Saturday, May 4, 2024

 ಕಥೆ-385 

*☀☀ನಮ್ಮ ಅಳಿವಿನ ಮುನ್ನುಡಿ ಈ ತಾಪದ ಕನ್ನಡಿ☀☀*

"ರವಿರಾಯ ನಿನ್ನ ಮನೆ ಕಾಯ ಬಿಡುವೆಂದು ನಿನಗೆ ಮಹಾರಾಯ ಧಗ ಧಗ ಉರಿಯುವೆ" ಎಂದು ಎಲ್ಲರೂ ಹಾಡುವಂತಾಗಿದೆ.. ನಮ್ಮ ತಪ್ಪನ್ನು ಸೂರ್ಯನ ಮೇಲೆ ಹಾಕುತ್ತಿದ್ದೇವೆ.

ಭಾರತದ ಕೆಲವು ನಗರಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ: ಲಕ್ನೋ 47 ಡಿಗ್ರಿ 

ದೆಹಲಿ 47 ಡಿಗ್ರಿ 

ಆಗ್ರಾ 45 ಡಿಗ್ರಿ 

ನಾಗ್ಪುರ 49 ಡಿಗ್ರಿ 

ಕೋಟಾ 48 ಡಿಗ್ರಿ 

ಹೈದರಾಬಾದ್ 45 ಡಿಗ್ರಿ 

ಪುಣೆ 42 ಡಿಗ್ರಿ 

ಅಹಮದಾಬಾದ್ 46 ಡಿಗ್ರಿ  

ಮುಂಬೈ 42 ಡಿಗ್ರಿ 

ನಾಸಿಕ್ 40 ಡಿಗ್ರಿ 

ಬೆಂಗಳೂರು 40 ಡಿಗ್ರಿ 

ಚೆನ್ನೈ 45 ಡಿಗ್ರಿ 

ರಾಜ್ಕೋಟ್ 45 ಡಿಗ್ರಿ 

ಮುಂದಿನ ವರ್ಷಗಳಲ್ಲಿ ಈ ನಗರಗಳು 50 ಡಿಗ್ರಿ ದಾಟಲಿವೆ.


ನಮ್ಮ ಕೊಪ್ಪಳದ ಉಷ್ಣತೆ 42 ಡಿಗ್ರಿ

ಮುಧೋಳ ಹಿರೇಮ್ಯಾಗೇರಿಯ 40 ಡಿಗ್ರಿ ದಾಟಿದೆ..

ಇದು ಹೆಚ್ಚಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.ಮಾನವರು 56/57 ° C ನಲ್ಲಿ ಬದುಕುವುದಿಲ್ಲ,

ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳೋಣ ಮತ್ತು ಈಗಿನಿಂದ ಸಸ್ಯಗಳನ್ನು ನೆಡಲು ಪ್ರಾರಂಭಿಸೋಣ. 

ಏಕೆಂದರೆ ಸಸ್ಯವು ಮರವಾಗಲು ಸುಮಾರು 6 ವರ್ಷಗಳು ಬೇಕಾಗುತ್ತದೆ.

56/57°C ನಲ್ಲಿ ಬೇಸಿಗೆಯಲ್ಲಿ ಎಸಿ ಅಥವಾ ಫ್ಯಾನ್ ಕೂಡ ನಮ್ಮನ್ನು ಉಳಿಸುವುದಿಲ್ಲ. 

ಯಾಕೆ ಇಷ್ಟು ಬಿಸಿಯಾಗಿದೆ ?

ವಾತಾವರಣದಲ್ಲಿ ಡೀಸೆಲ್ ಪೆಟ್ರೋಲ್ ಕಲ್ಲಿದ್ದಲು ಸುಡುವುದರಿಂದ ಇಂಗಾಲದ ಡೈಯಾಕ್ಸೈಡ್ (CO2) ಪ್ರಮಾಣ ಹೆಚ್ಚಾಗಿದೆ.. ಇದು ಹೆಚ್ಚಾದಂತೆ ಸೂರ್ಯನಿಂದ ಬರುವ ಕಿರಣಗಳ ಶಾಖವನ್ನು ಹಿಡಿದಿಟ್ಟುಕೊಂಡು ವಾತಾವರಣ ಬಿಸಿಯಾಗುವಂತೆ ಮಾಡುತ್ತದೆ.. ಇದೇ ಜಾಗತಿಕ ತಾಪಮಾನ ಏರಿಕೆ. ಗಿಡಮರಗಳು ಮಾತ್ರ CO2 ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.

 ಕಳೆದ 10 ವರ್ಷಗಳಲ್ಲಿ ರಸ್ತೆ ಮತ್ತು ಹೆದ್ದಾರಿ ಅಗಲೀಕರಣಕ್ಕಾಗಿ 10 ಕೋಟಿ ಮರಗಳನ್ನು ಕಡಿಯಲಾಗಿದೆ. ಪ್ರತಿ ವರ್ಷ ಹೊಸದಾಗಿ ಒಂದು ಕೋಟಿಗೂ ಅಧಿಕ ವಾಹನಗಳು ರೋಡಿಗೆ ಇಳಿಯುತ್ತಿವೆ. ಹೆಚ್ಚುತ್ತಿರುವ ಭಾರತದ ಜನಸಂಖ್ಯೆ, ಅದಕ್ಕೆ ತಕ್ಕಂತೆ ಕೈಗಾರಿಕೆಗಳು ಇವೆಲ್ಲ ಅಂಶಗಳು ಜಾಗತಿಕ ತಾಪಮಾನದ ಏರಿಕಗೆ ಕಾರಣವಾಗುತ್ತಿದೆ. ಭಾರತವನ್ನು ತಂಪಾಗಿಸುವುದು ಹೇಗೆ ?

ರಸ್ತೆ ಅಗಲೀಕರಣ ಮಾಡುವಾಗ ಒಂದು ಬದಿಯಲ್ಲಿ ಮಾಡಿದಾಗ ಇನ್ನೊಂದು ಬದಿಯಲ್ಲಿ ಗಿಡಗಳು ಹಾಗೆ ಉಳಿಯುತ್ತವೆ. ಒಂದು ಬದಿಯಲ್ಲಿನ ಅಗಲೀಕರಣ ಸಂದರ್ಭದಲ್ಲಿ ಬರುವಂತಹ ಮರಗಳನ್ನು ಕಡಿಯದೆ ಬೇರು ಸಹಿತ ಕಿತ್ತು ಮತ್ತೊಂದು ಸ್ಥಳದಲ್ಲಿ ಹಚ್ಚುವಂತಾಗಬೇಕು, ಜನಸಂಖ್ಯೆ ನಿಯಂತ್ರಣವಾಗಬೇಕು.

 ದಯವಿಟ್ಟು ಯಾರೋ ಗಿಡ ನೆಡುವವರೆಗೆ ಕಾಯಬಾರದು. 

ಗಿಡ ನೆಡುವುದು ಅಂದರೆ ಜೂನ್ 5ರಂದು ಕೇವಲ ವಿಶ್ವ ಪರಿಸರ ದಿನಾಚರಣೆಯಂದು ಎನ್ನುವ ಮನಸ್ಥಿತಿ ನಮ್ಮದಾಗಿದೆ. ಅಲ್ಲದೆ ಅದು ಕೇವಲ ಫೋಟೋಗಾಗಿ ಗಿಡಗಳನ್ನು ನೆಡುವುದು. ನಂತರ ಆ ಗಿಡಗಳು ಏನಾದವು ಎಂದು ಸಹ ನಮಗೆ ಗೊತ್ತಾಗುವುದಿಲ್ಲ..

ಈಗಲೂ ಕಾಲ ಮಿಂಚಿಲ್ಲ ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ..

ಭಾರತದಲ್ಲಿ ಇಂದು ಸುಮಾರು 300 ಕೋಟಿಗೂ ಅಧಿಕ ಮರಗಳ ಅವಶ್ಯಕತೆ ಇದೆ..

ಕೇವಲ ಮರಗಳ ಮಾತ್ರ ಭೂಮಿಯನ್ನು ತಂಪು ಮಾಡುವ ಶಕ್ತಿಯನ್ನು ಹೊಂದಿವೆ.

 ನಮ್ಮ ಭಾರತದ ಜನಸಂಖ್ಯೆ ಅಂದಾಜು 150 ಕೋಟಿ ಪ್ರತಿಯೊಬ್ಬರು ಎರಡೆರಡು ಗಿಡಗಳನ್ನು ಕಡ್ಡಾಯವಾಗಿ ಬೆಳೆಸಲೇಬೇಕಿದೆ.. ( ಇದು ಕೇವಲ ಫೋಟೋಗಾಗಿ ನೆಡುವುದಲ್ಲ ಮಗುವಿನಂತೆ ಜೋಪಾನ ಮಾಡಿ ಬೆಳೆಸಬೇಕಿದೆ.) ಮನೆಯ ಹತ್ತಿರ ಜಾಗವಿಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಸಹ ಗಿಡ ಬೆಳೆಸುವ ಕಾರ್ಯ ನಾವು ಮಾಡಬಹುದು.

ಯಲಬುರ್ಗಾದ ಮುಧೋಳದಲ್ಲಿ ಹಸಿರೇ ಉಸಿರು ತಂಡ ಗಿಡಗಳನ್ನು ಬೆಳೆಸುವಲ್ಲಿ ಒಂದು ಮಾದರಿ ಕಾರ್ಯವನ್ನು ಮಾಡುತ್ತಿದೆ.. ಹಿರೇಮ್ಯಾಗೇರಿಯಲ್ಲಿ ಹಸಿರುಪಡೆ ತಂಡವು ಸಾಕಷ್ಟು ಗಿಡಗಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿದೆ.. ನಮ್ಮ ಬಿಡುವಿನ ಸಮಯದಲ್ಲಿ ಇದಕ್ಕಾಗಿ ಸಮಯವನ್ನು ಒಂದು ಹವ್ಯಾಸದ ರೀತಿಯಲ್ಲಿ ಮೀಸಲಿಟ್ಟರೆ ಒಳ್ಳೆಯದು, ಮಾಡುವವರನ್ನು ಬೆಂಬಲಿಸಿ ಹಸರೀಕರಣಕ್ಕಾಗಿ ಕಡ್ಡಾಯವಾಗಿ ಕೈಜೋಡಿಸಲೇಬೇಕಿದೆ. ಇದು ಪರಿಸರದ ಎಚ್ಚರಿಕೆ ಪಾಠ ನಮಗೆ.


ಭಾರತದಾದ್ಯಂತ 1000 ಕೋಟಿ ಗಿಡಗಳನ್ನು ನೆಡುವ (ಸಾಕೋಗಿ-ಅಭಿಯಾನ ಸಾವಿರ ಕೋಟಿ ಗಿಡ ಅಭಿಯಾನ) ರಾಷ್ಟ್ರೀಯ ಆಂದೋಲನವಾಗಬೇಕು, ಗಿಡ ಮರಗಳನ್ನು ಬೆಳಸದಿದ್ದರೆ ನಮಗೆ ಬದುಕುವ ಹಕ್ಕಿಲ್ಲ ಎಂಬಂತೆ ಜನ ಜಾಗೃತಿ ಆಗಬೇಕು. ನಾವು ತಾಪಮಾನವನ್ನು 50 ಡಿಗ್ರಿ ದಾಟುವುದನ್ನು ನಿಲ್ಲಿಸಬೇಕು. ಜನ್ಮದಿನದಂದು, ಪ್ರತಿ ವರ್ಷ ನಾವು ಗಿಡ ನೆಟ್ಟು ಬೆಳೆಸುವ ಪ್ರಮಾಣ ಮಾಡಬೇಕು.

 1 ವಾಟ್ಸಾಪ್ ವ್ಯಕ್ತಿ - 2 ಗಿಡ, ನಾವು ಸುಲಭವಾಗಿ ಅಂದುಕೊಂಡಷ್ಟು ಗಿಡಗಳನ್ನು ತಲುಪುತ್ತೇವೆ. 🌴🌴ದಯವಿಟ್ಟು ಎಲ್ಲರೂ ಗಿಡಗಳನ್ನು ನೆಡೋಣ ಮತ್ತು ಬೆಳೆಸುವ ಪ್ರಮಾಣ ಮಾಡೋಣ. 

🌴🌴🌴🌴🌴🌴🌴🌴🌴

By:Shankargouda Basapur 

AM GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು