ಕಥೆ-555
ಅವಕಾಶಗಳನ್ನು ಬಳಸಿ ನಾವು ದಡ(ಗುರಿ) ಸೇರಬೇಕು
ಒಂದು ನದಿಯು ಆಳವಾದ ಕೊಳ್ಳದತ್ತ ರಭಸದಿಂದ ಹರಿಯುತ್ತಿತ್ತು. ಒಬ್ಬ ದಾರಿಕಾರನು ಆ ನದಿಯಲ್ಲಿ ಈಸುಬಿದ್ದ, ಹುಮ್ಮಸ್ಸಿನಿಂದಿಂದ ಮುಂದೆ ಮುಂದೆ ಹೋದ. ಸೆಳವಿಗೆ ಸಿಕ್ಕ. ಈಜಿ ಈಜಿ ಕೈಸೋತವು. ಇನ್ನೇನು ಮುಳುಗುವುದರಲ್ಲಿದ್ದ, ಅಷ್ಟರಲ್ಲಿ ಹಿರಿಯರೊಬ್ಬರು ಅಲ್ಲಿಗೆ ಆಗಮಿಸಿದರು. ಅಪಾಯದಲ್ಲಿದ್ದ ಈತನನ್ನು ಕಂಡ ಕೂಡಲೇ ಹಗ್ಗವನ್ನು ನೀರಿಗೆ ಎಸೆದು ‘ಹಿಡಿ’ ಎಂದರು. ಅದೇ ಸಮಯಕ್ಕೆ ಎಲ್ಲಿಂದಲೋ ಮರದ ತುಂಡು ಅಲ್ಲಿ ತೇಲಿ ಬಂತು; ಯಾವುದು ಹಿಡಿಯುವುದು? ಹಗ್ಗವನ್ನೋ? ಮರದ ತುಂಡನ್ನೋ? ದಾರಿಕಾರ ಮರದ ತುಂಡನ್ನೇ ಹಿಡಿದ.
ಹಿರಿಯ ಹೇಳಿದ ‘ಮರದ ತುಂಡನ್ನು ಬಿಡು ಹಗ್ಗವನ್ನು ಹಿಡಿ’ ‘ಹಗ್ಗ ಸಣ್ಣದು, ಮರ ದೊಡ್ಡದು. ದೊಡ್ದದನ್ನೇ ಹಿಡಿಯಬೇಕು. ನನಗಿಷ್ಟೂ ತಿಳಿಯದೇ ?’ ಎಂದ ಅವನು ಮರವನ್ನೇ ಹಿಡಿದ; ಮರದೊಂದಿಗೆ ಆಳವಾದ ಕೊಳಕ್ಕೆ ಬಿದ್ದು ಮರಣವನ್ನಪ್ಪಿದ. ಕೆಲವೊಮ್ಮೆ ವಸ್ತುಗಳು ಚಿಕ್ಕದಿದ್ದರೂ ಅವುಗಳ ಮೌಲ್ಯ ದೊಡ್ಡದೇ ಆಗಿರುತ್ತದೆ.. ಸಮಯಕ್ಕಾಗದ ಬುದ್ಧಿ ಎಷ್ಟಿದ್ದರೂ ಲದ್ದಿ... ಮುಳುಗುವನಿಗೆ ಹುಲ್ಲು ಕಡ್ಡಿ ಆಸರೆಯಂತೆ, ಇಲ್ಲಿ ಈಜುವವರು ನಾವೇ, ಹಗ್ಗ ಅವಕಾಶಗಳಿದ್ದಂತೆ ಮರದ ತುಂಡು ದೊಡ್ಡ ಅವಕಾಶ ಎಂಬ ಭ್ರಮೆ, ನಮ್ಮ ಅವಕಾಶಗಳನ್ನು ಬಳಸಿ ನಾವು ದಡ(ಗುರಿ) ಸೇರಬೇಕು...👍
No comments:
Post a Comment