Friday, April 12, 2024

ಕಥೆ-364

ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಸಾಕಷ್ಟು ವಿದ್ಯಾರ್ಥಿಗಳು ಕೇಳುವ ಪ್ರಶ್ನೆ.....

ಇದಕ್ಕೆ ಉತ್ತರವಾಗಿ ಒಂದು ಅವಲೋಕನ..

 ಎಸ್‌ಎಸ್ಎಲ್‌ಸಿ ಪರೀಕ್ಷೆಗಳು ಮುಗಿದು ಒಂದು ವಾರ ಆಗಲಿಕ್ಕೆ ಬಂತು, Mostly ನೀವು ನಿದ್ರೆ ಮತ್ತು Rest ನಿಂದ ಹೊರ ಬಂದಿರುತ್ತೀರಿ, ಅಲ್ಲದೆ ನಿಮ್ಮ SSLC ಫಲಿತಾಂಶ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟಗೊಳ್ಳುವದೆಂದು Board ಅಧ್ಯಕ್ಷರು ತಿಳಿಸಿದ್ದಾರೆ. Result ಬಂದ ನಂತರ ನೋಡೋಣ ಬಿಡು. ಅನ್ನುವುದರ ಬದಲಾಗಿ ಈಗಿನಿಂದಲೇ ನಿಮ್ಮ ಆಸಕ್ತಿರಂಗದ ಮತ್ತು ಮುಂದೆ ಬೇಡಿಕೆ ಇರುವ ಕೋರ್ಸಗಳ ಸ್ಪಷ್ಟ ಗುರಿ, ಪ್ಲಾನ್ ಹಾಕಿಕೊಳ್ಳುವುದು ಉತ್ತಮ.. ಫಲಿತಾಂಶ ಬಂದ ತಕ್ಷಣ ಕಾರ್ಯ ಪ್ರವೃತ್ತರಾಗಲು ಸಹಾಯಕವಾಗುತ್ತದೆ..

ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಅವರ ಪಾಲಕರೆಲ್ಲರಲ್ಲೂ ಒಂದೇ ರೀತಿಯ ಚಿಂತೆ. ಅದೇನೆಂದರೆ, ಎಸ್‌ಎಸ್ಎಲ್‌ ನಂತರ ಮುಂದೇನು? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು? ಯಾವುದನ್ನು ಆಯ್ಕೆ ಮಾಡಿಕೊಂಡರೆ ಭವಿಷ್ಯ ಅತ್ಯುತ್ತಮವಾಗಿರುತ್ತದೆ? ಇಂತಹ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮುಂದಿನ ಭವಿಷ್ಯಕ್ಕೆ ಭಾರಿ ದೊಡ್ಡ ಪೆಟ್ಟು ಬೀಳುತ್ತದೆ.

ಪಾಲಕರು ತಮ್ಮ ಮಕ್ಕಳ ಆಸಕ್ತಿಯ ವಿಷಯವೇನು? ಯಾವ ವಿಷಯದಲ್ಲಿ ಅತ್ಯುತ್ತಮ ಆಗಿದ್ದಾರೆ? ಎಂಬ ಪ್ರಮುಖವಾದ ಅಂಶಗಳನ್ನು ಗಮನಿಸದೇ ತಮ್ಮ ಯಾರೊ ಸಂಬಂಧಿಯವರ ಮಕ್ಕಳು ಆಯ್ದುಕೊಂಡ ಕೋರ್ಸ್ ಅನ್ನೇ ತಮ್ಮ ಮಕ್ಕಳು ಕೂಡ ಅಯ್ದುಕೊಳ್ಳುವಂತೆ ಒತ್ತಡ ಹೇರಿ, ಅದೇ ಕೋರ್ಸಿಗೆ Admission ಮಾಡಿಸುತ್ತಾರೆ. ಈ ರೀತಿಯ ನಿರ್ಣಯಗಳಿಂದ ಮಕ್ಕಳಲ್ಲಿ ಆಸಕ್ತಿ ಇಲ್ಲದೇ, ಅವರು ನಿರ್ದಿಷ್ಟ ಸಾಧನೆ ಮಾಡುವಲ್ಲಿ ವಿಫಲರಾಗುತ್ತಾರೆ.

ಪಾಲಕರು ಮಾಡುವ ಈ ರೀತಿಯ ತಪ್ಪುಗಳು. ಒಂದೆಡೆಯಾದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಸಹ ತಮ್ಮ ಅಸಕ್ತಿಯ ಕ್ಷೇತ್ರದತ್ತ ಗಮನಹರಿಸದೇ ತನ್ನ ಗೆಳೆಯ, ಗೆಳತಿಯರು ಆಯ್ದುಕೊಂಡ ಕೋರ್ಸ್‌ಳಿಗೆ ತಾವೂ ಸೇರಿಕೊಂಡು ನಿರೀಕ್ಷಿತ ಸಾಧನೆ ಮಾಡುವಲ್ಲಿ ವಿಫಲರಾಗುತ್ತಾರೆ.

ಯಾವುದೆ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೊದಲು ನನ್ನಲ್ಲಿರುವ ವಿಶೇಷ ಸಾಮರ್ಥ್ಯಗಳು ಹಾಗೂ ದೌರ್ಬಲ್ಯಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಸಾಮರ್ಥ್ಯಗಳಲ್ಲಿ ಮುಖ್ಯವಾಗಿ ಆಯ್ದುಕೊಳ್ಳಬೇಕಾದ ವಿಷಯದಲ್ಲಿರುವ ಪೂರ್ವ ಜ್ಞಾನ ಹೇಗಿದೆ? ಅದನ್ನೇ ಬೇಸಿಕ್ ಫೌಂಡೇಶನ್ ಅನ್ನುವುದು.. ಈವರೆಗೆ ಅದರಲ್ಲಿ ನನ್ನ ಸಾಧನೆಗಳೇನು? ಆ ವಿಷಯದಲ್ಲಿ ನನಗಿರುವ ವಿಶೇಷ ಆಸಕ್ತಿಗಳೇನು? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡಾಗ ಉತ್ತರಗಳು ಹೌದು ಎಂದಾದರೆ, ಹಾಗೂ ದೌರ್ಬಲ್ಯಗಳಿಗಿಂತ. ಸಾಮರ್ಥ್ಯಗಳ ಸಂಖ್ಯೆಯೇ ಹೆಚ್ಚಾದರೆ ಮಾತ್ರ ಆ ಕೋರ್ಸ್ ಆಯ್ದುಕೊಳ್ಳುವುದು ಉತ್ತಮ. ಅಲ್ಲದೆ ನಾನು ಆಯ್ದುಕೊಳ್ಳಬೇಕೆಂದಿರುವ ಕೋರ್ಸ್‌ಗೆ ಮುಂದೆ ಭವಿಷ್ಯದಲ್ಲಿರುವ ಅವಕಾಶಗಳೇನು? ಮುಂದೆ ಎದುರಿಸಬೇಕಾಗಿರುವ ಅಡ್ಡಿ-ಆತಂಕಗಳು ಯಾವುವು? ಅವುಗಳನ್ನು ಸಮರ್ಥವಾಗಿ ಎದುರಿಸಿ ಸಾಧಿಸಬಲ್ಲೆ ಎಂಬ ಅತ್ಮವಿಶ್ವಾಸವನ್ನು ಬೆಳೆಸಿಕೊಂಡಾಗ ಮಾತ್ರ ಸಾಧನೆ ಎಂಬುದು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದಾಗಿದೆ.

ಈ ರೀತಿಯ ಹಲವಾರು ಕೋರ್ಸ್‌ಗಳ ಆಯ್ಕೆಗಳಲ್ಲಿನ ಗೊಂದಲಗಳಿಂದ ಹೊರಬರುವ ಏಕೈಕ ಮಾರ್ಗವೆಂದರೆ ತಮ್ಮನ್ನು ತಾವು ಸ್ವಾಟ್ (SWOT) ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕು.

SWOT ಶಬ್ದ ವಿಶ್ಲೇಷಿಸಿದಾಗ, Long form ನೋಡಿದರೆ 

S-Strength (ನಮ್ಮ ಸಾಮರ್ಥ್ಯಗಳು)

W-Weakness ನಮ್ಮ ದೌರ್ಬಲ್ಯಗಳು), 

O-Opportunities (ನಮಗೆ ಅವಕಾಶಗಳು), 

T-Threats (ನಮಗೆ ಒದಗಬಹುದಾದ ಅತಂಕಗಳು).

ಬಹಳಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಎಂದು ಪ್ರಶ್ನಿಸಿದಾಗ ಪಿಯುಸಿ (ಕಲಾ, ವಿಜ್ಞಾನ, ವಾಣಿಜ್ಯ) ಕೋರ್ಸ್‌ಗಳಲ್ಲಿ ಯಾವುದಾದರೊಂದಕ್ಕೆ ಸೇರಿಕೊಳ್ಳುವುದು ಎಂಬ ಸಿದ್ದ ಉತ್ತರ ತತ್ ಕ್ಷಣವೇ ಪ್ರಾಪ್ತವಾಗುತ್ತದೆ. ಆದರೆ ಪಿಯುಸಿ ಹೊರತಾಗಿಯೂ ಎಸ್‌ಎಸ್‌ಎಲ್‌ಸಿ ನಂತರ ನೇರವಾಗಿ ಹಲವಾರು ಅತ್ಯುತ್ತಮ ಕೋರ್ಸ್ ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ ಹಾಗಾದರೆ, ಅಂತಹ ಅಧ್ಯಯನಕ್ಕೆ ಯೋಗ್ಯವಾದ ಕೋರ್ಸ್‌ಗಳು ಯಾವುವು? 

ಎಂಬುದರ ಒಂದು ಚಾರ್ಟನ್ನು ಇದಕ್ಕೆ ಲಗತ್ತಿಸಲಾಗಿದೆ.

ನಮ್ಮ ಮಕ್ಕಳು ತಮ್ಮ ಆಸಕ್ತಿ ರಂಗ ಮತ್ತು ಮುಂದೆ ಭವಿಷ್ಯದಲ್ಲಿ ಬೇಡಿಕೆ ಇರುವಂತಹ ಒಳ್ಳೆಯ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬುದು ನಮ್ಮ ಸದಾಶಯ..👍💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು