ಕಥೆ-658
SSLC ಮಕ್ಕಳೇ ಓದುವುದು ಹೇಗೆ ?
( ಕ್ರಮಗಳು)
ಸರಣಿ-4
ಆತ್ಮೀಯ ವಿದ್ಯಾರ್ಥಿಗಳೇ ನಿನ್ನೆ ವರೆಗೂ ಓದಲು ಒಂದು ವೇಳಾ ಪತ್ರಿಕೆ, ಅಧ್ಯಯನಕ್ಕೆ ಸ್ಥಳ, ಸಮಯ, ವಿಷಯದ ಆಯ್ಕೆ ಮತ್ತು ಓದುವ ವಿಧಾನಗಳ ಬಗ್ಗೆ ಚರ್ಚಿಿಲಾಗಿದೆ.. ಈಗ ಕೊನೆಯ ಎರಡು ಟಿಪ್ಸ್ ಗಳ ಬಗ್ಗೆ ಚರ್ಚಿಸೋಣ
*6. ಓದುವಾಗ ಏಕಾಗ್ರತೆ ಇರಲಿ.*
ಓದಿದ ವಿಷಯ ಅರ್ಥವಾಗಿ ನೆನಪಿನಲ್ಲಿ ಉಳಿಯಬೇಕಾದರೆ, ಓದಿನಲ್ಲಿ ಏಕಾಗ್ರತೆ ಅತ್ಯಂತ ಅವಶ್ಯಕ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಆಕರ್ಷಣೆಗಳಿಂದ ದೂರವಿರಿ. ಓದುವ ಸಮಯದಲ್ಲಿ ಮೊಬೈಲ್ ಫೋನಿನ ಬಳಕೆ ಮಾಡುವುದಾಗಲೀ, ಸ್ನೇಹಿತರ ಜೊತೆಗೆ ಚಾಟ್ ಮಾಡುವುದಾಗಲೀ ಖಂಡಿತಾ ಸಲ್ಲದು.
ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನ ಕನಿಷ್ಠ ಹತ್ತರಿಂದ ಇಪ್ಪತ್ತು ನಿಮಿಷಗಳವರೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.
*7. ನಿದ್ರೆ, ಆಹಾರದ ನಿರ್ಲಕ್ಷ್ಯ ಬೇಡ.*
ಎಷ್ಟೋ ವಿದ್ಯಾರ್ಥಿಗಳು ವರ್ಷಾನು ಪೂರ್ತಿ ಒಳ್ಳೆಯ ಫಲಿತಾಂಶ ಪಡೆಯುತ್ತಾ ಬಂದಿರುತ್ತಾರೆ.. ಆದರೆ ಕೊನೆಯ ಘಳಿಗೆಯಲ್ಲಿ ಪರೀಕ್ಷೆ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ತಂದುಕೊಳ್ಳುತ್ತಾರೆ. ಇದರಿಂದಾಗಿ ಫಲಿತಾಂಶ ಕುಸಿಯುತ್ತದೆ.
ನಿದ್ರೆಗೆಟ್ಟು ರಾತ್ರಿಯೆಲ್ಲಾ ಓದುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ಆರರಿಂದ ಎಂಟು ತಾಸಿನ ನಿದ್ರೆ ನಿಮಗೆ ಅವಶ್ಯಕ. ಹಸಿದುಕೊಂಡು ಓದಲು ಕೂರಬೇಡಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಬಹಳ ಮುಖ್ಯ. ಈ ದಿನಗಳಲ್ಲಿ ನಿಮಗೆ ಸಮತೋಲಿತ ಆಹಾರ ಅತ್ಯವಶ್ಯ. ದಿನಕ್ಕೆ ಐದಾರು ಲೋಟಗಳಷ್ಟು ನೀರು ಕುಡಿಯಿರಿ.
ನಿಮ್ಮೊಂದಿಗೆ 4 ಸರಣಿಗಳಲ್ಲಿ ಚರ್ಚಿಸಿದ ಈ ನಾಲ್ಕು ದಿನಗಳ ಮುಖ್ಯಾಂಶಗಳನ್ನು ಪುನರಾವಲೋಕನ ಮಾಡುವುದಾದರೆ ಏಳು ಟಿಪ್ಸ್ ಗಳು
1) ಓದಲು ವೇಳಾಪತ್ರಿಕೆ
2) ಓದಲು ಸೂಕ್ತ ಸ್ಥಳ
3) ಓದಲು ಸಮಯ
4) ವಿಷಯದ ಆಯ್ಕೆ
5) ಓದುವುದು ಹೇಗೆ?
6) ಓದುವಾಗ ಏಕಾಗ್ರತೆ
7) ಆರೋಗ್ಯದ ಕಡೆ ನಿಗಾ
ಓದುವ ವಿಧಾನದಲ್ಲಿ 4 ಸ್ಟೆಪ್ ಗಳ Reading Technique SUQW ನಮಗೆ ಸಹಾಯವಾಗುತ್ತದೆ
S-Survey
U-Understanding
Q-Questioning
W-Writing
ಮುಖಾಂಶಗಳ ಪಟ್ಟಿ, ಮೈಂಡ್ ಮ್ಯಾಪ್ ತಯಾರಿಕೆ, ಕಠಿಣಾಂಶ ಗಳಿಗೆ ಶಿಕ್ಷಕರಿಂದ ಪರಿಹಾರ ಪಡೆಯುವುದು, ನೆನಪಿಡುವ ತಂತ್ರಗಳ ಬಳಕೆ.. ಪುನರಾವರ್ತನೆ ನಿಮ್ಮನ್ನು ಅತ್ಯುತ್ತಮ ಫಲಿತಾಂಶದೆಡೆಗೆ ಕರೆದೊಯ್ಯುತ್ತವೆ..
ಕೇವಲ ಎರಡು ತಿಂಗಳು ಮಾತ್ರ ಓದೋದು, ಈ ಎರಡು ತಿಂಗಳು ನೀವು ಪ್ರಯತ್ನಪಟ್ಟರೆ ಖಂಡಿತ ಉತ್ತೀರ್ಣರಾಗುತ್ತೀರಿ, ಅತ್ಯುತ್ತಮ ಫಲಿತಾಂಶ ಪಡೆಯುತ್ತೀರಿ. ನಂತರ ನಿಮಗೆ ವಿಶ್ರಾಂತಿ ಸಿಗುತ್ತದೆ.. ಕೇವಲ ಎರಡು ತಿಂಗಳು, ಕೇವಲ ಎರಡು ತಿಂಗಳು ಮಾತ್ರ... ಓದುವದನ್ನು ಬಿಡಬೇಡಿ.. ಏಳಿ ಎದ್ದೇಳಿ ನಿಮ್ಮಲ್ಲಿರುವ ಮೈಗಳ್ಳತನವನ್ನು ಹೊಡೆದೋಡಿಸಿ ಓದಲು ಶುರು ಮಾಡಿ..
ಕೊನೆಯ ಒಂದು ಮಾತು
ಓದೋದ ಖರೆ ಚೆನ್ನಾಗಿ ಓದಿರಿ..
ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ
All the best 👍💐💐💐
By Shankargouda Basapur.
GHS Hiremyageri
No comments:
Post a Comment