ಕಥೆ-657
SSLC ಮಕ್ಕಳೇ ಓದುವುದು ಹೇಗೆ ?
(ಕ್ರಮಗಳು)
ಸರಣಿ-3
ಆತ್ಮೀಯ ವಿದ್ಯಾರ್ಥಿಗಳೇ ನಿನ್ನೆ ದಿನ Tips no-2 ಅಧ್ಯಯನಕ್ಕೆ ಸೂಕ್ತ ಸ್ಥಳ, Tips no-3 ಅಧ್ಯಾಯದ ಸಮಯ, Tips no-4 ಓದುವಾಗ ವಿಷಯದ ಆಯ್ಕೆ ಕುರಿತು ಚರ್ಚಿಸಲಾಯಿತು.. ಈ ದಿನ ಚರ್ಚೆ Tips no-5 ಅತ್ಯಂತ ಪ್ರಮುಖವಾದದ್ದು ಮತ್ತು ನೀವು ಓದಲೇ ಬೇಕಾದದ್ದು ಅದು..........
ಅಧ್ಯಯನ ಮಾಡುವುದು ಹೇಗೆ?
Tips No: 5 ಅಧ್ಯಯನ ಮಾಡುವ ವಿಧಾನ ಹೇಗೆ?
ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ.
ಓದುವ ವಿಧಾನದಲ್ಲಿ 4 ಸ್ಟೆಪ್ ಗಳ Reading Technique SUQW ನಮಗೆ ಸಹಾಯವಾಗುತ್ತದೆ
S-Survey
U-Understanding
Q-Questioning
W-Writing
i).S-Survey of the unit..
ನಾವು ಓದುವಾಗ ಎಷ್ಟು ಓದಿಕೊಳ್ಳಬೇಕು ಎಂಬುದನ್ನು ಸರ್ವೇ ಮಾಡಿಕೊಳ್ಳಬೇಕು.. ಉದಾಹರಣೆಗೆ ವಿಜ್ಞಾನದಲ್ಲಿ ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ಅಧ್ಯಾಯ-1 ರ
1ರಿಂದ 4 ಪೇಜ್ ಗಳು ಅಥವಾ ನಿರ್ದಿಷ್ಟವಾಗಿ ಇಷ್ಟು ಕಲಿಕಾಂಶಗಳು ಅಂದುಕೊಂಡು ಅದನ್ನು ಓದಿಕೊಳ್ಳುವುದು...
ii) U-Understing the unit..
ಈ ಹಂತದಲ್ಲಿ ನಾವು ಎಷ್ಟು ಓದಿಕೊಳ್ಳಬೇಕೆಂದು ಸರ್ವೆ ಮಾಡಿಕೊಂಡ ಘಟಕವನ್ನು ಅರ್ಥ ಮಾಡಿಕೊಂಡು ಓದಿಕೊಳ್ಳುವುದು.. ಏಕಾಗ್ರತೆಯಿಂದ ಓದುವುದರಿಂದ, ಪುನಹ ಪುನಹ ಓದುವುದರಿಂದ ಅರ್ಥ ಮಾಡಿಕೊಳ್ಳಬಹುದು. ಓದುವುದು ಕಾಟಾಚಾರಕ್ಕೆ ಆಗಬಾರದು, ಅರ್ಥವಿಲ್ಲದ, ಅರ್ಥವಾಗದ ಓದು ವ್ಯರ್ಥ.. ನೀವು ಎಷ್ಟೇ ಪ್ರಯತ್ನ ಪಟ್ಟು ಅರ್ಥವಾಗದಿದ್ದರೆ ಸಂಬಂಧಿಸಿದ ಶಿಕ್ಷಕರಿಂದ ಪರಿಹಾರ ಕಂಡುಕೊಳ್ಳಲೇಬೇಕು..
iii) Q-Questioning the unit
ವಿಷಯವನ್ನು ಅರ್ಥೈಸಿಕೊಂಡು ಓದಿದ ನಂತರ ಆ ವಿಷಯಾಂಶಕ್ಕೆ ಸಂಬಂಧಿಸಿದ ನಮಗೆ ನಾವೇ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು ಮತ್ತು ಉತ್ತರಿಸಬೇಕು ವಿವಿಧ ಕೋನದಿಂದ ಪ್ರಶ್ನೆಗಳನ್ನು ಹಾಕುವುದರಿಂದ ಆ ವಿಷಯಾಂಶ ಮತ್ತಷ್ಟು ಮನನವಾಗುತ್ತದೆ.. ನೋಡದೆ ಉತ್ತರಗಳನ್ನು ನೀಡುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ...
iv)W-Writing
ನೀವು ಸರ್ವೆ ಮಾಡಿಕೊಂಡ, ಅರ್ಥೈಸಿ ಓದಿಕೊಂಡ, ಪ್ರಶ್ನೋತ್ತರಗಳನ್ನು ಮಾಡಿಕೊಂಡ ವಿಷಯಾಂಶವನ್ನು ಪ್ರಮುಖ ಅಂಶಗಳನ್ನು ಏನು ನೋಡದೆ ಬರೆದು ತೆಗೆಯಬೇಕು.. ಒಂದು ವೇಳೆ ಬರೆಯುವಾಗ ಏನಾದರೂ ಮಿಸ್ ಆಗಿದ್ದರೆ ಪುನಃ ಅವಲೋಕನ ಮಾಡಿ ಸರಿಪಡಿಸಿಕೊಳ್ಳಬೇಕು.. ಮನನ ಮಾಡಿಕೊಂಡು ಸ್ವತಃ ಬರೆಯುವುದು 10 ಬಾರಿ ಓದುವುದಕ್ಕೆ ಸಮ ಮತ್ತು ದೀರ್ಘ ಕಾಲ ನೆನಪಿಡಲು ಸಹಾಯಕ ಆಗುತ್ತದೆ..
ಈ ಕೆಳಗಿನ ಸಾಂಪ್ರದಾಯಕ ಓದು ಸಹ ನಮಗೆ ಸಹಾಯಕವಾಗುತ್ತದೆ
ಗಟ್ಟಿಯಾಗಿ ಓದುವುದು, ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಆ ವಿಷಯ ಓದಿದ ನಂತರ ಸ್ವತಃ ಓದಿದ ಎಲ್ಲಾ ಮುಖ್ಯಾಂಶಗಳನ್ನು ಬರೆಯುವ ಪ್ರಯತ್ನ ಮಾಡಿರಿ..
ನೆನಪಿರಲಿ
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಉದಾಹರಣೆಗೆ ವಿಜ್ಞಾನದ ಕರೋಕೆ ಹಾಡುಗಳನ್ನು ಮತ್ತು ವಿಜ್ಞಾನ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಬಹುದು. ಮಾಯಾ ಚೌಕ, ಪ್ರಮೇಯಗಳು ಭಾರತ ನಕಾಶೆ, ಕನ್ನಡ ಇಂಗ್ಲಿಷ್ ಹಿಂದಿ ಕಂಠಪಾಠ ಪದ್ಯಗಳು
ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ... ಏಕೆಂದರೆ Change of work is rest..
ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ (ವಿಜ್ಞಾನ ಗಣಿತ ಇಂಗ್ಲಿಷ್) ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.
ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಅದನ್ನು ನೋಟ್ ಬುಕ್ ದಲ್ಲಾದರೂ ಮಾಡಿರಿ ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.
ನೆನಪಿಡಲು ಕಷ್ಟವಾಗುವಂತಹ ಅಂಶಗಳನ್ನು ನೀವು ಓದುವ ಗೋಡೆಗಳ ಮೇಲೆ ಅಂಟಿಸಿ, ಸಾಧ್ಯವಾದರೆ ನೆನಪಿಡುವ ತಂತ್ರಗಳನ್ನು ಉದಾಹರಣೆಗೆ ಸನಿದೂಪಿ (ಸಮೀಪ ದೃಷ್ಟಿ ದೋಷ ಸರಿಪಡಿಸಲು ನಿಮ್ನ ಮಸೂರವನ್ನು ದೂರದೃಷ್ಟಿ ದೋಷವನ್ನು ಸರಿಪಡಿಸಲು ನಿಮ್ನ ಮಸೂರವನ್ನು ಬಳಸುವರು) ಅದಕ್ಕೆ ಅಳವಡಿಸಿ.
ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.
ಪ್ರತಿ ವಿಷಯದಲ್ಲಿ ಬರುವ ಕಠಿಣಾಂಶ (Hot spots) ಗಳನ್ನು ಪಟ್ಟಿ ಮಾಡಿ ಶಿಕ್ಷಕರ ಸಹಾಯದಿಂದ ಪರಿಹಾರ ಕಂಡುಕೊಳ್ಳಿರಿ..
ಮುಂದುವರೆಯುವುದು...
-Shankargouda Basapur
No comments:
Post a Comment