Sunday, January 5, 2025

 ಕಥೆ-629

ಎಲ್ಲವನ್ನ ಪ್ರಕೃತಿ ನಮಗೆ ಕೊಟ್ಟಿದೆ.

https://basapurs.blogspot.com/


ಭೂಮಿಯಲ್ಲಿ ನಾವು ಸುಂದರವಾಗಿ ಬದುಕೋದಕ್ಕೆ ಏನು ಬೇಕೋ ಎಲ್ಲವನ್ನ ಪ್ರಕೃತಿ ನಮಗೆ ಕೊಟ್ಟಿದೆ. ಉಸಿರಾಡಲು ಗಾಳಿ, ಬೆಚ್ಚನೆಯ ಬೆಳಕು, ಕುಡಿಯಲು ನೀರು, ತಿನ್ನಲು ಅನ್ನ, ಎಲ್ಲವನ್ನೂ...

ಇಲ್ಲಿ ಬದುಕೋಕೆ ಬೇಕಿರುವುದು ಒಂದು ಸಣ್ಣ ವಿವೇಚನೆಯಷ್ಟೇ, ಅತೀ ಬುದ್ದಿವಂತಿಕೆಯಲ್ಲ!


ಪ್ರಾಣಿ ಪಕ್ಷಿಗಳು ಪ್ರಕೃತಿ ಕೊಟ್ಟಿರೋದನ್ನ ಪ್ರಕೃತಿಗೂ ಹಾನಿಯಾಗದಂತೆ ಬಳಸಿ ಚಂದವಾಗಿ ಬದುಕಿ ಸಾವಿನಲ್ಲೂ ಸಾರ್ಥಕತೆಯನ್ನ ಪಡೆಯತ್ವೆ, ಆದ್ರೆ ಮನುಷ್ಯ ಮಾತ್ರ ತನ್ನ ಕೂಡಿಡುವ ಬುದ್ದಿಯಿಂದ ಇಲ್ಲದ ಉಪಾಯಗಳನ್ನ ಬಳಸಿ ಪ್ರಕೃತಿಯನ್ನೂ ಹಾಳು ಮಾಡಿ ತನ್ನ ವಿನಾಶಕ್ಕೂ ಕಾರಣ ಆಗ್ತಾನೆ.


ಪ್ರಾಣಿ ಪಕ್ಷಿಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಷ್ಟು ಪುಟ್ಟ ಗೂಡೋ, ಗುಹೆಯೇ ಸಾಕು. ಆದರೆ ಮನುಷ್ಯನಿಗೆ ಮಾತ್ರ ಐಷಾರಾಮಿ ಮನೆ ಬೇಕು, ಅಲ್ಲಿ ಬೆವರಬಾರದು, ಚಳಿಯೂ ಆಗಬಾರದು, ಎಸಿ, ಕೂಲರ್, ಹೀಟರ್ ಎಲ್ಲವೂ ಬೇಕು


ಈ ಬೇಕು, ಬೇಕುಗಳ ನಡುವೆ ನಿಜಕ್ಕೂ ನಮಗೆ ಬೇಕಿರುವುದು ಏನು? ನೆಮ್ಮದಿ

ಬದುಕು ಅಂದ್ರೆ ಇಷ್ಟೇ, ಯಾರಿಗೂ ತೊಂದರೆ ನೀಡದೆ, ನಮಗೂ ನಮ್ಮ ಆತ್ಮಕ್ಕೂ ಹೆಚ್ಚು ತೊಂದರೆ ಮಾಡಿಕೊಳ್ಳದೆ, ನಮ್ಮ ಅಗತ್ಯಗಳಿಗೆ ಬೇಕಿರುವುದನ್ನ ಪಡೆದುಕೊಂಡು ಚಂದವಾಗಿ ಬದುಕುವುದೇ ಜೀವನ..

 ಸರಳತೆಯಿಂದ ನೆಮ್ಮದಿಯನ್ನ ಅರಸಿದರೆ ಖಂಡಿತ ಅದು ನಮಗೆ ಸಿಗಬಹುದು.

ಭೂಮಿಯಲ್ಲಿ ನಾವು ಅತಿಥಿಗಳಷ್ಟೇ! ವಾರಸ್ಸುದಾರರಲ್ಲ!

ಪ್ರಕೃತಿಯನ್ನ ಅದರಂತೆ ಇರಲು ಬಿಟ್ಟು ಬಿಡೋಣ. ಗಿಡ ಮರ ಪರಿಸರ ಉಳಿಸಲು ಕಿಂಚಿತ್ತಾದರೂ 

ಮನಸ್ಸು ಮಾಡೋಣ......

ಕೃಪೆ ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು