Monday, February 3, 2025

 ಕಥೆ-656

SSLC ಮಕ್ಕಳೇ ಓದುವುದು ಹೇಗೆ 

( ಕ್ರಮಗಳು)

ಸರಣಿ-2

Live

ನಿನ್ನೆ ದಿನ ಒಂದು ಸೂಕ್ತ ವೇಳಾಪಟ್ಟಿಯನ್ನು ಮಾಡಿಕೊಂಡು ಓದುವುದರ ಬಗ್ಗೆ ಚರ್ಚಿಸಲಾಯಿತು.. ಅದರ ಮುಂದುವರೆದ ಭಾಗವಾಗಿ ಚರ್ಚಿಸೋಣ

*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*


ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ , ಇಲ್ಲದಿದ್ದರೂ ನಡೆಯುತ್ತದೆ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಜೋಡಿಸಿಟ್ಟುಕೊಳ್ಳಿ. ಆ ಸ್ಥಳದಲ್ಲಿ ನಿಮಗೆ ಎಲ್ಲಾ ವಿಷಯದ ಪರಿಕರಗಳು ಸಿಗುವಂತಿರಬೇಕು.. ನೆನಪಿರಲಿ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಪರಿಕರಗಳು ಅವರಿಗೆ ಸಿಗದಂತೆ ಎತ್ತರಕ್ಕೆ ಇಡಿ. ಓದು ಮುಗಿಸಿದ ನಂತರ ಆ ಸ್ಥಳದಲ್ಲಿ ಬಳಸಿದ ಪರಿಕರಗಳನ್ನು ಮತ್ತೆ ಜೋಡಿಸಿಡಿ.. ಇದು ನಿಮ್ಮಲ್ಲಿ ಶಾಂತತೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ ಅಲ್ಲದೆ ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ. ಸಣ್ಣ ಪುಟ್ಟ ವಸ್ತು ಸಿಗದಿದ್ದಾಗ ಹುಡುಕುವುದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರವೃತ್ತಿಯನ್ನು ತಪ್ಪಿಸುತ್ತದೆ..


*3. ಅಧ್ಯಯನದ ಸಮಯ.*

ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ಬೇರೆಯವರು ಎಬ್ಬಿಸಬೇಕು, ಅಲಾರಾಂ ಒಡೆಯಬೇಕು.. ಅಂದ್ರೆ ಓದ್ತೀನಿ ಎನ್ನುವುದು ಮೂರ್ಖತನ. ಓದೋಕೆ ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಮನಸ್ಸಿನಲ್ಲಿ ಮೂಡಬೇಕು. ನಮ್ಮ ಮನಸ್ಸು ಗಡಿಯಾರದಂತೆ, ರಾತ್ರಿ ಮಲಗುವಾಗ ನಾನು ಈ ಸಮಯಕ್ಕೆ ಎದ್ದೇಳಬೇಕೆಂದು ಮನಸ್ಸಿಗೆ ಅಂದುಕೊಂಡು ಮಲಗಿಕೊಂಡರೆ, ಆ ಸಮಯಕ್ಕೆ ಎದ್ದೇಳುತ್ತೇವೆ ಅದಕ್ಕೆ ನಾವು ಮನಸ್ಸು ಮಾಡಬೇಕು ಅಷ್ಟೇ. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.


ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.


*4. ವಿಷಯದ ಆಯ್ಕೆ.*


ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.


ಬೆಳಗಿನ ಅವಧಿಯಲ್ಲಿ ಕಣ್ಣುಗಳಿಗೆ ವ್ಯಾಯಾಮ ನೀಡುವುದರ ಮೂಲಕ ನಿಮ್ಮ ಓದನ್ನು ಆರಂಭಿಸಿ ನಿದ್ದೆಯೂ ಹೋಗುತ್ತದೆ ಮತ್ತು ಕಣ್ಣುಗಳು ಬಲಿಷ್ಠವಾಗುತ್ತವೆ.

  -ಮುಂದುವರೆಯುವುದು

 -Shankargouda Basapur 

     GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು