Monday, May 6, 2024

ಕಥೆ-388

ನನ್ನ ಮತ ನನ್ನ ಹಕ್ಕು.

ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ. ಅದನ್ನು ಮಾರಿಕೊಂಡರೆ ನಮ್ಮನ್ನು ನಾವು ಮಾರಿಕೊಂಡಂತೆ..

If wealth is lost 

nothing is lost,

If health is lost 

something is lost,

If character is lost

everything is lost

ಅನ್ನುವಂತೆ ನಮ್ಮನ್ನು ನಾವು ಮಾರಿಕೊಂಡರೆ, ಎಲ್ಲವನ್ನು ಕಳೆದುಕೊಂಡಂತೆ. ಪವಿತ್ರವಾದ ಮತವನ್ನು ಮಾರಿಕೊಂಡು ಅಪವಿತ್ರ ಮಾಡಬೇಡಿ. 

ನಾವು ಕೊಡುವ ಒಂದು ಮತ ಸ್ವಸ್ಥ ಸಮಾಜಕ್ಕೆ ನಮ್ಮ ಅಮೂಲ್ಯ ಕೊಡುಗೆ. ಸೂಕ್ತ ವ್ಯಕ್ತಿಯನ್ನು ಆರಿಸುವುದೂ ಅಷ್ಟೇ ಮುಖ್ಯ.

 ಈ ಜವಾಬ್ದಾರಿಯನ್ನೂ ನಾವು ನಿಷ್ಠೆಯಿಂದ ನಿಭಾಯಿಸಬೇಕಿದೆ.

ಮತದಾನದ ಹಕ್ಕನ್ನು ಚಲಾಯಿಸಿ ಜವಾಬ್ದಾರಿಯುತ ನಾಗರಿಕರಾಗಬೇಕು.

ಅಬ್ರಹಾಂ ಲಿಂಕನ್ ಹೇಳುವಂತೆ ಬುಲೆಟ್‌ಗಿಂತ ಬ್ಯಾಲೆಟ್ (ಮತಪತ್ರ) ಬಲಿಷ್ಠವಾಗಿದೆ.   

ನಮ್ಮ ಮತದಾನ ಎಷ್ಟೋ ಜನರ ಹೋರಾಟದ ಫಲವಾಗಿದೆ. ಅದನ್ನು ಉಪಯೋಗಿಸೋಣ. ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ, ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ, ಧರ್ಮ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡೋಣ

 ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಮತವು ನಮ್ಮಲ್ಲಿರುವ ಅತ್ಯಂತ ಶಕ್ತಿಶಾಲಿ ಅಹಿಂಸಾತ್ಮಕ ಸಾಧನವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನು ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ಸಿದ್ಧಾಂತವನ್ನು ಸಾರಿ ಹೇಳಬಹುದು. ಹೇಗೆಂದರೆ

ನಮಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಬೇಡ ಎಂದಾದರೆ ಕೊನೆಯಲ್ಲಿರುವ NOTA (None Of The Above) Button ಕ್ಕೆ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ. ಈ ಮತ ಸ್ಪರ್ಧಾಳಗಳನ್ನು ತಿರಸ್ಕರಿಸಿದಂತೆ.

ಚುನಾವಣೆಯಲ್ಲಿ NOTA (ನೋಟಾ) ಗರಿಷ್ಠ ಮತಗಳನ್ನು ಪಡೆದರೆ, ಮರು-ಚುನಾವಣೆಗಳನ್ನು ನಡೆಸಲಾಗುವುದು. ಮರುಚುನಾವಣೆಯಲ್ಲಿಯೂ ನೋಟಾ ಅತ್ಯಧಿಕ ಮತಗಳನ್ನು ಪಡೆದರೆ, ನೋಟಾ ಹೊರತುಪಡಿಸಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಮತದಾನಕ್ಕೆ ಸಂಬಂಧಿಸಿದಂತೆ ಮತದಾನ ಕೇಂದ್ರದಲ್ಲಿ Helpline Centre ಸ್ಥಾಪಿಸಲಾಗಿದೆ. BLO ಅವರು ಸಹಾಯ ಮಾಡುತ್ತಾರೆ. ಅಥವಾ

Help line No:1950 ಕರೆ ಮಾಡಿ ಸಹಾಯ ಪಡೆಯಬಹುದು.

ನಿಮ್ಮ ಬೂತ್ ಭಾಗ ಸಂಖ್ಯೆ, ಮತ್ತು ಕ್ರಮ ಸಂಖ್ಯೆ ತಿಳಿಯಲು ಈ ಲಿಂಕ್ ಬಳಸಬಹುದು👇

https://electoralsearch.eci.gov.in/

ಮತದಾನಕ್ಕಿಂತ ಬೇರೊಂದಿಲ್ಲ, ನಾನು ಪವಿತ್ರವಾದ ಮತದಾನ ಮಾಡುತ್ತೇನೆ.. ಪವಿತ್ರ ಮತದಾನ ಮಾಡಿದವರಿಗೆ ನನ್ನದೊಂದು Big Salute..🫡 

(ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ) 

ದಿ: 07/05/2024 ರಂದು ತಪ್ಪದೇ Vote ಮಾಡಿ. 👍👍

💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು