Wednesday, April 17, 2024

 ಕಥೆ-369

ಯಲಬುರ್ಗಾದ ಮುಧೋಳ Seeds agentನ ಮಗಳು IAS ಅಧಿಕಾರಿ..

ಬೀಜದ ಕಂಪನಿಗಳಿಂದ ರೈತರಿಗೆ ಬೀಜ ಕೊಡಿಸಿ, ಪುನಃ ರೈತರಿಂದ ಕಂಪನಿಗೆ ಬೀಜಗಳನ್ನು ಕೊಡುವ ಸೀಡ್ಸ್ ಏಜೆಂಟಾಗಿ ಕಾರ್ಯನಿರ್ವಹಿಸಿದವರು ಶರಣಯ್ಯ ಬೀಳಗಿಮಠ ಮೂಲತಃ ಯಲಬುರ್ಗಾ ತಾಲೂಕಿನ ಮುಧೋಳದವರು. ಕೆಲವೊಂದು ಕಂಪನಿಗಳಿಂದ ರೈತರಿಗೆ ಹಣ ಬರದೆ ತೊಂದರೆ ಅನುಭವಿಸಿದರು, ಆದರೂ ಕೃಷಿಯಲ್ಲಿ ಇರುವ ಆಸಕ್ತಿಯನ್ನು ಬಿಡಲಿಲ್ಲ. ದಾವಣಗೆರೆಯಲ್ಲಿ ಸೀಡ್ಸ್ ಏಜೆಂಟಾಗಿ ಕಾರ್ಯನಿರ್ವಹಿಸಿ ತಮ್ಮ ನೆಲೆಯನ್ನು ಕಂಡುಕೊಂಡರು. ದಾವಣಗೆರೆಯಲ್ಲಿ ಶರಣಮ್ಮ ಎಂಬುವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳು.. ಸದ್ಯ ಶರಣಯ್ಯ ಸ್ವಾಮಿ ದಾವಣಗೆರೆಯಲ್ಲಿ ನರ್ಸರಿ ನಡೆಸುತ್ತಿದ್ದಾರೆ. ಹೆಂಡತಿ ಗೃಹಿಣಿ. 

ಮೂವರು ಮಕ್ಕಳಲ್ಲಿ ಸೌಭಾಗ್ಯ ಚಿಕ್ಕಂದಿನಿಂದಿಲೇ IAS ಅಧಿಕಾರಿ ಆಗಬೇಕೆಂದು ಕನಸು ಕಂಡವಳು.. ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಕಾಲೇಜಿನ ಶಿಕ್ಷಣವನ್ನು ದಾವಣಗೆರೆಯಲ್ಲಿ ಪಡೆದು ನಂತರ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಲ್ಲಿ BSc(Agri) ಮಾಡಿದಳು. ಪದವಿ ಓದುವಾಗಲೇ IAS ಬರೆಯಬೇಕೆಂಬ ಹಂಬಲ ಜಾಸ್ತಿ ಇತ್ತು, ಅದಕ್ಕಾಗಿ ತಮ್ಮ ಗುರುಮಾತೆ ಪ್ರೊಫೆಸರ್ ಅಶ್ವಿನಿ ಎಂ ಮಾರ್ಗದರ್ಶನದಂತೆ ಪರೀಕ್ಷೆ ತಯಾರಿಯನ್ನು ಮಾಡಿಕೊಂಡರು. ಮೊದಲ ಯತ್ನದಲ್ಲಿ Preliems ಸಹ ಪಾಸ್ ಆಗಲಿಲ್ಲ , ಛಲ ಬಿಡದೆ 2ನೇ ಪ್ರಯತ್ನದಲ್ಲಿ ಕೋಚಿಂಗ್ ಇಲ್ಲದೆ, ಸ್ವಂತ ಓದಿನ ಮೂಲಕ ಅತ್ಯುನ್ನತ ನಾಗರಿಕ ಸೇವೆಗೆ ಅಣಿಯಾಗಿರುವುದು ವಿಶೇಷ. 

UPSC AIR 101ನೇ Rank ಪಡೆಯುವುದರ ಮೂಲಕ ನಮ್ಮ ರಾಜ್ಯಕ್ಕೆ ಜಿಲ್ಲೆಗೆ ಹೆಸರು ತರುವಂತಹ ಕೆಲಸವನ್ನು ಮಾಡಿದ್ದಾರೆ.

ಸೌಭಾಗ್ಯ ಅವರ ಮಾತಿನಲ್ಲಿ ಹೇಳುವುದಾದರೆ

ಕೋಚಿಂಗ್ ಅನ್ನೋದು ಬೇಕು ಅಂತ ಏನಿಲ್ಲ, ಸೂಕ್ತ ಮಾರ್ಗದರ್ಶನ ಮತ್ತು ವಿಷಯ ಜ್ಞಾನದ ತಯಾರಿ ಅಗತ್ಯವಾದದ್ದು. ಸ್ವಯಂ ಅಧ್ಯಯನ ಬಹಳ ಮುಖ್ಯ. ಕೋಚಿಂಗ್ ತೆಗೆದುಕೊಂಡರೆ IAS ಆಗುವುದು ಎನ್ನುವ ಮೈಂಡ್ ಸೆಟ್ ಇದ್ದರೆ ಅದನ್ನು ತೆಗೆದುಹಾಕಿರಿ. ಎಲ್ಲೇ ಇದ್ದರೂ ಏನನ್ನಾದರೂ ಸಾಧಿಸಬಹುದು ಅಂತ ಇಚ್ಛೆ ಮತ್ತು ಛಲ ಇದ್ರೆ ಏನನ್ನಾದರೂ ಸಾಧಿಸಬಹುದು. ಇದು ಆನ್ಲೈನ್ ಯುಗ ನಮಗೆ ಎಲ್ಲಾ ವಿಷಯದ ಸಂಪನ್ಮೂಲಗಳು ಮೊಬೈಲ್ನಲ್ಲಿ ದೊರೆಯುತ್ತವೆ. ನಾವು ಮೊಬೈಲನ್ನು ವಿಷಯದ ಸಂಪನ್ಮೂಲಗಳಿಗಾಗಿ ಬಳಸಬೇಕು. ಎಂಬುದು ಅವರ ಮಾತಾಗಿತ್ತು.. ಸೌಭಾಗ್ಯ ಅವರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯ ಸೇವೆ ಮಾಡಲಿ ಎಂದು ಶುಭ ಹಾರೈಸೋಣ.. 

ನಾವು ಸಾಕಷ್ಟು ಕನಸುಗಳನ್ನು ಹಾಕಿಕೊಳ್ಳುತ್ತೇವೆ, ಆ ಕನಸುಗಳು ಈಡೇರದೆ ಹೋಗಲು ಅನೇಕ ಕಾರಣಗಳಿರುತ್ತವೆ. ಆ ಕಾರಣಗಳನ್ನು ಕಂಡುಕೊಂಡು ಪರಿಹರಿಸಿಕೊಂಡರೆ ನಮ್ಮ ಕನಸುಗಳು ಈಡೇರುತ್ತವೆ..

ಪ್ರಯತ್ನವಾದಿಗಳನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ..

ಕೊನೆಯ ಮಾತು ಕನಸು ಕಂಡು ಏಕೆ ಎಂದು ಮಲಗಬಾರದು, ಕನಸು ಕಂಡು ಯಾಕಾಗಬಾರದೆಂದು ಏಳಬೇಕು, ಕನಸು ನಮ್ಮದೇ ಒಳ್ಳೆಯ ತೀರ್ಮಾನ ನಮ್ಮದೇ, ಒಳ್ಳೆಯ ಪ್ರಯತ್ನ ನಮ್ಮದೇ ಆದಾಗ ಹಸನಾಗದೇ ಬದುಕು..

 ಕಲಾಮ್ ಅವರು ಹೇಳುವಂತೆ ನಿದ್ರೆಯಲ್ಲಿ ಕಾಣುವುದು ಕನಸಲ್ಲ, ಯಾವುದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಅದೇ ನಿಜವಾದ ಕನಸು..

ಕನಸು ನಮ್ಮದೇ ತೀರ್ಮಾನ ನಮ್ಮದೇ👍💐💐

By:Shankargouda Basapur

GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು