ಕಥೆ-363
ರಂಜಾನ್ ಹಬ್ಬದ ಶುಭಾಶಯಗಳು
ಯಾವುದೇ ಹಬ್ಬ ಹರಿದಿನಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತವೆ. ಅದರಲ್ಲಿ ರಂಜಾನ್ ಹಬ್ಬ
ಇಸ್ಲಾಮಿಕ್ ಕ್ಯಾಲೆಂಡರ್ನಲ್ಲಿ ರಂಜಾನ್ ಅತ್ಯಂತ ಪ್ರಮುಖ. ಒಂದು ತಿಂಗಳ ಆಚರಣೆಯ ಈ ಹಬ್ಬ ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು ಈ ಒಂದು ತಿಂಗಳು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ.
ಖುರಾನ್ (ಮುಸ್ಲಿಂ ಪವಿತ್ರ ಪುಸ್ತಕ) ಪ್ರವಾದಿ ಮುಹಮ್ಮದ್ "ಅವರಿಗೆ ಶಾಂತಿ ಸಿಗಲಿ" ಎಂದು ಪ್ರಾರಂಭಿಸಿದ ತಿಂಗಳ ಜ್ಞಾನವು ಕಾರ್ಯನಿರ್ವಹಿಸುತ್ತದೆ.
ಸೂರ್ಯೋದಯದಕ್ಕಿಂತ ಮುಂಚೆ ಕುಟುಂಬ ಸದಸ್ಯರೊಂದಿಗೆ ಸೇವಿಸುವ ಆಹಾರ ವೇಳೆ ( ಸಹಿರಿ) ಹಾಗೂ ಸೂರ್ಯಾಸ್ತದ ವೇಳೆ ಉಪವಾಸ ಮುರಿಯುವ ವೇಳೆ (ಇಫ್ತಾರ್) ಉಪವಾಸದ ಪ್ರಮುಖ ಸಮಯ ಇಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಸೇರಿ ಖರ್ಜೂರ, ಬಾಳೆ ಹಣ್ಣು, ಕಲ್ಲಂಗಡಿ ಸೇರಿದಂತೆ ಎಲ್ಲಾ ಬಗೆಯ ಹಣ್ಣು- ಹಂಪಲು ತಂದು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಸೇವಿಸುವ ಮೂಲಕ ಉಪವಾಸ ವೃತ ಮುಗಿಸುತ್ತಾರೆ. ಆ ಮೂಲಕ ಬಡವ, ಶ್ರೀಮಂತ ಉನ್ನತ, ಕನಿಷ್ಟ ಎಂಬ ಬೇಧಬಾವ ಮರೆತು ಮಾನವಿಯತೆ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ರಂಜಾನ್ ಸಮಯದಲ್ಲಿ, ಎಲ್ಲಾ ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದು ಪ್ರಮುಖವಾಗಿದೆ. ರಂಜಾನ್ ಆಚರಣೆಯು ಪ್ರಾರ್ಥನೆ, ಒಳ್ಳೆಯ ಕಾರ್ಯಗಳನ್ನು ಮಾಡುವುದು, ಜನರಿಗೆ ಸಹಾಯ ಮಾಡುವ ಮೂಲಕ ನಮ್ಮ ಪ್ರಭುವಿಗೆ ಹತ್ತಿರವಾಗಲು ಒಂದು ಮಾರ್ಗ ಎಂಬ ನಂಬಿಕೆ.
ರಂಜಾನಿನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್ ರನ್ನು ಕುರಾನ್ ಮೂಲಕ ನೆನಪಿಸಿಕೊಳ್ಳುವುದು ಇದೆ. ಪ್ರತಿಯೊಂದು ಹಬ್ಬ ಸಮಾಜದಲ್ಲಿ ಸರ್ವಧರ್ಮಗಳ ಸಾಮರಸ್ಯ ಹೆಚ್ಚಿಸುವುದರ ಜೊತೆಗೆ ದಯೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಆಗಿದೆ..
💐💐💐💐💐
No comments:
Post a Comment