Saturday, January 25, 2025

 ಕಥೆ-648

ರಾಷ್ಟ್ರೀಯ ಮತದಾರ ದಿನ ಬ್ಯಾಲೆಟ್ (ಮತ) ಬಲಿಷ್ಠ  


ಯಾವುದೇ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಕೇಂದ್ರ ಸ್ತಂಭವೇ ಮತದಾನವಾಗಿದೆ


25ನೇ ಜನವರಿ 1950 ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಚುನಾವಣಾ ಆಯೋಗದ (ಇಸಿಐ) ಸಂಸ್ಥಾಪನಾ ದಿನವಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯುವ ಮತದಾರರನ್ನು ಉತ್ತೇಜಿಸಲು ಈ ದಿನವನ್ನು 2011 ರಲ್ಲಿ ಮೊದಲು ಆಚರಿಸಲಾಯಿತು. ಇದು ಮತದಾನದ ಹಕ್ಕನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಆಚರಿಸುವ ದಿನವಾಗಿದೆ ಮೊದಲು ಮತದಾರರ ಅರ್ಹತೆಯ ವಯಸ್ಸು 21 ವರ್ಷವಾಗಿತ್ತು ಆದರೆ 1988 ರಲ್ಲಿ ಅದನ್ನು 18 ವರ್ಷಕ್ಕೆ ಇಳಿಸಲಾಯಿತು. 


ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕು ಇದೆ. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆಯನ್ನು ತರಲು ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಅವನು ಅಥವಾ ಅವಳು ಹೊಂದಿರುತ್ತಾರೆ. ಒಮ್ಮೆ ಯೋಚಿಸಿ, ನಾವು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. 


ಆದ್ದರಿಂದ, ನಾವು ಯುವಕರು ಮುಂಬರುವ ಪೀಳಿಗೆಗೆ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವ ಬಲವಾದ ಜಾಲವನ್ನು ನಿರ್ಮಿಸಬೇಕು. 


ರಾಷ್ಟ್ರೀಯ ಮತದಾರರ ದಿನ ಆಚರಣೆ ಮೂಲ ಉದ್ದೇಶ ಹೊಸ ಮತದಾರರನ್ನು ಸೆಳೆಯುವುದು, ಉತ್ತೇಜಿಸುವುದು ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಜನರ ಒಂದು ಮತಕ್ಕೂ ಕೂಡಾ ಅದರದ್ದೇ ಆದ ಪ್ರಾಮುಖ್ಯತೆ ಇದೆ ಹಾಗೂ ಪ್ರತಿಯೊಂದು ಮತವು ಮಹತ್ವವನ್ನು ಹೊಂದಿದೆ. ಜನರು ತಮ್ಮ ಭವಿಷ್ಯದಲ್ಲಿ ತಮ್ಮನ್ನು ಆಳುವ ಆಡಳಿತವನ್ನು ಈ ಮತದ ಮೂಲಕ ಆಯ್ಕೆ ಮಾಡುತ್ತಾರೆ.


ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. 


1951-52ರ ಅವಧಿಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 44.87 ರಷ್ಟು ಮತದಾನವಾಗಿದ್ದು, 2019 ರಲ್ಲಿ 17 ನೇ ಲೋಕಸಭೆಗೆ 67.40 ಪ್ರತಿಶತದಷ್ಟು ಮತದಾನದವಾಗಿದೆ.


ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ,' ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. 


 'ನಿಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. ಅದನ್ನು ಬಳಸಿ,' ಎಂದು ಸುಸಾನ್ ಬಿ. ಆಂಥೋನಿ ತಿಳಿಸಿದ್ದಾರೆ. 


'ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ,' ಎಂದು ಬರಾಕ್‌ ಒಬಾಮಾ ಹೇಳಿದ್ದಾರೆ.


ಸಮಾಜ ಕೆಟ್ಟಿದೆ ಎಂದು ನಾವು ಕೆಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಕೆಸರಿನಲ್ಲಿದ್ದೂ ಕಮಲಗಳಂತೆ ಇರಬೇಕಾಗಿದೆ. ಜನತಂತ್ರ ಗಟ್ಟಿಗೊಳ್ಳಬೇಕಾದರೆ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಮತದಾನ ಎಂಬುದು ವ್ಯಾಪಾರವಲ್ಲ. ನಾವು ದುಡ್ಡು ಪಡೆದು ಮತ ಹಾಕಿದರೆ ಮತ ಪಡೆದವರು ಅದನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳುತ್ತಾರೆ. ಅವರನ್ನು ಪ್ರಶ್ನಿಸುವ ನೈತಿಕ ಅಧಿಕಾರ ನಮಗಿರುವುದಿಲ್ಲ. ನಮ್ಮನ್ನು ನಾವು ಮಾಡಿಕೊಂಡಂತೆ


ಮತ ಮಾರಿಕೊಂಡರೆ ಪ್ರಶ್ನಿಸುವ ಅಧಿಕಾರ ಒತ್ತೆ ಇಟ್ಟಂತೆ


ಆದ್ದರಿಂದ ನಾವು ಮತವನ್ನು ಮಾರಿಕೊಳ್ಳದೆ ನಮ್ಮ ಹಕ್ಕನ್ನು ಚಲಾಯಿಸಲು ಕೆಳಗಿನಂತೆ ಪ್ರತಿಜ್ಞೆ ಮಾಡೋಣ.


ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ


'ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು