Thursday, April 18, 2024

 *ಕಥೆ-369*

ಸಮಾಜಮುಖಿ - ಜೀವನ

ಒಂದು ಹಳ್ಳಿಯಲ್ಲಿ ಒಬ್ಬ ಪ್ರಗತಿಪರ ರೈತನಿದ್ದ. ಆತ ವ್ಯವಸಾಯದ ಯಾವುದೇ ಕೆಲಸ ಮಾಡಿದರೂ ತುಂಬಾ ಆಲೋಚನೆ ಮಾಡಿ, ಹತ್ತಾರು ಜನರ ಅಭಿಪ್ರಾಯವನ್ನು ಪಡೆದು ಮಾಡುತ್ತಿದ್ದ. ಅವನ ಬೆಳೆ ಯಾವಾಗಲೂ ಉತ್ತಮ ಮಟ್ಟದ್ದಾಗಿರುತ್ತಿತ್ತು. ಪ್ರತಿ ವರ್ಷವೂ ಅವನ ಬೆಳೆಗೆ ವಾರ್ಷಿಕ ಪ್ರಶಸ್ತಿ ಬರುತ್ತಿತ್ತು. ಆತ ಬೀಜಗಳನ್ನು ಎಲ್ಲಿಂದ ತರುತ್ತಾನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಉಳಿದ ರೈತರು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಅದರ ಸುಳಿವು ಸಿಗುತ್ತಿರಲಿಲ್ಲ. 

    ‌‌ ಒಂದು ಸಲ ಅವನ ಉತ್ತಮ ಬೆಳೆಯ ಪರಿಶ್ರಮಕ್ಕಾಗಿ ಅವನಿಗೆ ರಾಷ್ಟ್ರೀಯ ಪ್ರಶಸ್ತಿಯೂ ಸಿಕ್ಕಿತು. ಪ್ರಶಸ್ತಿ ಸಿಕ್ಕ ಮೇಲೆ, ಕೆಲವು ಪತ್ರಿಕಾ ವರದಿಗಾರರು ಅವನ ಸಂದರ್ಶನಕ್ಕಾಗಿ ಬಂದರು. 

  ‌‌ ಒಬ್ಬ ಪತ್ರಕರ್ತ್ರೆ ಈ ರೈತನನ್ನು ಸಂದರ್ಶಿಸುತ್ತಾ, ಕೇಳಿದರು, "ಪ್ರತಿ ವರ್ಷವೂ ನಿಮಗೆ ವಿಶೇಷವಾದ ಪ್ರಶಸ್ತಿ ಸಿಗುವುದಲ್ಲ ಇದರ ಗುಟ್ಟೇನು "ಎಂದು .

ಆಗ ರೈತ, ಮುಗುಳ್ನಗುತ್ತಾ, ಕೃಷಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಬೇಕೆಂದರೆ ಒಂದೇ ಕಾರಣ, ಅದು ಸತತ ಪರಿಶ್ರಮ. ಅದರಲ್ಲಿ ನನಗೆ ಯಾವಾಗಲೂ ನಂಬಿಕೆ ಇದೆ. ಆ ನಂಬಿಕೆಯೇ ನನ್ನನ್ನು ರಕ್ಷಿಸುತ್ತದೆ. ಎಂದು ಹೇಳಿದ.

   ಆ ಪತ್ರ ಕರ್ತೆ ಮತ್ತೆ ಕೇಳಿದಳು," ಪರಿಶ್ರಮವನ್ನು ಎಲ್ಲಾ ರೈತರೂ ಕೂಡ ಮಾಡೇ ಮಾಡುತ್ತಾರೆ, ಆದರೆ ಎಲ್ಲರಿಗೂ ತಕ್ಕ ಪ್ರತಿಫಲ ದೊರಕುವುದಿಲ್ಲ, ನೀವು ಬೀಜಗಳನ್ನು ವಿಶೇಷವಾಗಿ ಎಲ್ಲಿಂದಲೋ ತರಿಸುತ್ತೀರಂತೆ. ಹೌದೇ ಎಂದಳು.

    ಆಗ ಆ ರೈತ, ಹೌದು, ನಾನು ನಾಲ್ಕಾರು ಕಡೆಗಳಲ್ಲಿ‌ ವಿಚಾರಿಸಿ, ನಮ್ಮ ತರಹದೇ ಭೂಮಿಯಲ್ಲಿ ಅತ್ಯಂತ ಹೆಚ್ಚು ಬೆಳೆಯನ್ನು ಬೆಳೆದವರ ಬಳಿಗೆ ಹೋಗಿ ಮಾತನಾಡಿ ಬೀಜ ತರುತ್ತೇನೆ, ಅಲ್ಲದೆ ನನ್ನ ಹೊಲದ ಸುತ್ತಮುತ್ತ ಇರುವ ಎಲ್ಲಾ ಹೊಲಗಳ ರೈತರಿಗೂ ಕೂಡಾ ಇದೇ ಬೀಜಗಳನ್ನು ಕೊಡುತ್ತೇನೆ" ಎಂದ .


   ಪತ್ರಕರ್ತೆಗೆ, ಆಗ ಬಹಳ ಆಶ್ಚರ್ಯವಾಯಿತು, ಅದೇಕೆ ಹೀಗೆ? ನೀವು ಕಷ್ಟಪಟ್ಟು ಮುತುವರ್ಜಿ ವಹಿಸಿ ತಂದ ಬೀಜಗಳನ್ನು ಬೇರೆಯವರಿಗೆ ಯಾಕೆ ಹಂಚುತ್ತೀರಿ? ನಿಮ್ಮ ಬೆಳೆ ಮಾತ್ರ ಚೆನ್ನಾಗಿದ್ದರೆ, ಅದಕ್ಕೆ ಹೆಚ್ಚಿನ ಬೆಲೆ ಸಿಕ್ಕು ಲಾಭ ಬರುವುದಲ್ಲವೇ? ಬೇರೆ ರೈತರು, ಅವರಾಗೇ ಕೇಳಿದೇ ಇದ್ದರೂ ನೀವು ಅವರಿಗೆ ಯಾಕೆ ಕೊಡುತ್ತೀರಿ, ಎಂದು ಕೇಳಿದಳು.

ಆಗ ಈತ, ನೋಡಿ, ಎರಡು ಕಾರಣಕ್ಕಾಗಿ ನಾನು ಬೀಜವನ್ನು ಹಂಚುತ್ತೇನೆ, ಮೊದಲನೆಯದಾಗಿ, ನನ್ನ ಬೆಳೆ ಮಾತ್ರ ಚೆನ್ನಾಗಿದ್ದು ಅವರ ಬೆಳೆ ಚೆನ್ನಾಗಿಲ್ಲದೆ ಹೋದರೆ, ಅವರಿಗೆ ನನ್ನ ಬಗ್ಗೆ ಅಸೂಯೆಯಾಗುವುದಿಲ್ಲವೇ,? ಅಸೂಯೆಯಿಂದ, ಅವರು ನನ್ನ ಹೊಲದಲ್ಲಿ ದನ ಕರುಗಳನ್ನು ನುಗ್ಗಿಸಬಹುದು, ಬೆಂಕಿ ಹಾಕಿಸಿ ಬೆಳೆ‌ ಹಾಳುಮಾಡಬಹುದು, 

   ಎರಡನೆಯ ಕಾರಣ ಬಹಳ ಮುಖ್ಯವಾದದ್ದು, ನನ್ನ ಹೊಲದ ಬೆಳೆ ಎತ್ತರಕ್ಕೆ ಬೆಳೆದು ಹೂ ಬಿಟ್ಟು ನಿಂತಾಗ, ಗಾಳಿಯಿಂದ ಅವು ಪಕ್ಕದ ಬೆಳೆಯ ಹೂಗಳ ಮೇಲೆ ಬೀಳುತ್ತವೆ. ಹಾಗೆಯೇ, ಪಕ್ಕದ ಹೊಲದ ಹೂಗಳ ಪರಾಗ ಕಣಗಳು ನನ್ನ ಹೊಲದ ಹೂಗಳ ಪರಾಗಕಣಗಳ ಮೇಲೆ ಬೀಳುತ್ತವೆ. ಪಕ್ಕದ ಹೊಲದ ಬೆಳೆ ಚೆನ್ನಾಗಿಲ್ಲದಿದ್ದರೆ, ಅವುಗಳ ಹೂಗಳ ಪರಾಗಸ್ಪರ್ಶದಿಂದ ನನ್ನ ಬೆಳೆಯೂ ಕೆಡುವುದಲ್ಲವೇ, ಆದ್ದರಿಂದಲೇ ನಾನು ಅಕ್ಕಪಕ್ಕದ ಹೊಲದವರಿಗೆಲ್ಲಾ ಒಳ್ಳೆಯ ಬೀಜಗಳನ್ನು ತಂದು ಕೊಡುತ್ತೇನೆ. ಇದರಿಂದ ಪಕ್ಕದ ಹೊಲದ ಹೂಗಳ ಪರಾಗಸ್ಪರ್ಶವಾದರೂ ನನ್ನ ಬೆಳೆಯೂ ಕೆಡುವುದಿಲ್ಲ, ನಾನು ಹೊಲದಲ್ಲಿ ಒಳ್ಳೆಯ ಬೆಳೆಯನ್ನು ತೆಗೆಯಬೇಕಾದರೆ, ನನ್ನ ಸುತ್ತಮುತ್ತಲಿನ ಹೊಲದವರೂ ಕೂಡ ಒಳ್ಳೆಯ ಬೆಳೆ ತೆಗೆಯುವುದು ಅನಿವಾರ್ಯ, ಇದರಿಂದ ನನಗೂ ಲಾಭ, ಅವರಿಗೂ ಲಾಭ,‌ಎಂದು ಹೇಳಿದ.

  ಇದನ್ನು ಕೇಳಿದ, ಪತ್ರಕರ್ತೆ, ಬಹಳ ಸಂತೋಷದಿಂದ, ಅವನ ಬುದ್ಧಿವಂತಿಕೆಗೆ, ಒಳ್ಳೆಯತನಕ್ಕೆ, ಚಪ್ಪಾಳೆ ತಟ್ಟಿ, ನಿಜಕ್ಕೂ ನೀವು ಒಬ್ಬ ಮಾದರಿ ರೈತರು ಎಂದು ಅವನನ್ನು ಪ್ರಶಂಶಿಸಿದಳು.

    ಇದೇ ವಿಚಾರವನ್ನು ನಾವು ನಮ್ಮ ಜೀವನದಲ್ಲೂ, ಅಳವಡಿಸಿಕೊಳ್ಳಬೇಕು. ನಾವು ಶಾಂತಿಯಿಂದ ಇರಬೇಕಾದರೆ, ನಮ್ಮ ಸುತ್ತಮುತ್ತಲೂ ಶಾಂತಿಯ ವಾತಾವರಣ ಇರಬೇಕು. ನಾವು ಸಂತೋಷವಾಗಿರಬೇಕಾದರೆ, ನಮ್ಮ ಅಕ್ಕ ಪಕ್ಕದ ಜನರೂ ಸಂತೋಷವಾಗಿರಬೇಕು. ಹಾಗಿರುವಂತೆ ನೋಡಿಕೊಳ್ಳುವುದು, ನಮ್ಮೆಲ್ಲರ ಪ್ರಯತ್ನವಾಗಬೇಕು. " "ಸರ್ವೇ ಜನಾ ಸುಖಿನೋ ಭವಂತು." ಎಂಬಂತೆ.

  ಇದೇ ಸಮಾಜ ಜೀವನದ ಬಹು ಮುಖ್ಯ ಪಾಠ.

ಕೃಪೆ :ಸುವರ್ಣಾ ಮೂರ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು