ಕಥೆ-374
ವಿಶ್ವ ಪುಸ್ತಕ ದಿನ
(ಏಪ್ರಿಲ್ -23)
📗📘📙📔📓📗📙📘
ಪುಸ್ತಕ ಹೇಳುತ್ತದೆ ನನ್ನನ್ನು ತಲೆ ತಗ್ಗಿಸಿ ನೋಡು,,,,,,ಈ ಪ್ರಪಂಚದಲ್ಲಿ ನಿನ್ನನ್ನು ತಲೆ ಎತ್ತಿ ನೋಡುವಂತೆ ಮಾಡುತ್ತೇನೆಂದು...👍
ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳೊಂದಿಗೆ,,,,🙏🏻
ಮೊದಲೆಲ್ಲ ಜನರ ಟೈಮ್‌ಪಾಸ್ (Timepass) ಅಂದರೆ ಆಟ ಆಡುವುದನ್ನು ಹೊರತುಪಡಿಸಿದರೆ ಪುಸ್ತಕಗಳನ್ನು ಓದುವುದು. ಈಗಲೂ ಸಹ ಪುಸ್ತಕಗಳನ್ನು ಓದುವುದು ಹಲವರ ಅಭ್ಯಾಸ. ಆದರೂ, ಮೊಬೈಲ್, ಲ್ಯಾಪ್‌ಟಾಪ್, ಐಪ್ಯಾಡ್‌ನಂತಹ ಸಾಧನಗಳು ಬಂದ ಮೇಲೆ ಭೌತಿಕವಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನಬಹುದು. ಈಗಿನ ಕಾಲದ ಮಕ್ಕಳು ಪುಸ್ತಕವನ್ನೇ ಓದುವುದಿಲ್ಲ ಎಂಬ ದೂರುಗಳು ಹಿರಿಯರಿಂದ ಆಗಾಗ ಕೇಳಿಬರುತ್ತದೆ. ಇನ್ನು, ಹಲವರು ಮೊಬೈಲ್ ಗಳಲ್ಲೇ ಇ - ಬುಕ್ಸ್, ಪುಸ್ತಕಗಳನ್ನು ಓದುತ್ತಾರೆ. ಆದರೂ, ಪುಸ್ತಕಗಳನ್ನು ಹಿಡಿದುಕೊಂಡು ಪುಟವನ್ನು ತಿರುಗಿಸುತ್ತಾ ಓದುವುದೇ ಎಷ್ಟು ಚೆಂದ ಅಲ್ವಾ..? ಅಂದ ಹಾಗೆ, ಇಂದು ವಿಶ್ವ ಪುಸ್ತಕ ದಿನ ..
ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳಂತೂ ಮಹತ್ವದ ಪಾತ್ರ ವಹಿಸುತ್ತವೆ.. ನಾವೆಲ್ಲ ಪುಸ್ತಕಗಳನ್ನು ದೇವರ ಸಮಾನವೆಂದು ಗೌರವಿಸುತ್ತೇವೆ.. ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ, ಪಠ್ಯಪುಸ್ತಕದ ಜೊತೆಗೆ ಕಥೆ ಪುಸ್ತಕವೆಂದರೆ ಪಂಚಪ್ರಾಣ ಅದರಲ್ಲೂ ನೀತಿ ಕಥೆಗಳ ಪುಸ್ತಕಗಳು, ಪಂಚತಂತ್ರ ಕಥೆಗಳ ಪುಸ್ತಕ ಹೆಚ್ಚು ನನ್ನನ್ನು ಆಕರ್ಷಿಸಿದವು. ಕೇಸೂರ (ದೋಟಿಹಾಳಗೆ ಹತ್ತಿಗೊಂಡ ಊರು) ಪ್ರಾಥಮಿಕ ಶಾಲೆಯಲ್ಲಿ ನನ್ನ ಗುರುಗಳಾದ ಶ್ರೀ ಹನುಮಂತಪ್ಪ M ಇವರು ಮುಖ್ಯೋಪಾಧ್ಯಾಯರಾಗಿದ್ದರು. ಅನೇಕ ಕಥೆಗಳ ಪುಸ್ತಕಗಳನ್ನು ತರಿಸಿದ್ದರು. ಆಗಾಗ ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡುತ್ತಿದ್ದರು. ಅದು ನಮಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿತು. ಕೊಟ್ಟ ಪುಸ್ತಕವನ್ನು ಓದಿ ಬೇರೆ ಪುಸ್ತಕ ಕೊಡಬೇಕೆಂದು ಶಿಕ್ಷಕರಿಗೆ ಮನವಿ ಮಾಡುತ್ತಿದ್ದೆ. ಅದಕ್ಕೆ ಅವರು ಪ್ರೀತಿಯಿಂದ ಬೇರೆ ಪುಸ್ತಕ ಕೊಡುತ್ತಿದ್ದರು. ಪದೇ ಪದೇ ಪುಸ್ತಕ ಕೇಳಿದ್ದಕ್ಕೆ ಆ ಪುಸ್ತಕಗಳ ಕಪಾಟಿನ key ಯನ್ನು ನನಗೆ ಕೊಟ್ಟಿದ್ದರು. ಉಳಿದ ವಿದ್ಯಾರ್ಥಿಗಳು ಕೇಳಿದರೂ ಪುಸ್ತಕವನ್ನು ಕೊಡಲು ನನಗೆ ತಿಳಿಸಿದ್ದರು. ಪುಸ್ತಕ ಪ್ರೀತಿ ಬೆಳೆಸಿದ ಶ್ರೀ ಹನುಮಂತಪ್ಪ M ಸರ್ ಗೆ ನನ್ನ ಶಿರಸಾಷ್ಟಾಂಗ ನಮಸ್ಕಾರ..
ಪುಸ್ತಕಗಳನ್ನು ಓದುವ ಮಹತ್ವವನ್ನು ವಿಶ್ವದಾದ್ಯಂತ ಪ್ರಚುರಪಡಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 23 ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಪುಸ್ತಕ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಉತ್ತಮ ಸ್ನೇಹಿತನಿದ್ದಂತೆ. ಪಠ್ಯದ ಓದಿನ ಹೊರತಾಗಿ, ನಮ್ಮ ವ್ಯಕ್ತಿತ್ವವನ್ನು ಸುಧಾರಿಸಲು, ಸಾಧನೆಯ ಮೆಟ್ಟಿಲುಗಳನ್ನೇರಲು, ಸಮಯದ ಸದ್ವಿನಿಯೋಗದ ಉದ್ದೇಶಗಳಿಂದ ಈ ಮಾತು ಪ್ರಚಲಿತದಲ್ಲಿದೆ. ನಮ್ಮ ನೆಲದ ಡಾ. ಎಪಿಜೆ ಅಬ್ದುಲ್ ಕಲಾಂರಂತಹ ಮಹನೀಯರು ಕೂಡ ಪುಸ್ತಕಗಳ ಮಹತ್ವಗಳನ್ನು ಸಾರಿದ್ದಾರೆ.
ಪುಸ್ತಕಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ,
ನೀವು ಎಷ್ಟು ಹೆಚ್ಚು ಓದುತ್ತೀರೋ, ಹೆಚ್ಚು ವಿಷಯಗಳನ್ನು ನೀವು ತಿಳಿಯುವಿರಿ. ನೀವು ಹೆಚ್ಚು ಕಲಿಯುವಿರಿ,
ಪುಸ್ತಕಗಳು ನಾಗರಿಕತೆಯ ವಾಹಕಗಳು. ಪುಸ್ತಕಗಳಿಲ್ಲದಿದ್ದರೆ, ಇತಿಹಾಸವು ಮೌನವಾಗಿ, ಸಾಹಿತ್ಯವು ಮೂಕವಾಗಿ, ವಿಜ್ಞಾನವು ದುರ್ಬಲವಾಗಿ, ಆಲೋಚನೆ ಮತ್ತು ಊಹೆಗಳು ನಿಂತು ಹೋಗುತ್ತವೆ.
ಓದುವುದು ಮನಸ್ಸಿಗೆ, ದೇಹಕ್ಕೆ ವ್ಯಾಯಾಮ.
ಡಾ. ಬಿ.ಆರ್. ಅಂಬೇಡ್ಕರ್ ಹೇಳುವಂತೆ
ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ'
ಓದು, ಓದು, ಓದು ಯಾಕೆಂದರೆ ಶತ್ರುಗಳು ನಿನ್ನ ಜ್ಞಾನಕ್ಕೆ ಮಾತ್ರ ಹೆದರುತ್ತಾರೆ.
💐💐💐💐💐💐
No comments:
Post a Comment