Sunday, March 3, 2024

 ಕಥೆ-324

ಬದುಕಿ ಬದುಕಲು ಬಿಡಿ (Live and let live) (ವಿಶ್ವ ವನ್ಯಜೀವಿಗಳ ದಿನ ನಿಮಿತ್ತ)

ಮಹಾತ್ಮ ಗಾಂಧೀಜಿಯವರು ಹೇಳುವಂತೆ "ಒಂದು ರಾಷ್ಟ್ರದ ಶ್ರೇಷ್ಠತೆ ಮತ್ತು ಅದರ ನೈತಿಕ ಪ್ರಗತಿಯನ್ನು ಅದರ ಪ್ರಾಣಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಮೂಲಕ ನಿರ್ಣಯಿಸಬಹುದು."

ಅಳಿವಿನಂಚಿಗೆ ತಲುಪಿರುವ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಜಾಗೃತಿ ಹಾಗೂ ಪರಿಸರದ ಸಮತೋಲನಕ್ಕೆ ಅವುಗಳ ಪ್ರಾಮುಖ್ಯತೆ ಎಷ್ಟಿದೆ ಎಂದು ತಿಳಿಸಲು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ಪ್ರಾಣಿ ಜೀವ ಸಂಕುಲವು ಎದುರಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ.ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮಾರ್ಚ್‌ 3ನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲು ಡಿಸೆಂಬರ್ 20, 2013 ರಲ್ಲಿ ಘೋಷಣೆ ಮಾಡಿತು. ಪ್ರಾಣಿ ಸಂಕುಲ ಮತ್ತು ಸಸ್ಯ ಸಂಕುಲದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಸ್ಯ ಹಾಗೂ ಪ್ರಾಣಿಗಳ ಪಾಮುಖ್ಯತೆಯನ್ನು ತಿಳಿಸುವುದು, ವನ್ಯಜೀವಿ ಸಂಕುಲದ ವಿವಿಧ ಕೊಡುಗೆಗಳನ್ನು ಗೌರವಿಸಲು ಈ ದಿನವನ್ನು ಮೀಸಲಿರಿಸಲಾಗಿದೆ. 

2024 ರ ಥೀಮ್ "ಜನರು ಮತ್ತು ಗ್ರಹವನ್ನು ಸಂಪರ್ಕಿಸುವುದು: ವನ್ಯಜೀವಿ ಸಂರಕ್ಷಣೆಯಲ್ಲಿ ಡಿಜಿಟಲ್ ನಾವೀನ್ಯತೆಗಳನ್ನು ಅನ್ವೇಷಿಸುವುದು."

"ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನವು ಮಾತನಾಡಲು ಸಾಧ್ಯವಿಲ್ಲ, ಭೂಮಿ ನಮಗೆ ಸೇರಿದ್ದಲ್ಲ. ನಾವು ಭೂಮಿಗೆ ಸೇರಿದ್ದೇವೆ. ವನ್ಯಜೀವಿಗಳನ್ನು ನಮ್ಮ ಮನಸ್ಸಿಗೆ ಬಂದಂತೆ ಮಾಡಲು ಅವು ನಮ್ಮ ಸ್ವತ್ತಲ್ಲ. ನಂತರ ಬಂದವರಿಗೆ ನಾವು ಅದರ ಲೆಕ್ಕ ಕೊಡುವಂತಾಗಬೇಕು.

"ವನ್ಯಜೀವಿಗಳು ಮತ್ತು ಕಾಡುಗಳ ನಿರಂತರ ಅಸ್ತಿತ್ವವು ಮಾನವರ ಉತ್ತಮ ಜೀವನದ ಗುಣಮಟ್ಟಕ್ಕೆ ಮುಖ್ಯವಾಗಿದೆ. 

ಸುಮಾರು 1500ಕ್ಕೂ ಹೆಚ್ಚು ಪ್ರವೇದದ ಜೀವಿಗಳ ಸಂತತಿ ಅಳಿದು ಹೋಗಿದೆ. ಸುಮಾರು 17000ಕ್ಕೂ ಹೆಚ್ಚು ಪ್ರಭೇದದ ಜೀವಿಗಳು ಅಳಿವಿನಂಚಿನಲ್ಲಿವೆ ಎಂದು ಅಂದಾಜಿಸಲಾಗಿದೆ.

ಕೊನೆಯ ಒಂದು ಶತಮಾನದಲ್ಲಿ ಸುಮಾರು 18 ಹೆಚ್ಚು ಜೀವಿಗಳ ಸಂತತಿ ನಿರ್ನಾಮವಾಗಿದೆ.. ಇದು ಹೀಗೆ ಮುಂದುವರೆದರೆ ವಿಕೃತ ಪರಿಸರ ಕಟ್ಟಿಟ್ಟ ಬುತ್ತಿ.

ಪರಿಸರವನ್ನು ಹಾಳು ಮಾಡಿದರೆ ನಮಗೆ ಸಮಾಜವೇ ಇರುವುದಿಲ್ಲ. ದುರಾಸೆ ಬಯಸಿ ಅದರಂತೆ ಮಾಡಲು ಜಗತ್ತು ನಮ್ಮದಲ್ಲ. ನಾವು ಅದರ ಮಾಲೀಕರಲ್ಲ; ನಾವು ಅದರ ಸೇವಕರಂತಾಗಬೇಕು.

"ವನ್ಯಜೀವಿ ಕಳೆದುಕೊಂಡ ಮೇಲೆ ಅದು ಮಾನವನ ಅಸ್ತಿತ್ವವನ್ನು ಶಾಶ್ವತವಾಗಿ ಕಳೆದುಬಿಡುತ್ತದೆ.

ಪ್ರಕೃತಿಯ ಪಾಠ ಸರಳ ನಾವು ಆ ರೀತಿ ಬದುಕುವಂತಾಗಬೇಕು ಅದೇ

"ಬದುಕಿ ಬದುಕಲು ಬಿಡಿ"👍💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು