ಕಥೆ-655
SSLC ಮಕ್ಕಳೇ ಓದುವುದು ಹೇಗೆ ?( ಕ್ರಮಗಳು)
ಸರಣಿ-1
ಆತ್ಮೀಯ ವಿದ್ಯಾರ್ಥಿಗಳೇ SSLCಯಲ್ಲಿ ಯಶಸ್ಸು ಪಡೆಯಲು ನಿಮ್ಮ ಜೊತೆ 7 ಟಿಪ್ಸ್ ಗಳನ್ನು ಮೂರು ಭಾಗಗಳಲ್ಲಿ ಹಂಚಿಕೊಳ್ಳುತ್ತಿದ್ದೇನೆ.. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸುತ್ತೇನೆ..
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್.ಎಸ್.ಎಲ್.ಸಿ ಒಂದು ಪ್ರಮುಖ ಘಟ್ಟ. ಇದು ಸರ್ಕಾರಿ ನೌಕರಿಗೆ ಕನಿಷ್ಠ ವಿದ್ಯಾರ್ಹತೆ. ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಗೆ ಕಡ್ಡಾಯ. ಉನ್ನತ ವ್ಯಾಸಂಗಕ್ಕೆ, ಇತ್ಯಾದಿಗಳಿಗೆ SSLC ದಾಖಲೆ ಬೇಕು. ಇವತ್ತಿನ ವಿದ್ಯಾರ್ಥಿಗಳಲ್ಲಿ Seriousness ಕಡಿಮೆ ಅನಾವಶ್ಯಕವಾಗಿ ಕಾಲಹರಣ, ಜಾತ್ರೆ ಮದುವೆ ಮುಂಜಿ ಎಂದು ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ, ಕೆಲವೊಮ್ಮೆ ಕೂಲಿ ನಾಲಿ ಮಾಡಿ ಮೋಜು ಮಸ್ತಿಯಲ್ಲಿ ಕಳೆಯುತ್ತಾರೆ. ನಾವೀಗ ವಿದ್ಯಾರ್ಥಿ ಎನ್ನುವುದನ್ನು ಮರೆಯುತ್ತಾರೆ.Student life is the golden time ... ವಿದ್ಯಾರ್ಥಿ ಜೀವನ ಅಮೂಲ್ಯ ಸಮಯ ಅದನ್ನು ಚೆನ್ನಾಗಿಸಬಹುದು. ಬಳಸಿಕೊಳ್ಳುವ ರೀತಿಯ ಮೇಲೆ ನಮ್ಮ ಜೀವನ ರೂಪಗೊಳ್ಳುತ್ತದೆ.. ಎಷ್ಟೋ ವಿದ್ಯಾರ್ಥಿಗಳು ಕೊನೆಘಳಿಗೆಯಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲುತ್ತಾರೆ.. ಸಾಕಷ್ಟು ವಿದ್ಯಾರ್ಥಿಗಳ ಶತ್ರು ಎಂದರೆ ಅವರ ಮೈಗಳ್ಳತನ.. ನಿಮ್ಮ ಮೇಲೆ ಪಾಲಕರು ಪೋಷಕರು ಮತ್ತು ಶಿಕ್ಷಕರು ಬಹಳಷ್ಟು ಭರವಸೆಗಳನ್ನ ಇಟ್ಟುಕೊಂಡಿರುತ್ತಾರೆ. ವಿಶೇಷವಾಗಿ ತಂದೆ ತಾಯಿಗಳು ಹರಕು ಬಟ್ಟೆ ತೊಟ್ಟು ನಿಮಗೆ ಹೊಸ ಬಟ್ಟೆ ಕೊಡುತ್ತಾರೆ. ಎಷ್ಟೇ ಕಷ್ಟ ಬಂದರೂ ಅದನ್ನು ನುಂಗಿ ಒಳ್ಳೆಯದನ್ನೇ ಬಯಸುತ್ತಾರೆ. ಯಾವತ್ತೂ ಅವರ ಕಣ್ಣಲ್ಲಿ ನೀರನ್ನು ಹಾಕಿಸದಿರಿ.ಅಪ್ಪ-ಅಮ್ಮ ದೇವರಿಗೆ ನೋವು ಮಾಡಿ, ಸಾವಿರ ದೇವಸ್ಥಾನಗಳಲ್ಲಿ ಊರಳು ಸೇವೆ ಮಾಡಿದ್ರು ಪೂಣ್ಯ ಸಿಗೋದಿಲ್ಲ. ಅಂಕಗಳಿಗಾಗಿ ಓದುವ ಬದಲು ವಿಷಯಾಂಶಾಧಾರಿತ ಓದು ನಿಮ್ಮನ್ನು ಎತ್ತರಕ್ಕೆ ಹೊಯ್ಯುವುದು.. ಪುಸ್ತಕದ ಜ್ಞಾನ, ಮಸ್ತಕಕ್ಕೆ(ತಲೆಗೆ) ಏರಿ ಅದು ಲೋಕ ಕಲ್ಯಾಣಕ್ಕೆ ಉಪಯೋಗವಾಗಬೇಕು.. ಇವತ್ತಿನ ಸಮಾಜದಲ್ಲಿ ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ ಈ ಓದು ನಮಗೆ ಎಷ್ಟು ಸಂಸ್ಕಾರ ಕಲಿಸಿದೆ ಎಂಬುದು ಮುಖ್ಯವಾಗುತ್ತದೆ.. ಇದೊಂದು ನಮಗೆ ಸಿಕ್ಕ ಅವಕಾಶ ಎಂದು ಮುನ್ನಡೆಯಬೇಕು. ಎಲ್ಲರೂ ಹೇಳೋದು ಒಂದೇ ಒಂದು, ಅದು ಓದು ಎಂದು, ಒತ್ತಡ ಹಾಕುವರೇ ಹೆಚ್ಚು. Relax.. ಆಗಿ... ಭಯ ಮತ್ತು ಒತ್ತಡಡದಿಂದ ಕಲಿತ ಕಲಿಕೆ ದೀರ್ಘಕಾಲ ನೆನಪಿರುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.. ಭಯ ಮತ್ತು ಬೆತ್ತದಿಂದ ಓದುತ್ತೇವೆ ಎನ್ನುವ ಮನಸ್ಥಿತಿಯಿಂದ ಹೊರಬನ್ನಿ, ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ , ಶ್ರದ್ಧೆ ಮತ್ತು ಆಸಕ್ತಿಯಿಂದ ಓದುವುದನ್ನು ರೂಢಿಸಿಕೊಳ್ಳಿ.. ಏನು ಮಾಡೋದಕ್ಕಿಂತ ಮೊದಲು ಗಟ್ಟಿ ಮನಸ್ಸು ಮಾಡಿ.. ಮನಸ್ಸಿದ್ದರೆ ಮಾರ್ಗ..
ಏಳಿ ಎದ್ದೇಳಿ ನಿಮ್ಮ ಗುರಿ ಮುಟ್ಟುವವರೆಗೂ ನಿಲ್ಲದಿರಿ..
ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. *ಈಗಲೂ ಸಮಯವಿದೆ*. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು.
ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ಮನಸ್ತಾಪ, ನೋವು ಓದುವ ನಿರಾಸಕ್ತಿಗಳು ಸಹಜ. ನಿತ್ಯ ಓದುವುದು ಬೇಜಾರು ಎನ್ನುವ ವಿದ್ಯಾರ್ಥಿಗಳಿಗೆ ಒಂದು ಸಲಹೆ.. ಪರೀಕ್ಷೆ ಇವತ್ತಿಗೆ 60 ದಿನಗಳಲ್ಲಿ ಮುಗಿಯುತ್ತವೆ ಅಂದುಕೊಳ್ಳೋಣ.. ಕೇವಲ 60 ದಿನ ಅಂದರೆ ಕೇವಲ ಎರಡು ತಿಂಗಳು ಮಾತ್ರ ಓದಿಬಿಟ್ಟರೆ ಸಾಕು, ಮುಂದೆ ವಿಶ್ರಾಂತಿ ಪಡೆಯಬಹುದು. ಅದಕ್ಕೆ ಗಟ್ಟಿ ಮನಸ್ಸು ಮಾಡಬೇಕು ಅಷ್ಟೇ.. ಈ ಎರಡು ತಿಂಗಳು ಗಾಂಧೀಜಿ ಹೇಳುವಂತೆ ನಾವು ಏನನ್ನು ಓದುತ್ತೇವೆಯೋ ಅದರ ಬಗ್ಗೆ ಚಿಂತಿಸಬೇಕು, ಅದನ್ನು ಜೀರ್ಣಿಸಿಕೊಳ್ಳಬೇಕು, ಅದು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗವಾಗಿರಬೇಕು. ಆಗ ಪರೀಕ್ಷೆಯಲ್ಲಿ ಫೇಲ್ ಅನ್ನೊ ಮಾತೇ ಇಲ್ಲ. ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ.. ವಿದ್ಯಾರ್ಥಿ ಜೀವನ ನಮಗೆ ಸಿಕ್ಕ ಅವಕಾಶವೆಂದು ಸದ್ಬಳಕೆ ಮಾಡಿಕೊಳ್ಳೋದು ಪ್ರತಿಯೊಬ್ಬ ವಿದ್ಯಾರ್ಥಿಯ ಧರ್ಮ...
ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯ ದೂರಾಗಿ, ಪರೀಕ್ಷೆಯಲ್ಲಿ ಯಶಸ್ವಿಗೊಳ್ಳಬಹುದು...
ಪರೀಕ್ಷೆಯನ್ನು ಯುದ್ಧಕ್ಕೆ ಹೋಲಿಸಿದರೆ, ಯುದ್ಧದ ಯೋಜನೆಗಳು ಇದಕ್ಕೆ ಸೈನಿಕರ ನಿಯೋಜನೆ,ಯುದ್ಧದ ಕಲೆ ಕೌಶಲ್ಯ ಯುಕ್ತಿಗಳ ತರಬೇತಿ, ಇಂಧನ, ಶಸ್ತ್ರಾಸ್ತ್ರ ಗಳ ತಯಾರಿ,ಸೈನಿಕರ ರಕ್ಷಣೆಗೆ ಬೇಕಾದ ಇತರೆ ಸಲಕರಣೆಗಳು.. ಅತ್ಯುತ್ತಮವಾಗಿದ್ದರೆ ಯುದ್ಧದಲ್ಲಿ ಯಶಸ್ಸು ಸಿಗುತ್ತದೆ.. ಇಲ್ಲದಿದ್ದರೆ ಸೋಲಾಗುತ್ತದೆ...
ಈಗಿನ ಹೊಸ ಪರಿಕಲ್ಪನೆ ಪರೀಕ್ಷೆ ಎಂಬುದು ಹಬ್ಬ. ಪರೀಕ್ಷೆಯನ್ನು ಒಂದು ಹಬ್ಬಕ್ಕೆ ಹೋಲಿಸಿದರೆ, ಮನೆಯಲ್ಲಿ ಒಂದು ಹಬ್ಬ ಬರುತ್ತದೆ ಎಂದರೆ ನಮ್ಮ ತಯಾರಿ ಹೇಗಿರುತ್ತದೆ ಎಂದರೆ ಮನೆ ಸ್ವಚ್ಛಗೊಳಿಸುವುದು, ಸಾರಿಸೋದು, ಬಣ್ಣ ಹಚ್ಚುವುದು, ಹಬ್ಬದ ಬಟ್ಟೆ ಊಟಕ್ಕಾಗಿ ತಯಾರಿ, ಮನೆ ಸಿಂಗರಿಸುವುದು... ಇತ್ಯಾದಿ...
ತಯಾರಿ ಮಾಡಿಕೊಂಡಾಗ ಹಬ್ಬ ಸಡಗರ ಸಂಭ್ರಮದಿಂದ ನೆರವೇರುತ್ತದೆ ಮತ್ತು ಸಂತಸ ಮನೆ ಮಾಡುತ್ತದೆ.. ಹಬ್ಬ ಯಶಸ್ವಿಯಾಗುತ್ತದೆ.. ಇಲ್ಲದಿದ್ದರೆ ವಿಫಲವಾಗುತ್ತದೆ...
ಪರೀಕ್ಷೆ ಎಂಬ ಹಬ್ಬದ ತಯಾರಿ ಉತ್ತಮವಾಗಿದ್ದರೆ ನಾವು ಉತ್ತೀರ್ಣರಾಗುತ್ತೇವೆ ಇಲ್ಲದಿದ್ದರೆ ಫೇಲಾಗುತ್ತೇವೆ..
ನೀವು ಪರೀಕ್ಷೆಗಾಗಿ ಕೆಳಗಿನ ತಯಾರಿ ಮಾಡಿದ್ದೆ ಆದರೆ ಖಂಡಿತ ಉತ್ತಮ ಫಲಿತಾಂಶ ಪಡೆಯುತ್ತೀರಿ..
*1. ವೇಳಾಪಟ್ಟಿ ರೂಪಿಸಿಕೊಳ್ಳಿ.*
ವಾರದ ಏಳು ದಿನಗಳ ಅಧ್ಯಯನ ಮಾಡಬೇಕಾದ ವಿಷಯಗಳ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳ ವೇಳಾಪಟ್ಟಿಗೆ ಪೋಷಕರಿಗೆ /ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಕಡ್ಡಾಯವಾಗಿ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ. ಈ ವೇಳಾಪಟ್ಟಿಯಲ್ಲಿ ನಿಮಗೆ ಕಠಿಣವೆನಿಸಿದ ವಿಷಯಗಳಿಗೆ ಸ್ವಲ್ಪ ಹೆಚ್ಚಿನ ಸಮಯವನ್ನು ಮೀಸಲಿಡಿ.....
ಮುಂದುವರೆಯುವುದು........
- Shankargouda Basapur
GHS Hiremyageri
No comments:
Post a Comment