Wednesday, May 8, 2024

 ಕಥೆ-390

SSLC Result isn't Final ( 10ನೇ ತರಗತಿ ಫಲಿತಾಂಶವೇ ಜೀವನದ ಅಂತಿಮವಲ್ಲ)

ಪ್ರೀತಿಯ ಪಾಲಕರೇ/ ವಿದ್ಯಾರ್ಥಿಗಳೇ, 

ನಾಳೆ ಬೆಳಿಗ್ಗೆ 10:30ಕ್ಕೆ ಪ್ರಕಟಗೊಳ್ಳುವ 10ನೇ ತರಗತಿ ಫಲಿತಾಂಶವನ್ನು ನೋಡಿ ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತ ಚಿತ್ತದಿಂದ ಸ್ವೀಕರಿಸಿ. 

10ನೇ ತರಗತಿ ಫಲಿತಾಂಶವನ್ನು ತಿಳಿಯುವ ಕುತೂಹಲ ಪಾಲಕರದ್ದು ವಿದ್ಯಾರ್ಥಿ ಮತ್ತು ಶಿಕ್ಷಕರಿಗಿಂತ ಹೆಚ್ಚಾಗಿರುತ್ತದೆ.. ಅದು ಸಹಜ. ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ಪ್ರತಿ ಪಾಲಕರು ಆಶಿಸುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಫಲಿತಾಂಶ ವ್ಯತ್ಯಾಸವಾದಾಗ ಪಾಲಕರು ಮಕ್ಕಳಿಗೆ ಧೈರ್ಯ ಹೇಳುವಂಥ ಕೆಲಸವಾಗಬೇಕು. SSLC isn't Final. ಬಂದಂತಹ ಫಲಿತಾಂಶವನ್ನು ಸ್ವೀಕರಿಸಿ, ನಿಮ್ಮ ಮಕ್ಕಳು ಏನು ಎಂದು ನಿಮಗೆ ಗೊತ್ತು, ಮಕ್ಕಳ ಸಪೋರ್ಟ್ ಆಗಿ ನೀವು ನಿಲ್ಲಬೇಕು. ಮಕ್ಕಳು ಮುಂದೆ ಏನು ಮಾಡಿದರೆ ಯಶಸ್ವಿಯಾಗುತ್ತಾರೆ ಎಂದು ಅರಿತುಕೊಂಡು ಮುಂದುವರೆಯುವಂತಹ ಮನೋಭಾವನೆಯನ್ನು ಹೊಂದಬೇಕು.

ಆತ್ಮೀಯ ವಿದ್ಯಾರ್ಥಿಗಳೇ ನೀವು ನಿಮ್ಮ ಕೈಲಾದಷ್ಟು ಮಾಡಿದ್ದೀರಿ ಎಂಬುದನ್ನು ನೆನಪಿಡಿ, ಫಲಿತಾಂಶವು ಜೀವನದ Final ಅಲ್ಲ. ಬದಲಾಗಿ, ನೀವು ಮಾಡಿದ ಪ್ರಯತ್ನ.

 ಪರೀಕ್ಷೆಯ ಫಲಿತಾಂಶಗಳ ಹೊರತಾಗಿಯೂ, ನಿಮ್ಮ ಭವಿಷ್ಯಕ್ಕಾಗಿ ಯೋಜಿಸಿ. ಎಷ್ಟೋ ಜನ ಕಡಿಮೆ ಅಂತ ಪಡೆದವರು, ಅನುತ್ತಿರ್ಣರಾದವರು ಸಹ ಸಾಧನೆಗಳನ್ನು ಮಾಡಿದ್ದಾರೆ. 

*"ಕಲಿಕೆಗೆ ಮಾರ್ಕ್ಸ್ ಬರದೇ ಇದ್ದರೂ ಪರವಾಗಿಲ್ಲ ಯಾವುದೇ ರಿಮಾರ್ಕ್ಸ ಇರಬಾರದು"* ಎನ್ನುವ ತತ್ವ ನನ್ನದು. 20 ವರ್ಷಗಳ ಕಾಲ ಶಿಕ್ಷಕ ವೃತ್ತಿಯ ಅನುಭವದ ಪ್ರಕಾರ, 10ನೇ ತರಗತಿ ಫಲಿತಾಂಶ ಜೀವನದ ಭಾಗವಾಗಿರಬಹುದು ಆದರೆ ಅದೇ ಜೀವನವೇ? ಅಲ್ಲ. ಬೋರ್ಡ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದ ಮತ್ತು ಫೇಲಾದ ಸಾಕಷ್ಟು ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಜೀವನದಲ್ಲಿ ಅದ್ಭುತವಾಗಿ ಉತ್ತಮ ಸಾಧನೆ ಮಾಡಿದರು ಇದ್ದಾರೆ. 10ನೇ ತರಗತಿ ಫಲಿತಾಂಶವನ್ನು ಸುಲಭವಾಗಿ ತೆಗೆದುಕೊಳ್ಳಿ. ಯಾವುದೇ ಶೈಕ್ಷಣಿಕ ಪರೀಕ್ಷೆಯು ನಿಮ್ಮ ಅವಕಾಶಗಳನ್ನು ಕೊನೆಗೊಳಿಸುವ ಶಕ್ತಿಯನ್ನು ಹೊಂದಿಲ್ಲ.

ನಿಮ್ಮ ಗುರಿಗಳು ಮತ್ತು ಜೀವನದ ಆಕಾಂಕ್ಷೆಗಳ ಬಗ್ಗೆ ಯೋಚಿಸಿ ಮತ್ತು ಅವುಗಳನ್ನು ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳಿ... Be positive

All the best..💐💐💐

ಫಲಿತಾಂಶ ವೀಕ್ಷಿಸಲು ಕೆಳಗಿನ link ಬಳಸಿರಿ..👇

https://karresults.nic.in

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು