ಕಥೆ-368
ಚಿಕ್ಕದಾದರೂ ಅದ್ವಿತೀಯ ಕೆಲಸ
ಒಬ್ಬ ವ್ಯಕ್ತಿ, ತನ್ನಲ್ಲಿದ್ದ ದೋಣಿ ಯನ್ನು ಪೇಂಟ್ ಮಾಡುವಂತೆ ಬಡ ಪೇಂಟರ್ ಗೆ ವಹಿಸಿದ.ಆತನ ಮಾತಿನಂತೆ ಆ ಪೇಂಟರ್ ತನ್ನ ಉಪಕರಣದೊಂದಿಗೆ ಬಂದವ ಆ ದೋಣಿ ಗೆ ಕಪ್ಪು ಮಿಶ್ರಿತ ಕೆಂಪು ಬಣ್ಣದಿಂದ ಫಳ ಫಳ ಹೊಳೆಯುವಂತೆ ಪೇಂಟ್ ಮಾಡಲು ಮುಂದಾದಾಗ ಆತನ ಕಣ್ಣಿಗೆ ಆ ದೋಣಿ ಯ ಒಂದು ಮೂಲೆಯಲ್ಲಿ ಪುಟ್ಟ ರಂಧ್ರ ಕಾಣುತ್ತದೆ . ಆಗ ಆತ ಮಾತಿಲ್ಲದೇ ಮೊಟ್ಟ ಮೊದಲು ಅದನ್ನು ಸರಿ ಪಡಿಸಿ ನಂತರ ದೋಣಿ ಆಕರ್ಷಕ ವಾಗುವಂತೆ ಪೇಂಟ್ ಮಾಡಿ, ತನ್ನ ಕೂಲಿ ಹಣ ಪಡೆದು ಹೊರಟು ಹೋಗುತ್ತಾನೆ.
ಮರುದಿನ, ಆ ದೋಣಿಯ ಮಾಲೀಕ ಆ ಪೇಂಟರ್ ನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದವ ಆತನ ಕೈಗೆ ದೊಡ್ಡ ಮೊತ್ತದ ಹಣ ಕೊಡಲು ಬರುತ್ತಾನೆ. ಅದನ್ನು ಕಂಡ ಆ ಪೇಂಟರ್ ಗೆ ಎಲ್ಲಿಲ್ಲದ ಆಶ್ಚರ್ಯವಾಗಿ ಆತ ದೋಣಿ ಮಾಲೀಕನಿಗೆ " ಇದೇನು ಸ್ವಾಮಿ.. ನಿನ್ನೆ ನಾನು ಮಾಡಿದ ಕೆಲಸಕ್ಕೆ ತಾವು ಆಗಲೇ ನನಗೆ ಕೂಲಿ ಕೊಟ್ಟಿದ್ದೀರಲ್ಲ... ಮರೆತು ಬಿಟ್ರಾ.. ? ಇಂದು ಮತ್ತೇಕೆ ಇಷ್ಟು ಹಣ.?.." ಎಂದು ಹೇಳುತ್ತಿದ್ದವನನ್ನು ಅರ್ಧಕ್ಕೆ ತಡೆದ ದೋಣಿ ಮಾಲೀಕ -"
ಈಗ ನಾನು ಕೊಡಲು ಬಂದಿರುವುದು ದೋಣಿ ಪೇಂಟ್ ಮಾಡಿದ ದುಡ್ಡಲ್ಲ ಅದು
ನನಗೂ ಗೊತ್ತು... ಇದು ನೀನು ಆ ದೋಣಿಯಲ್ಲಿ ಆಗಿದ್ದ ಸಣ್ಣ ರಂಧ್ರ ಮುಚ್ಚಿದ್ದಕ್ಕೆ " ಎಂದಾಗ ಪೇಂಟರ್ -" ಅಲ್ಲಾ ಸ್ವಾಮಿ.. ಅಷ್ಟು ಸಣ್ಣ ಕೆಲಸಕ್ಕೆ ಇಷ್ಟೊಂದು ಹಣ!" ಎಂದು ಕೇಳಿದಾಗ ದೋಣಿ ಯ ಮಾಲೀಕ" ನಿನಗೆ ಗೊತ್ತಿಲ್ಲ.. ಅದೇನಾಯ್ತು ಎಂದರೆ, ನನಗೆ ಆ ದೋಣಿಯಲ್ಲಿ ರಂಧ್ರ ವಾಗಿರುವ ವಿಚಾರ ಗೊತ್ತಿತ್ತು ಆದರೆ ನಿನಗೆ ಅದನ್ನು ಹೇಳಲು ಮರೆತಿದ್ದೆ. ನಿನ್ನೆ ನೀನು ಆ ದೋಣಿ ಪೇಂಟ್ ಮಾಡಿದ ನಂತರ ಅದು ಒಣಗಿದ ಮೇಲೆ ನನ್ನ ಇಬ್ಬರು ಮಕ್ಕಳು ಅದನ್ನು ತೆಗೆದುಕೊಂಡು ಮೀನು ಹಿಡಿಯಲು ಆಳವಾದ ನೀರಿಗೆ ಹೋಗಿದ್ದರು. ದೋಣಿಗೆ ರಂಧ್ರವಾಗಿದ್ದ ವಿಚಾರ ಅವರಿಗೂ ಗೊತ್ತಿರಲಿಲ್ಲ. ಆ ವೇಳೆ ನಾನೂ ಸಹ ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದ ಮೇಲೆ ಆ ದೋಣಿ ಇರದಿರುವುದನ್ನು ಕಂಡು ನಾನು ತುಂಬಾ ಹತಾಶನಾಗಿದ್ದೆ... ಮನದಲ್ಲಿ ನೂರೆಂಟು ಬೇಡದ ಯೋಚನೆಗಳು ಭುಗಿಲೆದ್ದಿದ್ದವು. ಹೇಗಪ್ಪಾ ಎಂದು ಚಿಂತಿಸಿತೊಡಗಿದ್ದೆ. ಕೆಲ ನಿಮಿಷಗಳ ನಂತರ ಆ ನನ್ನ ಇಬ್ಬರೂ ಮಕ್ಕಳು ಖುಷಿ ಖುಷಿಯಿಂದ ಆ ದೊಣಿಯೊಂದಿಗೆ ಮನೆಗೆ ಬಂದಾಗ ನನ್ನ ಮನದ ದುಗುಡ ಎಲ್ಲ ಮಾಯವಾಗಿ ಹೋಗಿತ್ತು... ಈಗ ನೀನೇ ಹೇಳು ನನ್ನ ಆ ಮಕ್ಕಳ ಜೀವ ಉಳಿಸಲು ಮಾಡಿದ ಅದ್ವಿತೀಯ ಕೆಲಸಕ್ಕೆ ನಿನಗೆ ನಾನು ಈಗ ಕೊಡುತ್ತಿರುವ ಮೊತ್ತ ಏನೇನೋ ಅಲ್ಲ ದಯವಿಟ್ಟು ಸ್ವೀಕರಿಸು" ಎನ್ನುತ್ತ ಆತನಿಗೆ ಆ ಹಣ ಕೊಟ್ಟು ಮತ್ತೊಮ್ಮೆ ಧನ್ಯವಾದಗಳನ್ನು ಹೇಳಿ ಹಗುರವಾದ ಮನಸ್ಸಿನಿಂದ ಮನೆಗೆ ಹಿಂತಿರುಗುತ್ತಾನೆ.
ಕೆಲವೊಮ್ಮೆ ಕೆಲಸ ಮಾಡುತ್ತಿರುತ್ತೇವೆ, ಅದಕ್ಕೆ ಪೂರಕವಾದ ಸಣ್ಣ ಪುಟ್ಟ ಕೆಲಸ ಮಾಡಲು ನಿರಾಕರಿಸುತ್ತೇವೆ.. ಮಾಡುವ ಪ್ರತಿಯೊಂದು ಕೆಲಸಗಳು ಮೌಲ್ಯಗಳನ್ನು ದೊಡ್ಡಬೆಲೆಯನ್ನು ಮತ್ತು ಗೌರವಗಳನ್ನು ತಂದುಕೊಡುತ್ತವೆ..
ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಗುಣ ಇರಬೇಕು ಅಷ್ಟೇ👍💐💐
ಲೇಖಕರು,ಕೃಪೆ:ಅರವಿಂದ.ಜಿ.ಜೋಷಿ ಮೈಸೂರು
No comments:
Post a Comment