ಕಥೆ-559
ಚಕ್ರವರ್ತಿಯಾಗೋ ಆಸೆ ಈ ಬಾಲಕನಿಗೆ..
ಪುಟ್ಟ ಬಾಲಕನ ದಿಟ್ಟ ಆಕಾಂಕ್ಷೆ ಚಕ್ರವರ್ತಿಯಾಗಬೇಕು ಅನ್ನೋದು..!! ಆದರೆ ಅವನ ಕೈರೇಖೆಗಳು ಏನ್ ಹೇಳಿತು..?? ಗೊತ್ತಾ..??
ಮ್ಯಾಸಿಡೋನಿಯಾದ ಊರಿನಲ್ಲಿ ಒಬ್ಬ ಜ್ಯೋತಿಷಿ ಬಂದಿದ್ದ.. ಅವನು ಹೇಳಿದ್ದೆಲ್ಲ ಸತ್ಯವಾಗುತ್ತೆ ಅಂತ ಜನರೆಲ್ಲಾ ಮಾತಾಡಿಕೊಳ್ತಾ ಇದ್ರು.. ಒಬ್ಬ ಪುಟ್ಟ ಬಾಲಕ ಆ ಜ್ಯೋತಿಷಿಗಳ ಹತ್ತಿರ ಬಂದು ತನ್ನ ಕೈಯನ್ನು ಆ ಜ್ಯೋತಿಷಿಗಳಿಗೆ ತೋರಿಸಿ ನಾನು ಚಕ್ರವರ್ತಿ ಆಗ್ತೀನಾ ಅಂತ ಕೇಳಿದನು.. ಕೊಳಕು ಬಟ್ಟೆಯ ಆ ಪುಟ್ಟ ಬಾಲಕನ ದಿಟ್ಟ ಪ್ರೆಶ್ನೆಗೆ ಆ ಜ್ಯೋತಿಷಿ ಬೆರಗಾಗಿ ಹೋದ.. ಆ ಹುಡುಗನ ಕೈಯನ್ನು ನೋಡಿದ.. ಸ್ವಲ್ಪ ಮರುಕ ಪಟ್ಟು ಹೇಳಿದ “ ಹೇ ಬಾಲಕ… ನಿನ್ನ ಕೈರೇಖೆಗಳು ಅದ್ಭುತವಾಗಿವೆ.. ಆದರೆ ಅಂಗೈನಲ್ಲಿ ಇನ್ನೊಂದು ರೇಖೆ ಬಂದಿದ್ದರೆ, ನೀನು ಖಂಡಿತವಾಗ್ಲೂ ಚಕ್ರವರ್ತಿ ಆಗ್ತಾ ಇದ್ದೆ.. ಆದ್ರೆ ಈಗ ಕಷ್ಟ ಅಂತ ಹೇಳಿ ಮರುಕ ಪಟ್ಟ.. ಆದ್ರೆ ಆ ಹುಡುಗ ಬೇಸರ ಪಟ್ಟುಕೊಳ್ಳಲಿಲ್ಲ.. ತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದು ತನ್ನ ಅಂಗೈ ಮೇಲೆ ಕೂಯ್ದು ರೇಖೆ ಹಾಕಿ.. “ ಈಗ ಹೇಳಿ ಇನ್ನು ಎಲ್ಲಿ ಗೆರೆ ಬರಬೇಕು ಅಂತ.. ಒಟ್ಟಿನಲ್ಲಿ ನಾನು ಚಕ್ರವರ್ತಿಯಾಗಬೇಕು ಅಷ್ಟೇ.. ಅಂತ ಹೇಳ್ತಾನೆ.. ಹುಡುಗನ ಆ ದಿಟ್ಟ ಧೈರ್ಯವನ್ನು ನೋಡಿ ಜ್ಯೋತಿಷಿಯೇ ದಂಗಾಗಿ ಹೋಗ್ತಾನೆ.. “ಚಕ್ರವರ್ತಿಯಾಗಲು ಎಂಥಾ ಅಡತಡೆಗಳನ್ನು ಎದುರಿಸಬಲ್ಲವನು ಇವನು ಎಂದು ತಿಳಿದು ಮೆಚ್ಚಿಕೊಳ್ಳುತ್ತಾನೆ” ನಗುವನ್ನು ಬೀರುತ್ತೆ “ನಿನಗೆ ಈ ರೇಖೆಗಳ ಅವಶ್ಯಕಥೆ ಇಲ್ಲ.. ನಿನ್ನ ಈ ಸಾಹಸ ಮತ್ತು ಛಲ ಮಾತ್ರ ಸಾಕು.. ನೀನು ಚಕ್ರವರ್ತಿ ಆಗೇ ಆಗ್ತೀಯ ಹೋಗು ಎಂದು ಹೇಳಿದನಂತೆ.. ಆ ಹುಡುಗ ದೊಡ್ಡವನಾಗಿ ಮ್ಯಾಸಿಡೋನಿಯಾದ ಅರಸನಾದ.. ಅವನೇ ಅಲೆಗ್ಸಾಂಡರ‍್ .. ಇಡೀ ಜಗತ್ತಿನ ರಾಜನಾಗಬೇಕೆಂಬ ಮಹತ್ವಾಕಾಂಕ್ಷೆಯ ಚಕ್ರವರ್ತಿ. ಯಾವುದೂ ಅದೃಷ್ಟದಿಂದ ಆಗುವುದಿಲ್ಲ, ನಾವೇ ಅದೃಷ್ಟವನ್ನು ಹುಡುಕಬೇಕು, ಅದು ನಮ್ಮ ಪ್ರಯತ್ನ ಮತ್ತು ಕೆಲಸಗಳಿಂದ. ನಮ್ಮ ಹಣೆಬರಹ ನಮ್ಮ ಕೈಯಲ್ಲಿದೆ. ಯಶಸ್ಸನ್ನು ಪಡೆಯಬೇಕೆಂದರೆ ಬೇರೆಯವರನ್ನು ಬದಲಾಯಿಸುವ ಮುನ್ನ ನಮ್ಮನ್ನು ನಾವು ಬದಲಿಸಿಕೊಳ್ಳುವತ್ತ ಗಮನ ಹರಿಸಬೇಕು..👍💐💐
No comments:
Post a Comment