವೇ ಕ್ಷಣಗಳಲ್ಲಿ ಸೂರ್ಯನ ಕಿರಣಗಳು ಇಬ್ಬನಿ ಮೇಲೆ ಬಿದ್ದವು. ಕಿರಣಗಳು ಇಬ್ಬನಿಯನ್ನು ಕುಡಿಯಲು ಶುರು ಮಾಡಿದವು. ಬಿಂದು ಕಿರಣಗಳ ಮೂಲಕ ಮೇಲಕ್ಕೆ ಏರಿತು.
ಇಬ್ಬನಿ ಹೇಳಿತು: "ಮನುಷ್ಯನೇ ನೋಡು ನಾನು ಹೇಗೆ ಮೇಲಕ್ಕೆ ಏರಿದೆ! ಒಂದು ವೇಳೆ ನೀನು ನನ್ನ ಕುಡಿದಿದ್ದರೂ ನಿನ್ನ ಮೈ ಬೆವರಿನ ಮೂಲಕ ಮೇಲೆ ಏರುತ್ತಿದ್ದೆ" ಎಂದಿತು.
ಒಂದು ಹನಿ ನೀರಿಗೆ ಇರುವಷ್ಟು ಸ್ಪಷ್ಟತೆ ನಮಗಿಲ್ಲವೇ
ಇಷ್ಟು ಸ್ಪಷ್ಟ ನಿರ್ಧಾರ ನಮ್ಮ ಬದುಕಿನಲ್ಲಿ ಇದ್ದರೆ ನಾವೇನು ಅಂದುಕೊಳ್ಳುತ್ತೇವೆ ಅದು ಆಗಿಯೇ ತೀರುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ನಿಮಗಿಷ್ಟವಾದ ರಂಗದಲ್ಲಿ ಸ್ಪಷ್ಟ ಗುರಿ ಹಾಕಿಕೊಂಡರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿದೆ..
ಗುರಿ ಸ್ಪಷ್ಟವಿದ್ದಾಗ ಮಾತ್ರ ಸಾಧನೆ ಸಾಧ್ಯವಿಲ್ಲ. ಅದಕ್ಕೆ ನಿರಂತರ ಪ್ರಯತ್ನ ದೃಢಸಂಕಲ್ಪ ಬೇಕು. ದೃಡ ಸಂಕಲ್ಪ ಹೊಂದಿದ ಸ್ಪಷ್ಟ ಗುರಿ, ನಿರಂತರ ಪ್ರಯತ್ನ ಇದ್ದವರನ್ನು ಯಾರು ತಡೆಯಲು ಸಹ ಸಾಧ್ಯವಿಲ್ಲ..
👍💐💐💐
No comments:
Post a Comment