ಕಥೆ-627
*ಮನ ನೊಂದ ಕ್ಯಾಲೆಂಡರ್*
ಹೋಗುವ ಸಮಯ ಬಂದರೂ
ಗೋಡೆಯ ಮೇಲಿನ ಕ್ಯಾಲೆಂಡರ್
ಗಹಗಹಿಸಿ ನಗುತ್ತಿತ್ತು
ನನ್ನನ್ನು ಇಷ್ಟು ದಿನ ಬೇಕಾದಂಗೆ
ಬಳಸಿಕೊಂಡು ಈಗ ಮೂಲೆಗುಂಪು ಮಾಡೋ
ಯೋಜನೆ ಹಾಕಿದ್ದೀಯಾ?
ನೀನೇನೆ ಉಪಾಯ ಮಾಡು
ನನ್ನನ್ನು ಎಲ್ಲಾದರೂ ಎಸೆ
ರದ್ದಿ ಪೇಪರ್ ನವರಿಗೆ ತೂಕಕ್ಕೆ ಹಾಕು
ಬೆಂಕಿ ಇಟ್ಟು ಒಲೆ ಹಚ್ಚು
ತುಂಡು ತುಂಡು ಮಾಡಿ ಬೇಕಾದ ಬೇಡಾದ
ಕೆಲಸಗಳಿಗೆಲ್ಲಾ ಬಳಸಿಕೋ
ಆದರೆ ಕೊನೆವರೆಗೂ ನಾನು ನಿನಗೆ
ಉಪಕಾರ ಮಾಡಿದ್ದೇನೆ ಹೊರತು
ಯಾವತ್ತೂ ಅಪಕಾರ ಮಾಡಿಲ್ಲ
ಮುಂದೆಯೂ ಮಾಡಲ್ಲ
ಸೂಜಿಯಿಂದ ನನ್ನ ಮೈಯೆಲ್ಲ ಚುಚ್ಚಿದರೂ
ನಾನೊಂದು ಮಾತು ಆಡಿಲ್ಲ
ಬಣ್ಣ ಬಣ್ಣದ ಪೆನ್ನಿನಿಂದ ಬರೆದು ನನ್ನ
ಮುಖವೆಲ್ಲ ಮಸಿ ಮಾಡಿದರೂ
ನಿನಗೆ ಇದಿರು ಆಡಿಲ್ಲ
ಕಾರಣ ನನ್ನಲ್ಲಿನ ತಾಳ್ಮೆ
ನನಗೂ ಗೊತ್ತು ನಾನು ಈ ವರ್ಷ ಇದ್ದು
ಹೋಗೋನು ಅಷ್ಟೇ
ಯಾಕೆ ಮಾತಾಡಿ ಕೆಟ್ಟಾಗಬೇಕು
ನಾ ಎಲ್ಲಿ ಇರ್ತೀನೋ ಅಲ್ಲಿ ಹೊಂದ್ಕೊಂಡು ಬಾಳ್ತೇನೆ
ಇದು ನನ್ನ ಹಣೆಬರಹ ನಾನು ಪಡೆದ ವರವೋ ಗೊತ್ತಿಲ್ಲ
ಒಂದು ವರ್ಷವಾದರೂ ಎದ್ದ ತಕ್ಷಣ
ನೀನು ನನ್ನ ಮುಖ ನೋಡಿದ್ದೀಯಾ
ಶುಭ ಗಳಿಗೆಗಳು ಅಶುಭ ಗಳಿಗೆಗಳು
ಎಲ್ಲದಕ್ಕೂ ನನ್ನನ್ನೇ ಕೇಳಿದ್ದೀಯಾ
ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯುವ ದಿನವನ್ನು ಕೂಡ ನನ್ನನ್ನೇ ಕೇಳಿ ಗೊತ್ತು ಮಾಡಿದ್ದೀಯಾ
ಸಾಲ ಕೊಟ್ಟ ಲೆಕ್ಕ ಸಾಲ ತೆಗೆದುಕೊಂಡ ಲೆಕ್ಕ ಎಲ್ಲ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದೀಯಾ
ಸಾಕು ನನಗೆ ಇದಕ್ಕಿಂತ ಮಹತ್ವ ಇನ್ನೇಕೆ ಬೇಕು?
ನಾನು ನಿನ್ನ ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿ ನೋಡಿಕೊಂಡಿದ್ದಿಯಾ
ಈಗ ನನಗೆ ಹೋಗುವ ಸಮಯ ಬಂದಾಯ್ತು
ಹೋಗಿ ಬರುವೆ
ನನ್ನ ಸ್ಥಳವನ್ನು ಮತ್ತಾರು ತುಂಬಲು ಸಾಧ್ಯವಿಲ್ಲ
ನನ್ನನ್ನೇ ಹೋಲುವ ಮತ್ತೊಬ್ಬರು ಬರಬಹುದು
ಆದರೆ ಅವರು ನಾನಾಗಿರಲು ಸಾಧ್ಯವಿಲ್ಲ
ನನ್ನ ನೆನಪುಗಳನ್ನು ನಿನ್ನಲ್ಲಿ ಬಿಟ್ಟು
ನಿನ್ನ ನೆನಪುಗಳನ್ನು ನನ್ನ ಜೊತೆಗೆ
ತೆಗೆದುಕೊಂಡು ಹೋಗುತ್ತಿದ್ದೇನೆ
ಕೊನೆಗೂ ನಿನಗೆ ವಿದಾಯ ಹೇಳುತ್ತಿದ್ದೇನೆ
ಬೈ ಬೈ...
ಕೃಪೆ ವ್ಯಾಟ್ಸಪ್
No comments:
Post a Comment