Tuesday, April 9, 2024

 ಕಥೆ-361

*ಸಹವಾಸದ ಫಲ*

 ‌ ‌ ಒಂದು ದಿನ ಮಧ್ಯರಾತ್ರಿಯ ಸಮಯ. ಮಹಾರಾಣಿ ಮತ್ತು ಚಕ್ರವರ್ತಿ ಇಬ್ಬರೂ ಅಂತ:ಪುರದಲ್ಲಿ ಮಲಗಿಕೊಂಡೇ ರಾಜಕುಮಾರಿಯ ವಿವಾಹದ ಬಗ್ಗೆ ಮಾತಾಡುತ್ತಿದ್ದರು.

ಅದೇ ಸಮಯದಲ್ಲಿ ಒಬ್ಬ ಕಳ್ಳನು ಕಳ್ಳತನ ಮಾಡಲು ಅರಮನೆಯನ್ನು ಪ್ರವೇಶಿಸಿದನು.

ಮಹಾರಾಣಿ – 'ಮಹಾರಾಜ!! ನಮ್ಮ ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆಂಬುದು ನಿಮಗೆ ಮರೆತು ಹೋಗಿದೆಯೇ' ?

ರಾಜ – 'ಪ್ರಿಯೆ! ನೆನಪಿದೆ. ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ. ಈಗೇಕೆ ಆ ಯೋಚನೆ ?'

ಮಹಾರಾಣಿ – 'ಎಲ್ಲವೂ ಕಾಲ ಕೂಡಿ ಬಂದಾಗ ಆಗುತ್ತದೆ ಎಂದು ಸುಮ್ಮನಿರಲಾದೀತೇ ? ಬೇಗನೇ ಯೋಗ್ಯ ವರನನ್ನು ಹುಡುಕಬೇಕಲ್ಲವೇ ?'

ರಾಜ – 'ನಮ್ಮ ಮಗಳು ಸುಂದರವಾಗಿದ್ದಾಳೆ. ಅವಳಿಗೆ ವರನನ್ನು ಹುಡುಕುವುದು ಕಷ್ಟವೇನಲ್ಲ!!'

ರಾಣಿ – 'ಏನು,ಅಷ್ಟೊಂದು ಸುಲಭವೇ ? ಅವಳಿಗೆ ಯೋಗ್ಯನಾದ ವರನನ್ನು ಎಲ್ಲಿ ಹುಡುಕುವಿರಿ ?'

ರಾಜ- 'ಪಟ್ಟಣದ ಹತ್ತಿರ ಒಂದು ಆಶ್ರಮವಿದೆಯಲ್ಲವೇ ? ಅಲ್ಲಿ ಅನೇಕ ಋಷಿಕುಮಾರರು ಅಧ್ಯಯನ ಮಾಡುತ್ತಿದ್ದಾರೆ. ಅವರೆಲ್ಲರೂ ವಿದ್ಯಾವಂತರೂ, ಬುದ್ಧಿವಂತರೂ, ಸಭ್ಯರೂ ಮತ್ತು ವೀರರೂ ಆಗಿದ್ದಾರೆ. ಅವರಲ್ಲೇ ಒಬ್ಬನನ್ನು ಆರಿಸಿ ಮಗಳಿಗೆ ವಿವಾಹ ಮಾಡೋಣ.'

ರಾಣಿ – 'ಅಷ್ಟೊಂದು ಉತ್ತಮ ವರರಿದ್ದರೆ, ನಾನೂ ಸಹ ಅವರನ್ನು ನೋಡಬೇಕು. ಯಾವಾಗ ಹೋಗೋಣ ?'

ರಾಜ – 'ಈಗ ಸದ್ಯ ನನಗೆ ಬಹು ಮುಖ್ಯವಾದ ರಾಜಕಾರ್ಯಗಳಿವೆ. ಸ್ವಲ್ಪ ತಿಂಗಳ ನಂತರ ಹೋಗೋಣ.

ಅರಮನೆಗೆ ಕದಿಯಲು ಬಂದ ಕಳ್ಳನು ಈ ಎಲ್ಲಾ ಸಂಭಾಷಣೆಯನ್ನು ಕೇಳಿಸಿಕೊಂಡನು. ಅವನು ಹೀಗೆ ಯೋಚಿಸಿದನು – ನಾನು ಈಗ ಕಳ್ಳತನ ಮಾಡಿದರೆ ಸ್ವಲ್ಪ ಮಾತ್ರ ಲಾಭ ಸಿಗುವುದು! ಋಷಿಯ ಆಶ್ರಮಕ್ಕೆ ಸೇರಿಕೊಂಡು ಋಷಿಕುಮಾರನಂತೆ ನಡೆದುಕೊಂಡರೆ, ರಾಜನು ನನ್ನನ್ನು ನೋಡಿ ತನ್ನ ಮಗಳಿಗೆ ಇವನೇ ವರನಾಗಲಿ ಎಂದು ಒಪ್ಪಿಕೊಳ್ಳುವನು!! ಆಗ ನನಗೆ ಈ ರಾಜ್ಯವೇ ಸಿಗುವುದು!!!:

ಹೀಗೆ ಯೋಚಿಸಿದ ಆ ಕಳ್ಳನು ಮರುದಿನವೇ ಆಶ್ರಮಕ್ಕೆ ಸೇರಿಕೊಂಡು ಋುಷಿಕುಮಾರರ ಜೊತೆ ಕೂಡಿಕೊಂಡನು. ಅವರಂತೆಯೇ ವೇಷಧರಿಸಿ, ಆಶ್ರಮದ ಆಚಾರ-ವಿಚಾರಗಳೆಲ್ಲವನ್ನೂ ಕಲಿತುಕೊಂಡನು.

ಪ್ರತಿದಿನ ಆಶ್ರಮದ ಪಾಠ-ಪ್ರವಚನಗಳಲ್ಲಿ ಉತ್ಸಾಹ, ಪ್ರೀತಿ, ಶ್ರದ್ಧೆಯಿಂದ ಭಾಗವಹಿಸುತ್ತಿದ್ದನು.

ಎಲ್ಲಾ ಋಷಿಕುಮಾರರಂತೆ ಪ್ರಾತ:ಕಾಲದಲ್ಲಿಯೇ ಎದ್ದು, ನದಿಯಲ್ಲಿ ಸ್ನಾನಮಾಡಿ ಪೂಜೆ, ವೇದಾಧ್ಯಯನಗಳಲ್ಲಿ ನಿರತನಾದನು.

ಹೀಗೆ ಕೆಲವು ದಿನಗಳು ಕಳೆಯುತ್ತಿರಲು, ಆ ಕಳ್ಳನ ಮನಸ್ಸಿಗೆ ಆಶ್ರಮದ ಜೀವನವೇ ಹಿತವೆನಿಸತೊಡಗಿತು.

ಒಂದು ದಿನ ಮಹಾರಾಜನು ತನ್ನ ಪತ್ನಿಯೊಡನೆ ಆಶ್ರಮಕ್ಕೆ ಬಂದನು. ಅಲ್ಲಿರುವ ಋಷಿಕುಮಾರರನ್ನೆಲ್ಲಾ ನೋಡಿದನು. ಈ ಕಳ್ಳನನ್ನೇ ತನ್ನ ಮಗಳಿಗೆ ಯೋಗ್ಯ ವರನೆಂದು ನಿಶ್ಚಯಿಸಿ, ಕಳ್ಳನ ಹತ್ತಿರ ಬಂದು ಪ್ರಾರ್ಥಿಸಿದನು.

ಪೂಜ್ಯರೇ!! ನನ್ನ ಮಗಳ ಕೈ ಹಿಡಿದು ತಮ್ಮ ಪತ್ನಿಯಾಗಿ ಸ್ವೀಕರಿಸಿ!! ಎಂದು.

ಆಗ ಕಳ್ಳನು – “ರಾಜಕುಮಾರಿಯನ್ನು ಮದುವೆಯಾಗಲೆಂದೇ ನಾನು ಇಷ್ಟೆಲ್ಲಾ ಪ್ರಯತ್ನವನ್ನು ಮಾಡಿದೆ. ಇಷ್ಟು ದಿನ ಈ ಆಶ್ರಮದಲ್ಲಿದ್ದುಕೊಂಡು ಋಷಿಗಳಂತೆ ಸಾತ್ವಿಕ ಜೀವನ ಮಾಡಿದೆ. ಋಷಿಕುಮಾರರ ಸಹವಾಸದಿಂದ ನಾನು ವಿವೇಕವನ್ನು ಪಡೆದುಕೊಂಡೆ. ನನಗೆ ಈಗ ಈ ಜೀವನವೇ ಇಷ್ಟವಾಗಿದೆ. ಅರಮನೆಯ ಭೋಗ ಜೀವನದಲ್ಲಿ, ಸುಖ-ಸಂಪತ್ತಿನಲ್ಲಿ ನನಗೆ ಯಾವುದೇ ಆಸೆ-ಅಪೇಕ್ಷೆಗಳಿಲ್ಲ” ಎಂದು ಹೇಳಿದನು.

ಹೀಗೆ ಋಷಿಕುಮಾರರ ಸಹವಾಸದಿಂದ ಕಳ್ಳನೂ ಸಹ ವಿವೇಕಿಯೂ, ಜ್ಞಾನಿಯೂ ಆದನು.

*ಸಹವಾಸದಿಂದಲೇ ಮನುಷ್ಯನಿಗೆ ಅಧಮ, ಮಧ್ಯಮ ಮತ್ತು ಉತ್ತಮ ಗುಣಗಳು ಪ್ರಾಪ್ತವಾಗುತ್ತವೆ.*

💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು