Tuesday, October 22, 2024

 ಕಥೆ-556

ಆತ್ಮ ಸಂತಸ ದೊಡ್ಡದು

  ಮರದ ಮೇಲೊಂದು ಕಾಗೆಯು ವಸವಾಗಿತ್ತು. ಆ ಕಾಗೆಯ ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ. ಅದೇ ಮರದಲ್ಲಿದ್ದ ಗಿಳಿ ಮತ್ತು ಗುಬ್ಬಿಯ ಹತ್ತಿರ ಎಲ್ಲರೂ ಧಾವಿಸುವರು. ಏನಾದರೂ ತಿಂಡಿ-ತಿನಿಸನ್ನು ಅವುಗಳಿಗೆ ಕೊಡುವರು. ಈ ಕಾಗೆಯನ್ನು ಮಾತ್ರ ಯಾರೂ ಮಾತನಾಡಿಸುವವರೇ ಇರಲಿಲ್ಲ. ಆದರೂ ಕಾಗೆ ಮಾತ್ರ ನಿತ್ಯವೂ ಕಸಕಡ್ಡಿಗಳನ್ನು ಎತ್ತಿಹಾಕಿ, ಪರಿಸರವನ್ನು ನಿರ್ಮಳಗೊಳಿಸುತ್ತಲಿತ್ತು!

  ಒಂದು ದಿನ ವೃಕ್ಷದಲ್ಲಿದ್ದ ದೇವತೆ ಕಾಗೆಗೆ ಕೇಳಿತು. ಕಾಗೆಯೇ ಯಾರೂ ನಿನ್ನನ್ನು ಮಾತನಾಡಿಸುವುದಿಲ್ಲ. ಆದರೂ ನೀನು ಸತ್ಕಾರ್ಯದಲ್ಲಿ ತೊಡಗಿರುವಿಯಲ್ಲ ಏಕೆ? ಕಾಗೆ ಹೇಳಿತು- “ಈ ಜಗದ ಜನರಿಗಾಗಿ ನಾನು ದುಡಿಯುತ್ತಿಲ್ಲ. ನನ್ನ ಆತ್ಮಸಂತೋಷಕ್ಕಾಗಿ ನಾನು ದುಡಿಯುತ್ತಿದ್ದೇನೆ. ಒಂದು ವೇಳೆ ಈ ಜನರ ಮಾತಿಗೆ ಕಿವಿಗೊಟ್ಟಿದ್ದರೆ ನಾನು ಬದುಕುವುದೇ ಸಾಧ್ಯವಿರಲಿಲ್ಲ. ಇಂದು ನನಗೆ ಈ ಜಗವೇ ಸ್ವರ್ಗವಾಗಿದೆ.. 


ಶ್ರೀ ಸಿದ್ಧೇಶ್ವರ ಸ್ವಾಮೀಜಿ,

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು