ಕಥೆ-626
Welcome to 2025
ವರ್ಷಕ್ಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತೆ ಆದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ..
ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಹಿಂದು ಸಂಪ್ರದಾಯದ ಪ್ರಕಾರ ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯಂದು ಈ ದಿನವನ್ನು ಆಚರಿಸಲಾಗುತ್ತದೆ.
ಇನ್ನೂ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಹೆಚ್ಚಿನ ಜನರು ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುತ್ತಾರೆ.
ಪ್ರತಿ ವರ್ಷ ಹೊಸ ವರ್ಷ ಆಗಮಿಸುತ್ತದೆ ಎನ್ನುವ ಮನಸ್ಸುಗಳಿಗೆ ಒಂದು ಮಾತು. ವರ್ಷಕ್ಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತೆ ಆದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಹಾಗಾಗಿ ಹೊಸ ವರ್ಷದ ಹೊಸ ಕ್ಷಣಗಳನ್ನು ಸ್ವಾಗತಿಸಲು ಸಿದ್ಧರಾಗಿ. ಹೊಸ ವರ್ಷದ ಆಚರಣೆ ಎಂದರೆ ಬರೀ ಮೋಜು ಮಸ್ತಿಯಿಂದ ಕೂಡಿರುವುದಲ್ಲ. ಒಂದಷ್ಟು ವಿಭಿನ್ನ ಗುರಿ ಮತ್ತು ಕನಸುಗಳೊಂದಿಗೆ ಹೆಜ್ಜೆ ಇಡುವುದು ಎಂದರ್ಥ. ಇನ್ನು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಈ ವರ್ಷ ಯಶಸ್ಸು ಸಿಗಲಿ ಎನ್ನುವುದೇ ನಮ್ಮ ಆಶಯ
ಹಿಂದಿನ ವರ್ಷದಲ್ಲಿ ಅವರು ಎದುರಿಸಿದ ಅನುಭವಗಳಿಂದ ಮೌಲ್ಯಯುತವಾದ ಪಾಠಗಳು ಅವರ ಜೀವನದ ಮುಂದಿನ ವರ್ಷದಲ್ಲಿ ಅದನ್ನು ಉತ್ತಮವಾಗಿ ಮಾಡಲು ಬಳಸುವ ಮೊದಲ ದಿನ ಇದು. ಸಾಮಾನ್ಯವಾಗಿ, ಜನರು ಈ ಹೊಸ ವರ್ಷವನ್ನು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುನ್ನಡೆಸಲು ಸಂಕಲ್ಪಗಳನ್ನು ಮಾಡುತ್ತಾರೆ ಮತ್ತು ಮುಂದಿನ ವರ್ಷವನ್ನು ಹಿಂದಿನ ವರ್ಷಕ್ಕಿಂತ ಉತ್ತಮವಾಗಿಸುವ ಭರವಸೆಯನ್ನು ಮಾಡುತ್ತಾರೆ
ಧನಾತ್ಮಕ ಬದಲಾವಣೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಆರೋಗ್ಯಕರ ಆಹಾರ ತಿನ್ನುವುದು, ಹೆಚ್ಚು ವ್ಯಾಯಾಮ ಮಾಡುವುದು ಕೆಟ್ಟ ಅಭ್ಯಾಸವನ್ನು ತೊರೆಯುವುದು. ಕೆಲವು ಜನರು ತಮ್ಮ ನಿರ್ಣಯಗಳಿಗೆ ಅಂಟಿಕೊಳ್ಳಲು ಸಮರ್ಥರಾಗಿದ್ದರೆ, ಇತರರು ತಮ್ಮ ಗುರಿಗಳನ್ನು ಅನುಸರಿಸಲು ಹೆಚ್ಚು ಕಷ್ಟಪಡುತ್ತಾರೆ
ಹಿಂದಿನ ವರ್ಷದ ತಪ್ಪುಗಳಿಂದ ಕಲಿಯಬೇಕು ಮತ್ತು ಮುಂದಿನ ಪಯಣವನ್ನು ಹೊಸ ಹೆಜ್ಜೆಗಳೊಂದಿಗೆ ಪ್ರಾರಂಭಿಸಬೇಕು.
ಹೊಸ ವರ್ಷದ ಆರಂಭದ ದಿನ ನಮ್ಮ ಜೀವನಕ್ಕೆ ಹೊಸ ಆಯಾಮಗಳನ್ನು ನೀಡುತ್ತದೆ. ನಾವು ಪ್ರತಿ ವರ್ಷ ಹೊಸ ವರ್ಷವನ್ನು ಹೊಸ ಚೈತನ್ಯ ಮತ್ತು ಉತ್ಸಾಹದಿಂದ ಸ್ವಾಗತಿಸೋಣ. ಕೇವಲ ಸ್ವಾಗತಿಸಿದರೆ ಸಾಲದು ಏಕೆಂದರೆ ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ. ಒಂದೊಂದು ಹೊಸ ವರ್ಷ ನಮ್ಮ ಆಯುಷ್ಯವನ್ನು ಕಡಿಮೆ ಮಾಡಿದಂತೆ. ಆ ದಿನಗಳನ್ನು ಅರ್ಥಪೂರ್ಣವಾಗಿ ಉಳಿಸಿಕೊಳ್ಳಬೇಕಿದೆ. ಸಮಯವನ್ನು ಸದ್ಬಳಕೆ ಮಾಡಿಕೊಂಡವನೇ ಸಾಧಕನಾಗುತ್ತಾನೆ.
ನಾವು ಸಹ 2025ರಲ್ಲಿ ನಮ್ಮ ಆಸಕ್ತಿ ರಂಗದಲ್ಲಿ ಹೊಸ ಹೊಸ ಗುರಿಗಳನ್ನು ಹಾಕಿಕೊಳ್ಳೋಣ ಅದಕ್ಕಾಗಿ ಹಠ ತೊಡೋಣ ನಿರಂತರ ಪ್ರಯತ್ನಿಸೋಣ ಅದರಲ್ಲಿ ನಾವು ಪ್ರಗತಿ ಕಾಣೋಣ, ಯಶಸ್ಸನ್ನು ಪಡೆಯೋಣ.
Welcome to 2025
All the best..
Wish U happy New year To the Little hearts..
By - Shankargouda Basapur

No comments:
Post a Comment